ಮಡಿಕೇರಿ, ಅ. 27: ಕೊಡಗು ಜಿಲ್ಲೆಯಲ್ಲಿ 2018-19ನೇ ಸಾಲಿನ ಮುಖ್ಯಮಂತ್ರಿಯವರ ಉದ್ಯೋಗ ಸೃಜನ ಯೋಜನೆ (ಸಿ.ಎಂ.ಇ.ಜಿ.ಪಿ) ಯಡಿ ಗ್ರಾಮೀಣ ಪ್ರದೇಶದ ಸಾಮಾನ್ಯ ವರ್ಗದ 18 ರಿಂದ 35 ವರ್ಷ ವಯೋಮಿತಿಯ ಹಾಗೂ ವಿಶೇಷ ವರ್ಗದ (ಎಸ್.ಸಿ/ಎಸ್.ಟಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ವಿಕಲಚೇತನರು, ಮಾಜಿ ಸೈನಿಕರು ಮತ್ತು ಮಹಿಳೆಯರು) 18 ರಿಂದ 45 ವರ್ಷ ವಯೋಮಿತಿ ಹೊಂದಿದ ನಿರುದ್ಯೋಗಿ ಯುವಕ, ಯುವತಿಯರಿಗೆ ಕಿರು ಕೈಗಾರಿಕಾ/ಸೇವಾ ಘಟಕ ಸ್ಥಾಪಿಸುವ ಮೂಲಕ ಸ್ವ-ಉದ್ಯೋಗ ಕೈಗೊಳ್ಳುವವರಿಗೆ ಬ್ಯಾಂಕಿನಿಂದ ಗರಿಷ್ಠ ರೂ. 10 ಲಕ್ಷಗಳವರೆಗಿನ ಸಹಾಯಧನ ಕಲ್ಪಿಸಲಾಗುತ್ತದೆ. ಯೋಜನಾ ವೆಚ್ಚಕ್ಕೆ ಕನಿಷ್ಟ8ನೇ ತರಗತಿಯಲ್ಲಿ ತೇರ್ಗಡೆಯಾಗಿರಬೇಕು. ಹಾಗೂ ರೂ. 5 ಲಕ್ಷಗಳವರೆಗಿನ ಯೋಜನಾ ವೆಚ್ಚಕ್ಕೆ ಯಾವದೇ ವಿದ್ಯಾರ್ಹತೆಯ ಅವಶ್ಯಕತೆ ಇರುವದಿಲ್ಲ. ಈ ಯೋಜನೆಯಡಿ ಗರಿಷ್ಠ ಶೇ. 25 ರಿಂದ ಶೇ. 35ರ ವರೆಗೆ ಸಹಾಯಧನವನ್ನು ನೀಡಲಾಗುವದು ಹಾಗೂ ಅರ್ಜಿ ಸಲ್ಲಿಸಲು ಯಾವದೇ ಆದಾಯದ ಮಿತಿ ಇರುವದಿಲ್ಲ.

ಈ ಸೌಲಭ್ಯ ಪಡೆಯಲು ಆನ್‍ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ. ವೆಬ್‍ಸೈಟ್ ವಿಳಾಸ hಣಣಠಿ://ಛಿmegಠಿ.ಞಚಿಡಿ.ಟಿiಛಿ.iಟಿ ಆಗಿರುತ್ತದೆ. ಆನ್‍ಲೈನ್ ಅರ್ಜಿಯನ್ನು ಸೂಕ್ತ ದಾಖಲಾತಿಗಳೊಂದಿಗೆ ದ್ವಿಪ್ರತಿಯಲ್ಲಿ ನವೆಂಬರ್ 13 ರೊಳಗೆ ಸಲ್ಲಿಸುವದು. ಅಪೂರ್ಣವಾಗಿ ಭರ್ತಿ ಮಾಡಿದ ಹಾಗೂ ದಾಖಲೆಗಳನ್ನು ನೀಡದೇ ಇರುವ ಅರ್ಜಿಗಳನ್ನು ಪರಿಗಣಿಸಲಾಗುವದಿಲ್ಲ. ಹೆಚ್ಚಿನ ವಿವರಗಳಿಗೆ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಕೊಡಗು ಜಿಲ್ಲೆ, ಮಡಿಕೇರಿ ಇವರ ಕಚೇರಿ ಹಾಗೂ ದೂ.ಸಂ. 08272-228431 ನ್ನು ಸಂಪರ್ಕಿಸಬಹುದು.