ಸೋಮವಾರಪೇಟೆ, ಅ. 27: ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವದು ವಿದ್ಯಾಸಂಸ್ಥೆಗಳ ಧ್ಯೇಯವಾಗಬೇಕು ಎಂದು ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಿಸಿದರು.ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ ಸಮೀಪದ ಐಗೂರಿನ ಸ್ಪ್ರಿಂಗ್ ವ್ಯಾಲಿ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ "ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರುಗಳಿಗೆ ಆಡಳಿತಾತ್ಮಕ ವಾರ್ಷಿಕ ತರಬೇತಿ ಕಾರ್ಯಾ ಗಾರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಆಹಂಕಾರಿ ನಾಯಕ ಆದರ್ಶ ಗಳನ್ನು ಮಣ್ಣುಪಾಲು ಮಾಡುತ್ತಾನೆ. ಪ್ರತಿಯೊಬ್ಬರ ಸಲಹೆಗಳನ್ನು ಸ್ವೀಕರಿಸಿ, ಸಂಸ್ಥೆಯನ್ನು ಸುಗಮವಾಗಿ ನಡೆಸುವವನು ನಿಜವಾದ ನಾಯಕ ನಾಗುತ್ತಾನೆ. ಜ್ಞಾನ, ತಾಳ್ಮೆ, ಸಹನೆ, ಬುದ್ಧಿವಂತಿಕೆ ಇಲ್ಲದ ವ್ಯಕ್ತಿಗೆ ಅಭದ್ರತೆ ಕಾಡುತ್ತದೆ. ಅಂತಹವರು ಬೇg Éಯವರಿಗೆ ಭಯವನ್ನು ಹುಟ್ಟಿಸುತ್ತಾರೆ. ಈ ಸಂದರ್ಭಗಳಲ್ಲಿ ಸಾಧಕರ ಆದರ್ಶಗಳನ್ನು ಮೈಗೂಡಿಸಿ ಕೊಂಡು ನಾಯಕನಾಗಿ ಬೆಳೆಯಬೇಕು ಎಂದರು.

ಒಳ್ಳೆಯ ವ್ಯಕ್ತಿ ಕೆಟ್ಟ ವ್ಯಕ್ತಿಯಾಗಿ ಪರಿವರ್ತನೆಯಾದರೆ ಸಮಾಜಕ್ಕೆ ಕೆಡುಕಿದೆ. ಸಮಾಜದಲ್ಲಿ ಗೌರವ ಸಂಪಾದಿಸಬೇಕಾದರೆ ತಮ್ಮ ದೌರ್ಬಲ್ಯಗಳನ್ನು ತ್ಯಜಿಸಬೇಕು. ಒಳ್ಳೆಯತನವನ್ನು ಟೀಕೆ ಮಾಡುವವರು ಇರುತ್ತಾರೆ. ನಿಜವಾದ ನಾಯಕತ್ವ ಗುಣವುಳ್ಳವನು ಮೌನದಲ್ಲೇ ಉತ್ತರ ನೀಡಬೇಕು ಎಂದು ಕಿವಿಮಾತು ಹೇಳಿದರು.

ವೇದಿಕೆಯಲ್ಲಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ಚಿಕ್ಕಮಗಳೂರು ಶಾಖಾ ಮಠದ ಶ್ರೀ ಶಿವಪುತ್ರ ಸ್ವಾಮೀಜಿ, ಶೃಂಗೇರಿ ಮಠದ ಶ್ರೀ ಗುರುನಾಥ ಸ್ವಾಮೀಜಿ, ಮಹಾಸಂಸ್ಥಾನ ಮಠದ ಆಡಳಿತಾಧಿಕಾರಿ ಡಾ.ಎ.ಟಿ. ಶಿವರಾಮ್, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಂ.ಚಂಗಪ್ಪ ಉಪಸ್ಥಿತರಿದ್ದರು.

ಮಹಾಸಂಸ್ಥಾನಕ್ಕೆ ಒಳಪಡುವ ಪದವಿಪೂರ್ವ ಕಾಲೇಜಿನ 60 ಪ್ರಾಂಶುಪಾಲರುಗಳು ಕಾರ್ಯಾ ಗಾರದಲ್ಲಿ ಪಾಲ್ಗೊಂಡಿದ್ದರು.