ಮಡಿಕೇರಿ, ಅ. 27: ಕೊಡವ ಮಕ್ಕಡ ಕೂಟ ಕೊಡವ ಸಾಹಿತ್ಯಕ್ಕೆ ಹೆಚ್ಚು ಆದ್ಯತೆ ನೀಡುವ ನಿಟ್ಟಿನಲ್ಲಿ ಹಲವು ಪುಸ್ತಕಗಳನ್ನು ಪ್ರಕಟಿಸುತ್ತಾ ಬರುತ್ತಿದೆ. ಈಗಾಗಲೇ 18 ಪುಸ್ತಕಗಳನ್ನು ಪ್ರಕಟಿಸಿರುವ ಕೂಟವು ಇದೀಗ ಯುವ ಬರಹಗಾರ ಮೂಕೊಂಡ ನಿತಿನ್ ಕುಶಾಲಪ್ಪ ಬರೆದಿರುವ ‘1785 ಕೂರ್ಗ್’ (ಟಿಪ್ಪುಸ್ ಡೈರಿ ಇನ್ ಕೊಡಗು) ಹಾಗೂ ‘ಕೊಡಗು ಪ್ರಿನ್ಸಿಪಾಲಿಟಿ, ಬ್ರಿಟೀಷ್ ಎಂಪೆರ್’ಪುಸ್ತಕವನ್ನು ತಾ. 30ರಂದು ಬಿಡುಗಡೆ ಮಾಡಲಿದೆ.

ಕೊಡವ ಮಕ್ಕಡ ಕೂಟ ಹಾಗೂ ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟ ಮಡಿಕೇರಿಯ ಜಂಟಿ ಆಶ್ರಯಯದಲ್ಲಿ ಅ.30ರ ಮಂಗಳವಾರ ಮಧ್ಯಾಹ್ನ 2.30ಕ್ಕೆ ನಗರದ ಪತ್ರಿಕಾ ಭವನದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಕೊಡವ ಮಕ್ಕಡ ಕೂಟದ ಅಧ್ಯಕ್ಷ ಮಡಿಕೇರಿ, ಅ. 27: ಕೊಡವ ಮಕ್ಕಡ ಕೂಟ ಕೊಡವ ಸಾಹಿತ್ಯಕ್ಕೆ ಹೆಚ್ಚು ಆದ್ಯತೆ ನೀಡುವ ನಿಟ್ಟಿನಲ್ಲಿ ಹಲವು ಪುಸ್ತಕಗಳನ್ನು ಪ್ರಕಟಿಸುತ್ತಾ ಬರುತ್ತಿದೆ. ಈಗಾಗಲೇ 18 ಪುಸ್ತಕಗಳನ್ನು ಪ್ರಕಟಿಸಿರುವ ಕೂಟವು ಇದೀಗ ಯುವ ಬರಹಗಾರ ಮೂಕೊಂಡ ನಿತಿನ್ ಕುಶಾಲಪ್ಪ ಬರೆದಿರುವ ‘1785 ಕೂರ್ಗ್’ (ಟಿಪ್ಪುಸ್ ಡೈರಿ ಇನ್ ಕೊಡಗು) ಹಾಗೂ ‘ಕೊಡಗು ಪ್ರಿನ್ಸಿಪಾಲಿಟಿ, ಬ್ರಿಟೀಷ್ ಎಂಪೆರ್’ಪುಸ್ತಕವನ್ನು ತಾ. 30ರಂದು ಬಿಡುಗಡೆ ಮಾಡಲಿದೆ.

ಕೊಡವ ಮಕ್ಕಡ ಕೂಟ ಹಾಗೂ ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟ ಮಡಿಕೇರಿಯ ಜಂಟಿ ಆಶ್ರಯಯದಲ್ಲಿ ಅ.30ರ ಮಂಗಳವಾರ ಮಧ್ಯಾಹ್ನ 2.30ಕ್ಕೆ ನಗರದ ಪತ್ರಿಕಾ ಭವನದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಕೊಡವ ಮಕ್ಕಡ ಕೂಟದ ಅಧ್ಯಕ್ಷ ಕೊಡವ ಆಚಾರ-ವಿಚಾರ ಹಾಗೂ ಸಂಸ್ಕøತಿಯನ್ನು ಬೆಳೆಸುವ ನಿಟ್ಟಿನಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದು, ಇದರ ಭಾಗವಾದ ಸಾಹಿತ್ಯ ಕ್ಷೇತ್ರದಲ್ಲಿ ಈಗಾಗಲೇ 18 ಪುಸ್ತಕಗಳನ್ನು ಬಿಡುಗಡೆಗೊಳಿಸಿದ್ದು, ಈ ಪುಸ್ತಕಗಳು ಅಧ್ಯಯನ ಗ್ರಂಥದಂತವಾಗಿ ರೂಪುಗೊಂಡಿದೆ. ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ, ಕೊಡಗಿನ ಗಾಂಧಿ ಪಂದ್ಯಂಡ ಬೆಳ್ಯಪ್ಪ, ಮಾವೀರ ಅಚ್ಚುನಾಯಕ, ದೀವಾನ್ ಚೆಪ್ಪುಡಿರ ಪೊನ್ನಪ್ಪ, ಕೊಡವ ಕ್ರೀಡಾ ಕಲಿಗಳು ಇಂತಹ ಸಂಗ್ರಹಯೋಗ್ಯವಾದಂತಹ ಪುಸ್ತಕಗಳನ್ನು ಪ್ರಕಟಿಸುತ್ತಾ ಬರುತ್ತಿದ್ದು, ಸಾಹಿತ್ಯ ಕ್ಷೇತ್ರಕ್ಕೆ ಕೂಟವು ತನ್ನದೇ ಆದ ಕೊಡುಗೆ ನೀಡಿದೆ.

ಕೊಡವ ಮಕ್ಕಡ ಕೂಟವು ಕೊಡವ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೊಡವ ಭಾಷೆಯಲ್ಲಿ ಪವಳಸಾಲ್, ಚಾಯಿ, ಕೊಡವಾಮೆಕ್ ಬಂದಲಕೆ, ಬಲ್ಲಾದಪಳಮೆ, ಮಾವೀರ ಅಚ್ಚು ನಾಯಕ, ಕುಂಞÂ ಪುಟ್ಟ್‍ನಲ್ಲಿ, ಕೊಡವ ಭಾಗವತ, ಕೊಡವ ತಕ್ಕ್‍ಲ್ ವಾಲ್ಮೀಕಿ ರಾಮಾಯಣ ಹಾಗೂ ಕೂಟದಿಂದ ಕಳೆದ ಆರು ವರ್ಷದಿಂದ ನಡೆಸಿಕೊಂಡು ಬರುತ್ತಿರುವ 12 ದಿನದ ಆಟ್-ಪಾಟ್ ಪಡಿಪು ಕಾರ್ಯಕ್ರಮಕ್ಕೆ ಮಕ್ಕಳಿಗೆ ಎಲ್ಲವನ್ನು ಕಲಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಪ್ರಯೋಜನವಾಗುವಂಹ ಆಟ್ ಪಾಟ್ ಪಡಿಪು ಎಂಬ ಸಂಗ್ರಹ ಪುಸ್ತಕವನ್ನು ಬಿಡುಗಡೆಗೊಳಿಸಿದೆ.

ಕೊಡವ ಸಾಧಕರ ಮಾಹಿತಿ ಒಳಗೊಂಡ ಪುಸ್ತಕಗಳನ್ನು ಎಲ್ಲರಿಗೂ ಪರಿಚಯಿಸುವ ನಿಟ್ಟಿನಲ್ಲಿ ಕನ್ನಡದಲ್ಲಿ ಹಲವು ಪುಸ್ತಕಗಳನ್ನು ಪ್ರಕಟಿಸಿದೆ. ಅಲ್ಲದೆ ಇದೀಗ ಪ್ರಥಮ ಬಾರಿಗೆ ಕೊಡವರ ಸಾಧನೆಯನ್ನು ವಿಶ್ವ ಮಟ್ಟದಲ್ಲಿ ಪರಿಚಯಿಸುವ ನಿಟ್ಟಿನಲ್ಲಿ ಹೊಸ ಪ್ರಯತ್ನವಾಗಿ ಪ್ರಪ್ರಥಮ ಬಾರಿಗೆ ಇಂಗ್ಲಿಷ್ ಭಾಷೆಯಲ್ಲಿ ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಲಾಗುತ್ತಿದೆ.

ಮೂಕೋಂಡ ನಿತಿನ್ ಕುಶಾಲಪ್ಪ ಬರೆದಿರುವ 1785 ಕೂರ್ಗ್ (ಟಿಪ್ಪುಸ್ ಡೈರಿ ಇನ್ ಕೊಡಗು) ಪುಸ್ತಕದಲ್ಲಿ 1785ರಲ್ಲಿ ಟಿಪ್ಪು ಕೊಡಗಿನ ತಲಕಾವೇರಿ ಸಮೀಪದ ದೇವಟ್ಟಿಪರಂಬಿಗೆ ಬಂದು ಅಲ್ಲಿ ಅನೇಕ ಕೊಡವರನ್ನು ಕೊಂದು ಮತ್ತು ಅನೇಕರನ್ನು ಕೈದಿಗಳನ್ನಾಗಿ ಕರೆದುಕೊಂಡು ಶ್ರೀರಂಗಪಟ್ಟಣದಲ್ಲಿ ಇಸ್ಲಾಂಗೆ ಮತಾಂತರ ಮಾಡಿರುವ ಬಗ್ಗೆ ಪುಸ್ತಕದಲ್ಲಿ ಸವಿವರವಾಗಿ ಮಾಹಿತಿ ನೀಡಲಾಗಿದೆ. ಕೊಡಗು ಪ್ರಿನ್ಸಿಪಾಲಿಟಿ, ಬ್ರಿಟೀಷ್ ಎಂಪೆರ್ ಪುಸ್ತಕದಲ್ಲಿ ಬ್ರಿಟೀಷರ ಅವಧಿಯಲ್ಲಿ ದ್ದಂತಹ ವೀರ ಕೊಡವರ ಸಾಹಸ ಹಾಗೂ ಅವರ ಮಾಹಿತಿಯನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ.

- ಕರುಣ್ ಕಾಳಯ್ಯ