ಮಡಿಕೇರಿ, ಅ. 27: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಸಂಯುಕ್ತಾಶ್ರಯದಲ್ಲಿ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸಭಾಂಗಣ, ಮಡಿಕೇರಿ ಇಲ್ಲಿ ತುಲಾ ಸಂಕ್ರಮಣ ಪೂಜೆ, ಪರಿಕರ ವಿತರಣೆ ಮತ್ತು ಉಮರಬ್ಬ ಇವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿಯ ಸದಸ್ಯ ಅಜ್ಜಮಾಡ ಪಿ. ಕುಶಾಲಪ್ಪ ಅವರು ವಹಿಸಿದ್ದರು. ಕಾರ್ಯಕ್ರಮವನ್ನು ದೇವಿ ಕಾವೇರಿಯ ಛಾಯಾಚಿತ್ರಕ್ಕೆ ಪೂಜೆ ಮಾಡುವದರ ಮೂಲಕ ಪ್ರಾರಂಭಿಸಲಾಯಿತು.
ಕಾವೇರಿ ತೀರ್ಥ ಪೂಜೆಯ ವಿಶೇಷತೆಯನ್ನು ಅಕಾಡೆಮಿ ಸದಸ್ಯ ಐತಿಚಂಡ ರಮೇಶ್ ಉತ್ತಪ್ಪ ಅವರು ಎಲ್ಲರಿಗೂ ತಿಳಿಸಿದರು. ಆ ನಂತರ ನಡೆದ ಕಾರ್ಯಕ್ರಮದಲ್ಲಿ ಅಕಾಡೆಮಿಯ ರಿಜಿಸ್ಟ್ರಾರ್ ಆಗಿದ್ದ ಉಮರಬ್ಬ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು ಶ್ರೀ ಮಹಾದೇವರ ದೇವಸ್ಥಾನ ಸಮಿತಿ, ತೂಚಮಕೇರಿ, ತೋರೆರ ಕುಟುಂಬದ ಸಂಘ, ಕಡಿಯತ್ತೂರು, ಮಾಳೇಟಿರ ಕುಟುಂಬಸ್ಥರು, ಕೆದಮುಳ್ಳೂರು, ಐತಿಚಂಡ ಕುಟುಂಬ ಅಭಿವೃದ್ಧಿ ಸಮಿತಿ, ಕರಡ, ಶ್ರೀ ಮಹಾದೇವ ಯುವಕ ಸಂಘ, ಹುದಿಕೇರಿ, ಶ್ರೀ ಕುಟ್ಟಿಚಾತ ದೇವಸ್ಥಾನ ಅಭಿವೃದ್ಧಿ ಸಮಿತಿ, ಕಿರುಗೂರು, ಮತ್ತೂರು ಮತ್ತು ಬೀಟುವಾಡ, ಶ್ರೀ ಕಾಟೀಳ್ಳೆಶ್ವರ ದೇವಸ್ಥಾನ ಸಮಿತಿ, ಮುಕ್ಕೋಡ್ಲು ಗ್ರಾಮ, ಕುಂದಚಪ್ಪ ಯುವಕ ಸಂಘ, ಕುಟಂದಿ ಗ್ರಾಮ, ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಮಂದತವ್ವ ಕೋಲ್ಮಂದ್, ಸುಳ್ಳಿಮಾಡ ಐನ್ಮನೆ, ಬೆಕ್ಕೆಸೊಡ್ಲೂರು ಇವರುಗಳಿಗೆ ದುಡಿಯನ್ನು ವಿತರಿಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಅಕಾಡೆಮಿ ಸದಸ್ಯ ನಾಳಿಯಮ್ಮಂಡ ಉಮೇಶ್ ಕೇಚಮ್ಮಯ್ಯ ನಿರ್ವಹಿಸಿದರು, ಅಕಾಡೆಮಿ ಸದಸ್ಯ ತೋರೆರ ಮುದ್ದಯ್ಯ ಸ್ವಾಗತಿಸಿದರು. ಆಪಟ್ಟೀರ ಟಾಟು ಮೊಣ್ಣಪ್ಪ ವಂದಿಸಿದರು ಎಂದು ನೂತನ ರಿಜಿಸ್ಟ್ರಾರ್ ಚಂದ್ರಹಾಸ ರೈ ತಿಳಿಸಿದ್ದಾರೆ.