ನಾಪೆÉÇೀಕ್ಲು, ಅ. 27: ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಗಾಂಜಾ ವ್ಯಸನಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಭಯಭೀತರಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಪೆÇಲೀಸರು ಸೂಕ್ತ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ನಾಪೆÇೀಕ್ಲು ಪೆÇಲೀಸ್ ಠಾಣಾ ಎ.ಎಸ್.ಐ. ದೇವರಾಜ್ ಅವರಿಗೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ ಹದಿಹರೆಯದ ಯುವಕರು ಗಾಂಜಾ ವ್ಯಸನಿಗಳಾಗಿದ್ದು, ದ್ವಿಚಕ್ರ ವಾಹನದಲ್ಲಿ (ಮೊದಲ ಪುಟದಿಂದ) ಎರಡು ಮೂರು ಜನ ವೇಗವಾಗಿ ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ಪಾದಚಾರಿಗಳಿಗೆ ಹೆಚ್ಚಿನ ತೊಂದರೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಸಣ್ಣ ಪುಟ್ಟ ಅಪಘಾತಗಳು ಸಂಭವಿಸಿವೆ. 10-12 ವರ್ಷ ಪ್ರಾಯದ ಮಕ್ಕಳು ಕೂಡ ದ್ವಿಚಕ್ರ ವಾಹನದಲ್ಲಿ ರಾಜಾರೋಶವಾಗಿ ಸಂಚರಿಸುತ್ತಿರುವದು ಕಂಡು ಬರುತ್ತಿದೆ. ಈ ಬಗ್ಗೆ ಪೆÇಲೀಸ್ ಠಾಣಾಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕೆಂದು ಹೇಳಿದ ಅವರು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳಿಗೆ ಇದಕ್ಕೆ ಸಂಬಂಧಿಸಿದಂತೆ ಮನವಿ ಪತ್ರ ಸಲ್ಲಿಸಲಾಗುವದು ಎಂದು ತಿಳಿಸಿದರು.ಈ ಸಂದರ್ಭ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಪಾಡಿಯಮ್ಮಂಡ ಮನು ಮಹೇಶ್, ಕಂಗಾಂಡ ಜಾಲಿ ಪೂವಪ್ಪ, ಕೇಟೋಳಿರ ಹರೀಶ್ ಪೂವಯ್ಯ, ಕೇಲೇಟಿರ ಸಾಬು ನಾಣಯ್ಯ, ನೆರೆಯಂಡಮ್ಮಂಡ ಉಮಾ ಪ್ರಭು, ಬಿಳಿಯಂಡ್ರ ರತೀಶ್ ಕುಮಾರ್, ಬಾಳೆಯಡ ಮೇದಪ್ಪ, ನಾಯಕಂಡ ದೀಪು ಚಂಗಪ್ಪ, ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಬಿ.ಎಂ.ಪ್ರತೀಪ್, ಕಂಗಾಂಡ ಭೀಮಯ್ಯ, ಮತ್ತಿತರರು ಇದ್ದರು.