ಪೊನ್ನಂಪೇಟೆ, ಅ. 27: ಇಂದು ಅತಿ ಹೆಚ್ಚು ಪರಿಸರ ಮಾಲಿನ್ಯ ಯುವ ಜನತೆಯಿಂದಲೇ ಆಗುತ್ತಿದೆ. ಯುವ ಜನರು ತಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳದಿದ್ದರೆ ಸ್ವಚ್ಛ ಭಾರತದ ಕನಸ್ಸನ್ನು ನನಸು ಮಾಡಲು ಸಾಧ್ಯವಿಲ್ಲ ಎಂದು ವನಿತ್ಕುಮಾರ್ ಹೇಳಿದರು.
ಪೊನ್ನಂಪೇಟೆ ಸಮೀಪ ನಡಿಕೇರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಗೋಣಿಕೊಪ್ಪಲು ಕಾವೇರಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದಲ್ಲಿ ಎನ್ಎಸ್ಎಸ್ ಅಧಿಕಾರಿ ಎಂ.ಎನ್. ವನಿತ್ಕುಮಾರ್ ‘ಸ್ವಚ್ಛ ಭಾರತ ಅಭಿಯಾನದಲ್ಲಿ ಯುವಜನತೆಯ ಪಾತ್ರ’ ಎಂಬ ವಿಷಯದ ಬಗ್ಗೆ ಮಾತನಾಡಿದರು.
ಪೊನ್ನಂಪೇಟೆ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಐನಂಡ ಕೆ. ಮಂದಣ್ಣ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಗಳಾದ ಚೀರಂಡ ಕಂದ ಸುಬ್ಬಯ್ಯ, ಮುಗುಟಗೇರಿ ಈಶ್ವರ ಸ್ವ ಸಹಾಯ ಸಂಘದ ಅಧ್ಯಕ್ಷೆ ಮಲ್ಚೀರ ನಳಿನಿ, ನಡಿಕೇರಿ ಶಾಲೆಯ ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಕಳ್ಳಿಚಂಡ ಎಸ್. ಮಂಜು, ಎಸ್.ಡಿ.ಎಂ.ಸಿ. ಸದಸ್ಯ ಕಿರುಂದಂಡ ಸಿ. ಉಮೇಶ್, ಶಾಲೆಯ ಸಹ ಶಿಕ್ಷಕಿ ಕೆ.ಸಿ. ಸೌಮ್ಯ, ಎನ್ಎಸ್ಎಸ್ ಯೋಜನಾಧಿಕಾರಿ ಎಸ್.ಆರ್. ತಿರುಮಲಯ್ಯ, ಕುಸುಮ್ ಇನ್ನಿತರರು ಹಾಜರಿದ್ದರು.
ಸಂಜೆಯ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಚೇಂದಿರ ನಿರ್ಮಲ ಬೋಪಣ್ಣ ಹಾಗೂ ಪಿ.ಟಿ. ಶ್ರೀನಿವಾಸ್ ಕೊಡವ ಗೀತ ಗಾಯನ ನಡೆಸಿಕೊಟ್ಟರು. ನಂತರ ಶಿಬಿರಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಮೂಡಿಬಂದವು.