ನಾಪೆÇೀಕ್ಲು, ಅ. 27: ಇಲ್ಲಿ ಪ್ರತಿನಿತ್ಯ ಜನರು ಸರತಿ ಸಾಲಿನಲ್ಲಿ ಆಹಾರ ಸಾಮಗ್ರಿಗಳಿಗಾಗಿ ನಿಂತು ಬಸವಳಿಯುತ್ತಿದ್ದಾರೆ. ಪಡಿತರ ಪಡೆಯಲು ಬೆರಳಚ್ಚು ಪಡೆಯಬೇಕೆಂಬ ಸುತ್ತೋಲೆ ಜನ ಸಾಮಾನ್ಯರಿಗೆ ತೊಡಕಾಗಿದೆ. ಪ್ರತಿನಿತ್ಯ ಸರ್ವರ್ ಡೌನ್ ಎಂಬ ಕಾರಣದಿಂದ ಗ್ರಾಮೀಣ ಭಾಗದ ಜನ ಸಮಸ್ಯೆ ಎದುರಿಸುವಂತಾಗಿದೆ.
ನಾಪೆÇೀಕ್ಲು ನಾಡು ಗ್ರಾಹಕರ ಸೊಸೈಟಿಯು ಬಸ್ ನಿಲ್ದಾಣದ ಬಳಿ ಇದ್ದು, ಗ್ರಾಮೀಣ ಪ್ರದೇಶಗಳಿಂದ ಬರುವ ಕೂಲಿ ಕಾರ್ಮಿಕರು, ಜನಸಾಮಾನ್ಯರು ಪರದಾಡು ವಂತಾಗಿದೆ.
ನಾಪೆÇೀಕ್ಲು ವ್ಯಾಪ್ತಿಯ ಕಲ್ಲುಮೊಟ್ಟೆ, ಇಂದಿರಾನಗರ, ಚೆರಿಯಪರಂಬು ಮತ್ತಿತರ ಭಾಗಗಳಿಂದ ಕೂಲಿ ಕೆಲಸ ಬಿಟ್ಟು ಬರುವ ಜನರು ನೆಟ್ವರ್ಕ್ ಸಮಸ್ಯೆಯಿಂದ ಸಮಯ, ಹಣ ವ್ಯರ್ಥವಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಡವರಿಗೆ ಅನುಕೂಲವಾಗಲಿ ಎಂದು ಸರಕಾರ ಪಡಿತರ ವ್ಯವಸ್ಥೆ ಕಲ್ಪಿಸಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಅಕ್ಟೋಬರ್ ತಿಂಗಳಿನಿಂದ ಗ್ರಾಹಕರ ಬೆರಳಚ್ಚು ಪಡೆದು ಆಹಾರ ಧಾನ್ಯ ವಿತರಿಸುವಂತೆ ಆಹಾರ ಇಲಾಖೆ ಆದೇಶಿಸಿದೆ. ಬಯೋಮೆಟ್ರಿಕ್ ವ್ಯವಸ್ಥೆಯಿಂದ ತೊಂದರೆ ಆಗುತ್ತಿದೆ. ಸ್ಥಳೀಯ ಸಿಬ್ಬಂದಿ ಸರಕಾರದ ನಿಯಮಗಳನ್ನು ಪಾಲಿಸಬೇಕಾಗಿದೆ. ಅದರೊಂದಿಗೆ ಸಾರ್ವಜನಿಕರ ಆಕ್ರೋಶಕ್ಕೂ ಒಳಗಾಗಬೇಕಾಗಿದೆ.
ಈ ವ್ಯಾಪ್ತಿಯಲ್ಲಿ ಸುಮಾರು 400 ಬಿಪಿಎಲ್ ಕಾರ್ಡು ದಾರರಿದ್ದಾರೆ. ವಯೋವೃದ್ಧರಿಗೂ ತೊಂದರೆ ಆಗುತ್ತಿದೆ. ಜನರಿಗಾಗುತ್ತಿರುವ ತೊಂದರೆಯನ್ನು ಮನಗಂಡು ಮೇಲಧಿಕಾರಿಗಳು ಗ್ರಾಮೀಣ ಪ್ರದೇಶದಲ್ಲಿ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಕಡ್ಡಾಯ ಮಾಡದೇ ಹಿಂದಿನ ವ್ಯವಸ್ಥೆಯ ಮೂಲಕ ಪಡಿತರ ವಿತರಿಸಲು ಕ್ರಮಕೈಗೊಳ್ಳಬೇಕು ಎಂದು ಆರ್ಟಿಐ ಕಾರ್ಯಕರ್ತ ಚೆರಿಯಪರಂಬುವಿನ ಹ್ಯಾರಿಸ್ ಒತ್ತಾಯಿಸಿದ್ದಾರೆ.