ಮಡಿಕೇರಿ, ಅ. 27: ಕೊಡಗು ಜಿಲ್ಲೆಯ ಸೋಮವಾರಪೇಟೆ, ಕುಶಾಲನಗರ, ವೀರಾಜಪೇಟೆ ಈ ಮೂರು ಪಟ್ಟಣ ಪಂಚಾಯಿತಿಗಳಿಗೆ ತಾ. 28 ರಂದು (ಇಂದು) ಮತದಾನ ದೊಂದಿಗೆ, ಕಣದಲ್ಲಿರುವ ಒಟ್ಟು 145 ಮಂದಿ ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಬರೆಯಲಿದ್ದಾರೆ.ಮೂರು ಪಟ್ಟಣ ಪಂಚಾಯಿತಿ ಗಳಲ್ಲಿ ಬಿಜೆಪಿ ಏಕಾಂಗಿ ಸ್ಪರ್ಧೆ ಯಲ್ಲಿದ್ದರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಸೋಮವಾರಪೇಟೆ ಮತ್ತು ವೀರಾಜಪೇಟೆಗಳಲ್ಲಿ ಮೈತ್ರಿಯೊಂದಿಗೆ ಸ್ಥಾನ ಹಂಚಿಕೆ ಮಾಡಿಕೊಂಡಿದೆ. ಕುಶಾಲನಗರ ಪಟ್ಟಣ ಪಂಚಾಯಿತಿ ಯಲ್ಲಿ ಮಾತ್ರ ತ್ರಿಕೋನ ಸ್ಪರ್ಧೆ ಯೊಂದಿಗೆ ಉಳಿದೆರಡು ಕಡೆಗಳಲ್ಲಿ ನೇರ ಪೈಪೋಟಿ ಏರ್ಪಟ್ಟಿದೆ.ಜಿಲ್ಲೆಯ ಮೂರು ಪಂಚಾಯಿತಿ ಗಳಿಂದ ಒಟ್ಟು 45 ಸ್ಥಾನಗಳಿಗೆ ಚುನಾವಣೆ ಏರ್ಪಟ್ಟಿದ್ದು, ವೀರಾಜಪೇಟೆ ಪಟ್ಟಣದ 18 ಸ್ಥಾನಗಳಿಗೂ, ಕುಶಾಲನಗರದ 16 ಸ್ಥಾನಗಳಿಗೂ, ಸೋಮವಾರಪೇಟೆ ಪಟ್ಟಣದ 11 ಸ್ಥಾನಗಳಿಗೂ ಮತದಾನ ಮಡಿಕೇರಿ, ಅ. 27: ಕೊಡಗು ಜಿಲ್ಲೆಯ ಸೋಮವಾರಪೇಟೆ, ಕುಶಾಲನಗರ, ವೀರಾಜಪೇಟೆ ಈ ಮೂರು ಪಟ್ಟಣ ಪಂಚಾಯಿತಿಗಳಿಗೆ ತಾ. 28 ರಂದು (ಇಂದು) ಮತದಾನ ದೊಂದಿಗೆ, ಕಣದಲ್ಲಿರುವ ಒಟ್ಟು 145 ಮಂದಿ ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಬರೆಯಲಿದ್ದಾರೆ.ಮೂರು ಪಟ್ಟಣ ಪಂಚಾಯಿತಿ ಗಳಲ್ಲಿ ಬಿಜೆಪಿ ಏಕಾಂಗಿ ಸ್ಪರ್ಧೆ ಯಲ್ಲಿದ್ದರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಸೋಮವಾರಪೇಟೆ ಮತ್ತು ವೀರಾಜಪೇಟೆಗಳಲ್ಲಿ ಮೈತ್ರಿಯೊಂದಿಗೆ ಸ್ಥಾನ ಹಂಚಿಕೆ ಮಾಡಿಕೊಂಡಿದೆ. ಕುಶಾಲನಗರ ಪಟ್ಟಣ ಪಂಚಾಯಿತಿ ಯಲ್ಲಿ ಮಾತ್ರ ತ್ರಿಕೋನ ಸ್ಪರ್ಧೆ ಯೊಂದಿಗೆ ಉಳಿದೆರಡು ಕಡೆಗಳಲ್ಲಿ ನೇರ ಪೈಪೋಟಿ ಏರ್ಪಟ್ಟಿದೆ.

ಜಿಲ್ಲೆಯ ಮೂರು ಪಂಚಾಯಿತಿ ಗಳಿಂದ ಒಟ್ಟು 45 ಸ್ಥಾನಗಳಿಗೆ ಚುನಾವಣೆ ಏರ್ಪಟ್ಟಿದ್ದು, ವೀರಾಜಪೇಟೆ ಪಟ್ಟಣದ 18 ಸ್ಥಾನಗಳಿಗೂ, ಕುಶಾಲನಗರದ 16 ಸ್ಥಾನಗಳಿಗೂ, ಸೋಮವಾರಪೇಟೆ ಪಟ್ಟಣದ 11 ಸ್ಥಾನಗಳಿಗೂ ಮತದಾನ ಕುಶಾಲನಗರದಲ್ಲಿ 4 ಸೇರಿದಂತೆ ಒಟ್ಟು 10 ಮತಗಟ್ಟೆಗಳನ್ನು ಸೂಕ್ಷ್ಮವೆಂದು ಪರಿಗಣಿಸಲಾಗಿದೆ.

31,533 ಮತದಾರರು: ವೀರಾಜಪೇಟೆ ಪಟ್ಟಣ ಪಂಚಾಯಿತಿಯ 18 ಸ್ಥಾನಗಳಿಗೆ 14,344 ಮಂದಿ ಸಹಿತ ಇತರ ಮೂವರು ತಮ್ಮ ಹಕ್ಕು ಚಲಾಯಿಸಲು ಅರ್ಹತೆ ಪಡೆದಿದ್ದಾರೆ. ಈ ಪೈಕಿ 7,181 ಪುರುಷರು ಹಾಗೂ 7,163 ಮಹಿಳಾ ಮತದಾರರಿದ್ದಾರೆ.

ಅಂತೆಯೇ ಕುಶಾಲನಗರ ಪಟ್ಟಣ ಪಂಚಾಯಿತಿಯ 16 ಸ್ಥಾನಗಳಿಗೆ 6,018 ಪುರುಷರು, 5,845 ಮಂದಿ ಮಹಿಳೆಯರು ಮತದಾನದ ಅರ್ಹತೆ ಪಡೆದಿದ್ದಾರೆ. ಇನ್ನು ಸೋಮವಾರಪೇಟೆ ಪಟ್ಟಣದ 11 ಸ್ಥಾನಗಳಿಗೆ 5,323 ಮಂದಿ ಮತದಾನ ಮಾಡಲಿದ್ದು, ಈ ಪೈಕಿ 2,593 ಪುರುಷರು ಹಾಗೂ 2,730 ಮಹಿಳಾ ಮತದಾರರಿದ್ದಾರೆ.

ಒಟ್ಟಿನಲ್ಲಿ ಜಿಲ್ಲೆಯನ್ನು ಪ್ರತಿನಿಧಿಸು ತ್ತಿರುವ ಇಬ್ಬರು ಬಿಜೆಪಿ ಶಾಸಕ ರೊಂದಿಗೆ, ರಾಜ್ಯದಲ್ಲಿ ಮೈತ್ರಿ ಕೂಟದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಹಾಗೂ ಜೆಡಿಎಸ್‍ಗೂ ಈ ಚುನಾವಣೆ ಪ್ರತಿಷ್ಠೆಯೊಂದಿಗೆ ಎಲ್ಲರು ತಮ್ಮ ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ತಂತ್ರಗಾರಿಕೆ ಯಲ್ಲಿ ತೊಡಗಿದ್ದಾರೆ.(ಮೊದಲ ಪುಟದಿಂದ)

ಪೊಲೀಸ್ ಮುಂಜಾಗ್ರತಾ ಕ್ರಮ

ಚುನಾವಣೆ ಸಂಬಂಧ ಮೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಪೊಲೀಸ್ ಇಲಾಖೆಯಿಂದ ಎಲ್ಲ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಅವರು ತಿಳಿಸಿದ್ದಾರೆ. ಎಲ್ಲ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ತಲಾ ಒಬ್ಬರು ಡಿವೈಎಸ್‍ಪಿಗಳೊಂದಿಗೆ 6 ಮಂದಿ ವೃತ್ತ ನಿರೀಕ್ಷಕರು, 8 ಮಂದಿ ಉಪ ನಿರೀಕ್ಷಕರು, 50 ಮಂದಿ ಸಹಾಯಕ ಉಪ ನಿರೀಕ್ಷಕರು, 170 ಪೊಲೀಸ್ ಸಿಬ್ಬಂದಿ ಹಾಗೂ 70 ಗೃಹರಕ್ಷಕ ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ.

ಮುಂಜಾಗ್ರತಾ ಕ್ರಮದೊಂದಿಗೆ ಎರಡು ರಾಜ್ಯ ಪೊಲೀಸ್ ಮೀಸಲು ತುಕಡಿಗಳು ಹಾಗೂ 5 ಜಿಲ್ಲಾ ಶಸಸ್ತ್ರ ಪಡೆಪೊಲೀಸ್ ತಂಡ ಆಯೋಜನೆಗೊಂಡಿದೆ. ಗಡಿ ಭಾಗದ ಏಳು ಕಡೆಗಳಲ್ಲಿರುವ ಚೆಕ್ ಪೋಸ್ಟ್‍ಗಳಲ್ಲಿ ತಪಾಸಣಾ ಕ್ರಮದೊಂದಿಗೆ ಶಾಂತಿಯುತ ಮತದಾನಕ್ಕೆ ಇಲಾಖೆಯಿಂದ ಕಣ್ಗಾವಲು ಇರಿಸಲಾಗುವದು ಎಂದು ಪೊಲೀಸ್ ವರಿಷ್ಠರು ವಿವರಿಸಿದ್ದಾರೆ.

ಗುರುತು ಚೀಟಿ

ಸ್ಥಳೀಯ ಸಂಸ್ಥೆ ಚುನಾವಣೆ ಸಂಬಂಧ ವೀರಾಜಪೇಟೆ, ಸೋಮವಾರಪೇಟೆ ಮತ್ತು ಕುಶಾಲನಗರ ಪ.ಪಂ.ಗಳಿಗೆ ಚುನಾವಣೆಯ ಮತದಾನವು ತಾ. 28 ರಂದು (ಇಂದು) ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆ ವರೆಗೆ ನಡೆಯಲಿದೆ.

ಮತದಾರರು ಮತದಾನ ಮಾಡುವಾಗ ಭಾರತ ಚುನಾವಣಾ ಆಯೋಗವು ನೀಡಿರುವ ಮತದಾರರ ಭಾವಚಿತ್ರದ ಗುರುತಿನ ಚೀಟಿ ಅಥವಾ ರಾಜ್ಯ ಚುನಾವಣಾ ಆಯೋಗವು ಆದೇಶಿಸಿರುವ 22 ದಾಖಲೆ ತೋರಿಸಿ ಮತದಾನ ಮಾಡಬಹುದಾಗಿದೆ.

ಪಾಸ್‍ಪೋರ್ಟ್, ಡ್ರೈವಿಂಗ್ ಲೈಸನ್ಸ್, ಆದಾಯ ತೆರಿಗೆ ಗುರುತಿನ ಚೀಟಿ (ಪಾನ್), ರಾಜ್ಯ, ಕೇಂದ್ರ ಸರ್ಕಾರ ಹಾಗೂ ಸಾರ್ವಜನಿಕ ಉದ್ದಿಮೆಗಳು ಅಥವಾ ಇತರೆ ಖಾಸಗಿ ಔದ್ಯಮಿಕ ಸಂಸ್ಥೆಗಳು ಅವರ ಕೆಲಸಗಾರರಿಗೆ ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು, ಸಾರ್ವಜನಿಕ ವಲಯದ ಬ್ಯಾಂಕ್, ಕಿಸಾನ್ ಮತ್ತು ಅಂಚೆ ಕಚೇರಿ ನೀಡಿರುವ ಭಾವಚಿತ್ರವಿರುವ ಪಾಸ್ ಪುಸ್ತಕ, ಮಾನ್ಯತೆ ಪಡೆದ ನೋಂದಾಯಿತ ವಿದ್ಯಾ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಕೊಟ್ಟಿರುವ ಗುರುತಿನ ಚೀಟಿಗಳು, ಭಾವಚಿತ್ರವಿರುವ ನೋಂದಾಯಿತ ಡೀಡ್‍ಗಳು, ಪಟ್ಟಾಗಳು ಮುಂತಾದ ಆಸ್ತಿ ದಾಖಲೆಗಳು, ಭಾವಚಿತ್ರವಿರುವ ಪಡಿತರ ಚೀಟಿಗಳು ಹಾಗೂ ಸಕ್ಷಮ ಪ್ರಾಧಿಕಾರ ನೀಡಿರುವ ಎಸ್‍ಸಿ, ಎಸ್‍ಟಿ, ಒಬಿಸಿ ಭಾವಚಿತ್ರವಿರುವ ಪ್ರಮಾಣ ಪತ್ರಗಳು.

ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರವಿರುವ ಪಿಂಚಣಿ ಪಾವತಿ ಆದೇಶಗಳು ಅಥವಾ ಮಾಜಿ ಯೋಧರ ಪಿಂಚಣಿ ಪುಸ್ತಕ, ಪಿಂಚಣಿ ಸಂದಾಯ ಆದೇಶಗಳಂತಹ ಪಿಂಚಣಿ ದಾಖಲೆಗಳು, ವೃದ್ದಾಪ್ಯ ವೇತನ, ಆದೇಶಗಳು, ವಿಧಾನ ವೇತನ ಆದೇಶಗಳು,

ಭಾವಚಿತ್ರವಿರುವ ಸ್ವಾತಂತ್ರ್ಯ ಯೋಧರ ಗುರುತಿನ ಚೀಟಿಗಳು, ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರವಿರುವ ಶಸ್ತ್ರ ಪರವಾನಗಿ, ಅಂಗವಿಕಲರಿಗೆ ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರವಿರುವ ಗುರುತಿನ ಚೀಟಿ, ಮಾಜಿ ಯೋಧರ ಭಾವಚಿತ್ರವಿರುವ ಸಿ.ಎಸ್.ಡಿ. ಕ್ಯಾಂಟೀನ್ ಕಾರ್ಡ್, ಸಂಧ್ಯಾ ಸುರಕ್ಷಾ ಯೋಜನೆಯ ಭಾವಚಿತ್ರವಿರುವ ಗುರುತಿನ ಚೀಟಿ, ಎನ್‍ಆರ್‍ಇಜಿ ಯೋಜನೆಯ ಅಡಿಯಲ್ಲಿ ನೀಡಿರುವ ಭಾವಚಿತ್ರವಿರುವ ಉದ್ಯೋಗ ಕಾರ್ಡ್, ಭಾವಚಿತ್ರವಿರುವ ಯಶಸ್ವಿನಿ ಕಾರ್ಡ್, ಸ್ಥಳೀಯ ಸಂಸ್ಥೆಗಳು ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು, ಸರ್ಕಾರಿ ಇಲಾಖೆ ನೀಡಿರುವ ಭಾವಚಿತ್ರವಿರುವ ಹಿರಿಯ ನಾಗರಿಕರ ಗುರುತಿನ ಚೀಟಿ, ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ನೀಡಿರುವ ಕುಟುಂಬದ ಸದಸ್ಯರ ಹೆಸರು ಮತ್ತು ವಯಸ್ಸು ಮತ್ತಿತರ ಸಂಬಂಧ ಒಳಗೊಂಡ ಭಾವಚಿತ್ರ ಇರುವ ತಾತ್ಕಾಲಿಕ, ಮೂಲ ಪಡಿತರ ಚೀಟಿ.

ಭಾವಚಿತ್ರವಿರುವ ಆರೋಗ್ಯ ವಿಮಾ ಯೋಜನೆ ಸ್ಮಾರ್ಟ್ ಕಾರ್ಡ್‍ಗಳು (ಕಾರ್ಮಿಕ ಮಂತ್ರಾಲಯ ಯೋಜನೆ) ಹಾಗೂ ಆಧಾರ್ ಕಾರ್ಡ್ ಯಾವದಾದರೂ ಒಂದನ್ನು, ಅಲ್ಲದೇ ಮೊದಲ ಬಾರಿಗೆ ರಾಜ್ಯ ಚುನಾವಣಾ ಆಯೋಗವು ಮತದಾರರ ಚೀಟಿಯನ್ನು ಬೂತ್ ಮಟ್ಟದ ಅಧಿಕಾರಿಗಳಿಂದ ವಿತರಿಸಲಾಗುತ್ತಿದ್ದು, ಮತದಾರರ ಚೀಟಿಯನ್ನು ಸಹ ಹಾಜರುಪಡಿಸಿ ಮತದಾನ ಮಾಡಬಹುದಾಗಿದೆ.