ಗೋಣಿಕೊಪ್ಪ ವರದಿ, ಅ. 28: ವಯೋಮಾನದ ಬಾಲಕರ ರಾಜ್ಯಮಟ್ಟದ ಎತ್ತರ ಜಿಗಿತ ಕ್ರೀಡಾಕೂಟದಲ್ಲಿ ಕುಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾಪಟು ಜೆ. ಎಸ್. ಸತೀಶ ಪ್ರತಿನಿಧಿಸುತ್ತಿದ್ದಾರೆ. ತುಮಕೂರು ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ನವೆಂಬರ್ 3 ರಿಂದ ಕ್ರೀಡಾಕೂಟ ಆರಂಭಗೊಳ್ಳಲಿದೆ. ಇವರಿಗೆ ತರಬೇತುದಾರರಾಗಿ ಅಲೀಮ ಪಾಲ್ಗೊಳ್ಳಲಿದ್ದಾರೆ.