ಮಡಿಕೇರಿ, ಅ. 28: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ನಡೆದ ಕನ್ನಡ ರಾಜ್ಯೋತ್ಸವ ಕ್ರೀಡಾಕೂಟಕ್ಕೆ ಸಂಬಂಧಿಸಿದ ಇಲಾಖೆಯ ನಿರೀಕ್ಷೆಯಂತೆ ಕ್ರೀಡಾಳುಗಳು ಆಗಮಿಸದೆ ನಿರಾಸೆ ಮೂಡಿಸಿದರಾದರೂ, ನಿಗದಿತ ಕ್ರೀಡಾಕೂಟ ನಡೆಸಲಾಯಿತು. ಕ್ರೀಡಾಕೂಟ ಉದ್ಘಾಟನೆ, ಅತಿಥಿಗಳ ಭಾಷಣ ಇತ್ಯಾದಿಗೆ ಅವಕಾಶವೇ ಇಲ್ಲದೆ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಮಕ್ಕಳಿಗೆ ಕ್ರೀಡಾ ಸ್ಪರ್ಧೆಯೊಂದಿಗೆ ವಿಜೇತರಿಗೆ ಬಹುಮಾನ ಘೋಷಿಸಿತು.ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಜಿಲ್ಲಾ ಮಟ್ಟದ ಕ್ರೀಡಾಕೂಟ ಇದಾಗಿದ್ದು, ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಿತು. ಓಟ: ಮಿಥೇಶ್ (ಪ್ರ), ಅಂಶೀತ್ (ದ್ವಿ), ಧೀರಜ್ (ತೃ), ಬಾಲಕಿಯರ ವಿಭಾಗ: ನೀತು ಕೆ.ಟಿ (ಪ್ರ), ನಮನ (ದ್ವಿ), ಸ್ನೇಹ (ತೃ).16 ವರ್ಷ ಮೇಲ್ಪಟ್ಟ ಬಾಲಕರ 100 ಮೀಟರ್ ಓಟ : ಪೂರ್ವಿಕ್ ಎನ್.ಎಚ್ (ಪ್ರ) , ತಿಲಕ್ ಬಿ.ಎಸ್ (ದ್ವಿ), ದೀಕ್ಷಿತ್ (ತೃ), ಬಾಲಕಿಯರ ವಿಭಾಗ: ಚೆಲುವಾಂಭ (ಪ್ರ), ರಶ್ನಿ ಸಿ.ಬಿ (ದ್ವಿ) ನೀತು ಕೆ.ಟಿ (ತೃ).

16 ವರ್ಷ ಮೇಲ್ಪಟ್ಟ ಬಾಲಕರ 800 ಮೀಟರ್ ಓಟದ ಸ್ಪರ್ಧೆ: ಪ್ರತಾಪ್ ಎಂ.ಡಿ (ಪ್ರ), ಉತ್ತಯ್ಯ ಕೆ.ಟಿ (ದ್ವಿ), ಗಗನ್ (ತೃ), ಬಾಲಕಿಯರ ವಿಭಾಗ: ನಿಖಿತ (ಪ್ರ), ಭೂಮಿಕ (ದ್ವಿ), ಚೋಂದಮ್ಮ ಕೆ.ಟಿ (ತೃ).

40 ವರ್ಷ ಮೇಲ್ಪಟ್ಟ ಪುರುಷರ ಗುಂಡು ಎಸೆತ: ಭವಾನಿ ಶಂಕರ್ (ಪ್ರ), ಶ್ರೀನಿವಾಸ (ದ್ವಿ), ರೆಹಮಾನ್ (ತೃ), ಮಹಿಳೆಯರ ವಿಭಾಗ ಮಂಜುಳ (ಪ್ರ), ಕವಿತ (ದ್ವಿ) ಪುಷ್ಪ ತೃತೀಯ ಸ್ಥಾನ ಪಡೆದರು.

ಅಥ್ಲೇಟಿಕ್ಸ್ ತರಬೇತುದಾರ ಭರತ್ ಎಸ್, ಮಂಜುನಾಥ್, ಮನು ಕ್ರೀಡಾ ಚಟುವಟಿಕೆಯನ್ನು ನಡೆಸಿಕೊಟ್ಟರು.