ಗೋಣಿಕೊಪ್ಪ ವರದಿ, ಅ. 28 : ಕೊಡಗು ಜಿಲ್ಲಾ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ರಜತ ಮಹೋತ್ಸವ ಕಾರ್ಯಕ್ರಮ ಡಿಸೆಂಬರ್ 9 ರಂದು ಕೈಕೇರಿಯಲ್ಲಿರುವ ಬ್ರಾಹ್ಮಣರ ಸಂಘದ ಸಭಾಂಗಣದಲ್ಲಿ ನಡೆಯಲಿದೆ ಎಂದು ಬ್ರಾಹ್ಮಣರ ಸಂಘದ ಕಾರ್ಯದರ್ಶಿ ಸದಾನಂದ ಪುರೋಹಿತ ತಿಳಿಸಿದ್ದಾರೆ.
ಪ್ರತಿಭಾ ಪುರಸ್ಕಾರದೊಂದಿಗೆ ಸಾಂಸ್ಕøತಿಕ ಕಾರ್ಯಕ್ರಮ, ಸ್ಮರಣ ಸಂಚಿಕೆ ಬಿಡುಗಡೆ ಮಾಡುವ ಮೂಲಕ ಜನಾಂಗದ ಸದಸ್ಯರಿಗೆ ಉತ್ತೇಜನ ನೀಡಲಾಗುತ್ತಿದೆ. ಗಣಹೋಮದೊಂದಿಗೆ ಚಾಲನೆ ನೀಡಲಾಗುವದು. 2017-18 ನೇ ಸಾಲಿನಲ್ಲಿ ಎಸೆಸೆಲ್ಸಿ, ಐಸಿಎಸ್ಇ, ಸಿಬಿಎಸ್ಇ, ದ್ವಿತೀಯ ಪಿಯುಸಿ, ಪದವಿ, ಸ್ನಾತಕೋತ್ತರ, ಇಂಜಿನಿಯರಿಂಗ್, ಎಂಬಿಬಿಎಸ್ ಪರೀಕ್ಷೆಗಳಲ್ಲಿ ಶೇ. 85 ಕ್ಕಿಂತ ಹೆಚ್ಚು ಅಂಕ ಪಡೆದ ನಮ್ಮ ಜನಾಂಗದ ಸದಸ್ಯರ ಮಕ್ಕಳು ಅಂಕಪಟ್ಟಿಯನ್ನು ನವೆಂಬರ್ 25 ರ ಒಳಗೆ ಸಮಾಜದ ಪದಾಧಿಕಾರಿಗಳಿಗೆ ನೀಡಬೇಕಿದೆ.
ಸ್ಮರಣ ಸಂಚಿಕೆ ಹೊರತರಲಾಗುತ್ತಿದೆ. ಇದಕ್ಕೆ ಜನಾಂಗದವರಿಂದ ಲೇಖನಗಳನ್ನು ಆಹ್ವಾನಿಸಲಾಗಿದೆ. ವೇದ, ಉಪನಿಷತ್ತು, ಭಾಗವತ, ರಾಮಾಯಣ, ಮಹಾಭಾರತ, ಪುರಾಣ, ಧಾರ್ಮಿಕತೆ, ಬ್ರಾಹ್ಮಣತ್ವ ವಿಷಯಗಳ ಬಗ್ಗೆ ಲೇಖನಗಳನ್ನು ನೀಡಬಹುದಾಗಿದೆ.
ಎಲ್ಲಾ ರೀತಿಯ ಸಾಂಸ್ಕøತಿಕ ಕಾರ್ಯಕ್ರಮವನ್ನು ನೀಡಬಹುದಾಗಿದೆ. ಪಾಲ್ಗೊಳ್ಳುವವರು ನವೆಂಬರ್ 20 ರ ಒಳಗೆ ಹೆಸರು ನೋಂದಾಯಿಸಬಹುದಾಗಿದೆ.
ಪ್ರಾಕೃತಿಕ ವಿಕೋಪಕ್ಕೆ ಒಳಗಾದ ನಮ್ಮ ಜನಾಂಗ ಬಾಂಧವರಿಗೆ ಆರ್ಥಿಕವಾಗಿ ಸ್ಪಂದಿಸುವ ಚಿಂತನೆ ಇದೆ. ಇದರಂತೆ ರಜತ ಮಹೋತ್ಸವÀ ನಂತರ ಒಂದಷ್ಟು ಹಣವನ್ನು ಸಂತ್ರಸ್ತರಿಗೆ ನೆರವಾಗುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 9449761296, 8762110550 ಸಂಪರ್ಕಿಸಬಹುದಾಗಿದೆ.