ಡಾ. ಬಿ.ಎಸ್. ಪ್ರಭು
ಮಡಿಕೇರಿ, ಅ. 28: ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನ ದಿಂದಲೇ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಲು ಎನ್ಎಸ್ಎಸ್ ಸಹಕಾರಿಯಾಗುತ್ತದೆ ಎಂದು ಉಪನ್ಯಾಸಕರಾದ ಡಾ. ಬಿ.ಎಸ್. ಪ್ರಭು ಅಭಿಪ್ರಾಯ ವ್ಯಕ್ತಪಡಿಸಿದರು.
ಪಾಲಿಬೆಟ್ಟ ಸರಕಾರಿ ಪದವಿ ಪೂರ್ವ ಕಾಲೇಜಿನ ಎನ್ಎಸ್ಎಸ್ ಘಟಕವು ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಅತ್ತೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಆಧುನಿಕ ಕಾಲದಲ್ಲಿ ಯುವಜನತೆಯು ತಂತ್ರಜ್ಞಾನದ ಪ್ರಭಾವಕ್ಕೊಳಗಾಗಿ ಮನಸ್ಸು ಕಲ್ಮಶಗೊಂಡು ನ್ಯಾಯ, ನೀತಿ, ಸತ್ಯ, ಅಹಿಂಸೆ ಹಾಗೂ ಸೇವೆ ಎಂಬ ಮೌಲ್ಯಗಳು ಅಗೋಚರವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಎನ್ಎಸ್ಎಸ್ ವಿಶೇಷ ಶಿಬಿರವು ವಿದ್ಯಾರ್ಥಿಗಳಲ್ಲಿ ಶಿಸ್ತು ಸಮಯ ಪಾಲನೆ, ಸೇವಾ ಮನೋಭಾವನೆ ಸಹಕಾರ ಹಾಗೂ ಉತ್ತಮ ನಾಯಕತ್ವದ ಗುಣಗಳನ್ನು ಬೆಳೆಸಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಸಮಾರಂಭದಲ್ಲಿ ಮಾತನಾಡಿದ ಅವರು, ಆಧುನಿಕ ಕಾಲದಲ್ಲಿ ಯುವಜನತೆಯು ತಂತ್ರಜ್ಞಾನದ ಪ್ರಭಾವಕ್ಕೊಳಗಾಗಿ ಮನಸ್ಸು ಕಲ್ಮಶಗೊಂಡು ನ್ಯಾಯ, ನೀತಿ, ಸತ್ಯ, ಅಹಿಂಸೆ ಹಾಗೂ ಸೇವೆ ಎಂಬ ಮೌಲ್ಯಗಳು ಅಗೋಚರವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಎನ್ಎಸ್ಎಸ್ ವಿಶೇಷ ಶಿಬಿರವು ವಿದ್ಯಾರ್ಥಿಗಳಲ್ಲಿ ಶಿಸ್ತು ಸಮಯ ಪಾಲನೆ, ಸೇವಾ ಮನೋಭಾವನೆ ಸಹಕಾರ ಹಾಗೂ ಉತ್ತಮ ನಾಯಕತ್ವದ ಗುಣಗಳನ್ನು ಬೆಳೆಸಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶಿಬಿರಾರ್ಥಿಗಳು ಪ್ರಾರ್ಥಿಸಿ, ಡಿ.ಆರ್. ಶಿವದಾಸ್ ಸ್ವಾಗತಿಸಿ, ಸುನಿತಾ ಕೆ.ಕೆ. ವಂದಿಸಿದರು. 7 ದಿನಗಳ ಶಿಬಿರದಲ್ಲಿ ವ್ಯಕ್ತಿತ್ವ ವಿಕಸನ, ಪರಿಸರ, ವೈಜ್ಞಾನಿಕ ಚಿಂತನೆಗಳು, ಮೂಢನಂಬಿಕೆಗಳು, ಪೊಲೀಸ್ ಹಾಗೂ ಸಮಾಜ ಎಂಬ ವಿಷಯಗಳ ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡಲಾಯಿತು. ಶಿಬಿರಾರ್ಥಿಗಳು ಶ್ರಮದಾನದ ಮುಖಾಂತರ ಅತ್ತೂರು ಪ್ರಾಥಮಿಕ ಶಾಲೆಯ ಆವರಣವನ್ನು, ರಸ್ತೆ ಬದಿಗಳನ್ನು ಹಾಗೂ ಕೊಡವ ಕಲ್ಚರಲ್ ಕ್ಲಬ್ನ ಆವರಣವನ್ನು ಸ್ವಚ್ಛಗೊಳಿಸಿದರು. ಅತ್ತೂರು ಪ್ರಾಥಮಿಕ ಶಾಲೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿದ ಶಿಕ್ಷಕರಾದ ಟಿ.ಎಸ್. ಉತ್ತಯ್ಯ ಮತ್ತು ಕಾಟಿಮಾಡ ಅಣ್ಣಯ್ಯ ಅವರನ್ನು ಸನ್ಮಾನಿಸಲಾಯಿತು. ಶಿಬಿರಾರ್ಥಿಗಳಿಂದ ತಿರುವಾದಿರ ಮತ್ತು ಉಮ್ಮತ್ತಾಟ್ ನೃತ್ಯಗಳನ್ನು ಪ್ರದರ್ಶಿಸಲಾಯಿತು.