ಮಡಿಕೇರಿ, ಅ. 28: ನಗರದ ಚೈನ್‍ಗೇಟ್ ಬಳಿ ತಾ. 24 ರಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಗಾಂಜಾ ಸೇವಿಸಿ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ಚಂದ್ರಶೇಖರ್ ಎಂಬಾತನ ವಿರುದ್ಧ ನಗರ ಠಾಣೆ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.ಆರೋಪಿಯನ್ನು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಈ ಸಂಬಂಧ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ ವೇಳೆ, ಗಾಂಜಾ ಸೇವಿಸಿರುವದು ಸಾಬೀತುಗೊಂಡ ಮೇರೆಗೆ, ಕಲಂ 27 (ಬಿ) ಎನ್.ಡಿ.ಪಿ.ಎಸ್. ಕಾಯ್ದೆಯಡಿ ಪ್ರಕರಣ ದಾಖಲಿಸಿರುವ ಠಾಣಾಧಿಕಾರಿ ಷಣ್ಮುಗಪ್ಪ ಹಾಗೂ ಸಿಬ್ಬಂದಿ ಮುಂದಿನ ಕ್ರಮ ಕೈಗೊಂಡಿರುವದಾಗಿ ಗೊತ್ತಾಗಿದೆ.ತಾ. 24 ರಂದು ಬೆಳಗಿನ ಜಾವ ಪೊಲೀಸ್ ನಿಯಂತ್ರಣ ಕಚೇರಿ ಕರೆ ಮಾಡಿ ಆರೋಪಿಯ ವಿರುದ್ಧ ದೂರು ನೀಡಿದ ಮೇರೆಗೆ ಗಸ್ತು ನಿರತ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ ಚಂದ್ರಶೇಖರ್‍ನನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆಗೆ ಒಳಪಡಿಸಿತ್ತು. ಇಂದು ವೈದ್ಯರ ವರದಿ ಆದರಿಸಿ ಮುಂದಿನ ಕ್ರಮ ಜರುಗಿಸಲಾಗಿದೆ.