ಕುಶಾಲನಗರ, ಅ. 28: ಕೊಡವ ನಾಷನಲ್ ಕೌನ್ಸಿಲ್ ಆಶ್ರಯದಲ್ಲಿ ನವೆಂಬರ್ 1 ರ ಕರ್ನಾಟಕ ರಾಜ್ಯೋತ್ಸವ ದಿನವನ್ನು ಕರಾಳ ದಿನವೆಂದು ಪರಿಗಣಿಸಿ ನವದೆಹಲಿಯ ಪಾರ್ಲಿಮೆಂಟ್ ಮುಂದಿರುವ ‘ಜಂತರ್ ಮಂತರ್’ನಲ್ಲಿ ಶಾಂತಿಯುತ ಸತ್ಯಾಗ್ರಹ ನಡೆಸುವದಾಗಿ ಸಿಎನ್ಸಿ ಮುಖ್ಯಸ್ಥ ಎನ್.ಯು. ನಾಚಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1956ರ ನ. 1 ರಂದು ಕೊಡಗು ‘ಸಿ’ ರಾಜ್ಯ ವಿಶಾಲ ಮೈಸೂರು (ಇಂದಿನ ಕರ್ನಾಟಕ)ದಲ್ಲಿ ವಿಲಿನಗೊಂಡಿತು. ಈ ದುರ್ದಿನವನ್ನು ಕೊಡವರು ತಮ್ಮ ಬದುಕಿನ ಅತ್ಯಂತ ಕರಾಳ ದಿನವೆಂದು ಪರಿಗಣಿಸುತ್ತಾರೆ ಎಂದರು.
1785ರಲ್ಲಿ ಮೈಸೂರಿನ ಟಿಪ್ಪು ಸುಲ್ತಾನ್ ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿಯ ಮಿತ್ರ ಪಡೆಯೊಂದಿಗೆ ಸೇರಿ ‘ದೇವಾಟ್ ಪರಂಬ್ ಹತ್ಯಾಕಾಂಡದಲ್ಲಿ’ ಕೊಡವ ಬುಡಕಟ್ಟು ಸಮುದಾಯದ ಮಾರಣಹೋಮ ನಡೆಸಿದ್ದು ಇಡೀ ಕೊಡವ ಕುಲವೇ ನಾಶವಾಗಲು ಕಾರಣವಾಯಿತು ಎಂದು ಆರೋಪಿಸಿದರು
ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಿಎನ್ಸಿ ನ. 1 ರಂದು ದೆಹಲಿ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ತಿಳಿಸಿದರು.