ಮಡಿಕೇರಿ, ಅ. 28: ಜಿಲ್ಲೆಯ ವೀರಾಜಪೇಟೆ, ಸೋಮವಾರಪೇಟೆ ಮತ್ತು ಕುಶಾಲನಗರ ಪಟ್ಟಣ ಪಂಚಾಯಿತಿಗಳಲ್ಲಿ ಭಾನುವಾರ ಶಾಂತಿಯುತ ಮತದಾನ ನಡೆಯಿತು. ಜಿಲ್ಲೆಯ ಮೂರು ಪಟ್ಟಣ ಪಂಚಾಯಿತಿಗಳ ಬಹುತೇಕ ಎಲ್ಲಾ ಮತಗಟ್ಟೆಗಳಲ್ಲಿ ಬೆಳಗಿನಿಂದಲೇ ಬಿರುಸಿನ ಮತದಾನ ಆರಂಭವಾಯಿತು. ಮತ್ತೆ ಕೆಲವು ಮತಗಟ್ಟೆಗಳಲ್ಲಿ ಮಧ್ಯಾಹ್ನದ ನಂತರ ಮತದಾನ ಚುರುಕು ಪಡೆಯಿತು. ಕುಶಾಲನಗರದ 16, ಸೋಮವಾರಪೇಟೆಯ 11, ವೀರಾಜಪೇಟೆಯ 18 ಮತಗಟ್ಟೆಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪಿ.ಐ. ಶ್ರೀವಿದ್ಯಾ ವೀರಾಜಪೇಟೆ ಪಟ್ಟಣದ ಮತಗಟ್ಟೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಬಳಿಕ ಮಾತನಾಡಿದ ಅವರು, ಜಿಲ್ಲೆಯ ಮೂರು ಪಟ್ಟಣ ಪಂಚಾಯಿತಿಗಳ 45 ವಾರ್ಡ್‍ಗಳ ಮತಗಟ್ಟೆಗಳಲ್ಲಿ ಶಾಂತಿಯುತವಾಗಿ ಮತದಾನ ನಡೆದಿದೆ. ಹದಿನೆಂಟು ವರ್ಷ ಪೂರ್ಣಗೊಂಡ ಎಲ್ಲಾ ಮತದಾರರು ಮತದಾನ ಮಾಡುವಂತಾಗಬೇಕು. ಇದರಿಂದ ಪ್ರಜಾಪ್ರಭುತ್ವ ಬಲಪಡಿಸಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಉಪ ವಿಭಾಗಾಧಿಕಾರಿ ಟಿ. ಜವರೇಗೌಡ, ತಹಶೀಲ್ದಾರ್ ಗೋವಿಂದ ರಾಜು, ಡಿವೈಎಸ್‍ಪಿ ನಾಗಪ್ಪ, ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕ ಗೋಪಾಲಕೃಷ್ಣ, ಪ.ಪಂ. ಮುಖ್ಯಾಧಿಕಾರಿ ಶ್ರೀಧರ, ಚುನಾವಣಾ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಇತರರು ಇದ್ದರು.ಕುಶಾಲನಗರ: ಕುಶಾಲನಗರ ಪಟ್ಟಣ ಪಂಚಾಯ್ತಿಯ ಚುನಾವಣೆ ಶಾಂತಿಯುತವಾಗಿ ನಡೆಯಿತು. ಪಟ್ಟಣ ವ್ಯಾಪ್ತಿಯಲ್ಲಿ ತೆರೆಯಲಾಗಿದ್ದ 16 ಪ್ರತ್ಯೇಕ ಮತಗಟ್ಟೆಗಳಲ್ಲಿ ಬೆಳಗ್ಗೆ 7 ರಿಂದ ಸಂಜೆ 5 ರತನಕ ಮತದಾನ ನಡೆಯಿತು. ವ್ಯವಸ್ಥಿತ ಹಾಗೂ ಶಾಂತಿಯುತ ಮತದಾನಕ್ಕೆ ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಂಡಿತು. ಮತಗಟ್ಟೆಗಳಲ್ಲಿ ನೂಕುನುಗ್ಗಲು ಇಲ್ಲದೆ ಮತದಾನ ನಡೆಯಿತು. ಬೆಳಗ್ಗಿನಿಂದ ಮತಗಟ್ಟೆಗೆ ವಿರಳವಾಗಿ ಜನ ಬರುತ್ತಿದ್ದ ದೃಶ್ಯ ಕಂಡುಬಂತು. ಸಂಜೆ 4 ಗಂಟೆ ವೇಳೆಗೆ ಕುಶಾಲನಗರದ 16 ಮತಗಟ್ಟೆಗಳಲ್ಲಿ ಶೇ. 60 ರಷ್ಟು ಮತದಾನ ನಡೆದಿತ್ತು.

ಗುರುತಿನ ಚೀಟಿಯಿಲ್ಲದೆ ಮತದಾನಕ್ಕೆ ತೆರಳಿದ ಕೆಲವು ಮಂದಿಯನ್ನು ಮತಗಟ್ಟೆ ಸಂಖ್ಯೆ 15 ರಲ್ಲಿ ಗುರುತಿನ ಚೀಟಿ ತರಲು ಅಧಿಕಾರಿಗಳು ವಾಪಾಸ್ ಕಳುಹಿಸಿದ ದೃಶ್ಯ ಗೋಚರಿಸಿತು. ಪ್ರತಿ ಮತಗಟ್ಟೆಗಳಲ್ಲಿ ಇಬ್ಬರು ಮತಗಟ್ಟೆ ಅಧಿಕಾರಿಗಳು, ಓರ್ವ ಸಹಾಯಕ ಮತ್ತು ಇಬ್ಬರು ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಕುಶಾಲನಗರ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ 6 ಮತಗಟ್ಟೆಗಳು ತೆರೆದ ಹಿನ್ನಲೆಯಲ್ಲಿ ವಿವಿಧ ಪಕ್ಷಗಳು ಹಾಗೂ ಪಕ್ಷೇತರ ಅಭ್ಯರ್ಥಿಗಳ ಬೆಂಬಲಿಗರ ಸಂಖ್ಯೆ ಅಧಿಕವಾಗಿತ್ತು. ಮತ ಕೇಂದ್ರದ ಸಮೀಪದಲ್ಲಿ ನೂರು ಮೀಟರ್ ಅಂತರದ

ಸೋಮವಾರಪೇಟೆ

(ಮೊದಲ ಪುಟದಿಂದ) ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ ಆಗಮಿಸಿ ಮತಯಾಚನೆ ಮಾಡಿದರು. ಎಲ್ಲಾ ಮತಗಟ್ಟೆಗಳಿಗೆ ತೆರಳಿ ತಮ್ಮ ಪಕ್ಷದ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರನ್ನು ಮಾತನಾಡಿಸಿದರಲ್ಲದೇ, ಮತದಾನಕ್ಕೆ ಆಗಮಿಸುತ್ತಿದ್ದ ಮತದಾರರಲ್ಲೂ ಮತಯಾಚಿಸಿದರು. ಇದರೊಂದಿಗೆ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸಿರುವ ಮತಗಟ್ಟೆಯಲ್ಲಿ ಮಾಜೀ ಸಚಿವ ಬಿ.ಎ. ಜೀವಿಜಯ, ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧಿಸಿರುವ ಕಡೆಗಳಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಸೇರಿದಂತೆ ಮುಖಂಡರುಗಳು ಹಾಜರಿದ್ದು, ಅಂತಿಮ ಕ್ಷಣದವರೆಗೂ ಮತಯಾಚನೆಯಲ್ಲಿ ತೊಡಗಿದ್ದರು.

ಮತಗಟ್ಟೆಗಳಿಂದ 200 ಮೀಟರ್ ದೂರದಲ್ಲಿ ಯಾವದೇ ಪ್ರಚಾರಕ್ಕೆ ಪೊಲೀಸರು ಅವಕಾಶ ನೀಡಿರಲಿಲ್ಲವಾದ್ದರಿಂದ ದೂರದಲ್ಲೇ ಕಾರ್ಯಕರ್ತರು ಪ್ರಚಾರ ಕೈಗೊಂಡಿದ್ದರು. ಪ್ರಚಾರ ಕಾರ್ಯದಲ್ಲಿದ್ದ ಕಾರ್ಯಕರ್ತರಿಗೆ ಬೆಳಗ್ಗಿನ ಉಪಾಹಾರ, ಮಧ್ಯಾಹ್ನ ಊಟೋಪಚಾರದೊಂದಿಗೆ ಬಿಸಿಲಿನಿಂದ ರಕ್ಷಣೆಗಾಗಿ ಕೆಲವೆಡೆ ಶಾಮಿಯಾನದ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೆಲವು ವಾರ್ಡ್‍ಗಳಲ್ಲಿ ಮತದಾರರ ಸಂಖ್ಯೆಗಿಂತ ಅಭ್ಯರ್ಥಿಗಳ ಪರ ಪ್ರಚಾರದಲ್ಲಿದ್ದ ಕಾರ್ಯಕರ್ತರ ಸಂಖ್ಯೆಯೇ ದೊಡ್ಡದಾಗಿತ್ತು.

ಹಲವಷ್ಟು ವಾರ್ಡ್‍ಗಳಲ್ಲಿ ಚುನಾವಣಾ ಎದುರಾಳಿಗಳು ಒಟ್ಟಿಗೆ ಪ್ರಚಾರದಲ್ಲಿ ತೊಡಗಿದ್ದುದು ವಿಶೇಷವಾಗಿತ್ತು. ಶಾಸಕ ರಂಜನ್ ಮತ್ತು ಮಾಜೀ ಸಚಿವ ಬಿ.ಎ. ಜೀವಿಜಯ ಅವರುಗಳು ಎದುರಾಳಿ ಪಕ್ಷಗಳ ಅಭ್ಯರ್ಥಿಗಳಿಗೂ ಕೈಕುಲುಕಿ ಶುಭ ಹಾರೈಸುತ್ತಿದ್ದರು. ಚುನಾವಣೆಗೆ ನಿಂತಿರುವ ಅಭ್ಯರ್ಥಿಗಳ ಕುಟುಂಬಸ್ಥರು, ಸ್ನೇಹಿತರು ಮತಬೇಟೆಯಲ್ಲಿ ತೊಡಗಿದ್ದರು.

ಬಸವೇಶ್ವರ ಬ್ಲಾಕ್‍ನ ಮತದಾರರು ಎಸ್‍ಜೆಎಂ ಪ್ರಾಥಮಿಕ ಶಾಲೆಯ ಉತ್ತರ ಪಾಶ್ರ್ವದಲ್ಲಿ, ಪವರ್‍ಹೌಸ್ ಬ್ಲಾಕ್‍ನವರು ಎಸ್‍ಜೆಎಂ ಶಾಲೆಯ ದಕ್ಷಿಣ ಪಾಶ್ರ್ವದಲ್ಲಿ, ವೆಂಕಟೇಶ್ವರ ಬ್ಲಾಕ್‍ನ ಮತದಾರರು ಬೇಳೂರು ರಸ್ತೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ರೇಂಜರ್ ಬ್ಲಾಕ್‍ನವರು ಮಹಿಳಾ ಸಮಾಜದ ಪಶ್ಚಿಮ ಪಾಶ್ರ್ವದಲ್ಲಿ ತೆರೆಯಲಾಗಿದ್ದ ಮತಗಟ್ಟೆಯಲ್ಲಿ ಮತಚಲಾಯಿಸಿದರು.

ತ್ಯಾಗರಾಜ ರಸ್ತೆಯ ಮತದಾರರು ಎಸ್‍ಜೆಎಂ ಬಾಲಿಕ ಪ್ರೌಢಶಾಲೆಯಲ್ಲಿ, ವಿಶ್ವೇಶ್ವರಯ್ಯ ಬ್ಲಾಕ್‍ನವರು ಚನ್ನಬಸಪ್ಪ ಸಭಾಂಗಣದಲ್ಲಿ, ರೇಂಜರ್ ಬ್ಲಾಕ್ 2ನೇ ಹಂತದ ಮತದಾರರು ಮಹಿಳಾ ಸಮಾಜದ ಪೂರ್ವ ಪಾಶ್ರ್ವದಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆ, ಜನತಾ ಕಾಲೋನಿಯವರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರ ಕಚೇರಿಯಲ್ಲಿ ತೆರೆದಿದ್ದ ಮತಗಟ್ಟೆಯಲ್ಲಿ ಮತಚಲಾಯಿಸಿದರು.

ಸಿದ್ಧಲಿಂಗೇಶ್ವರ ಬ್ಲಾಕ್‍ನವರು ಪಟ್ಟಣ ಪಂಚಾಯಿತಿ ಕಚೇರಿಯ ದಕ್ಷಿಣ ಪಾಶ್ರ್ವದಲ್ಲಿ, ಮಹದೇಶ್ವರ ಬ್ಲಾಕ್‍ನ ಮತದಾರರು ಪಟ್ಟಣ ಪಂಚಾಯಿತಿ ಕಚೇರಿಯ ಉತ್ತರ ಪಾಶ್ರ್ವದಲ್ಲಿ, ಸಿ.ಕೆ. ಸುಬ್ಬಯ್ಯ ಬ್ಲಾಕ್‍ನ ಮತದಾರರು ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಮತದಾನ ಮಾಡಿದರು.

11 ವಾರ್ಡ್‍ಗಳಲ್ಲೂ ಯಾವದೇ ಗೊಂದಲಗಳಿಲ್ಲದಂತೆ ಮತದಾನ ಪ್ರಕ್ರಿಯೆ ನಡೆಯಿತು. ಪೊಲೀಸ್ ಇಲಾಖೆಯಿಂದ ಅಗತ್ಯ ಬಂದೋಬಸ್ತ್ ಕಲ್ಪಿಸಲಾಗಿತ್ತು. ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ ಅವರು ಎಲ್ಲಾ ಮತಗಟ್ಟೆಗಳಿಗೂ ಭೇಟಿ ನೀಡಿ ಬಂದೋಬಸ್ತ್ ಪರಿಶೀಲಿಸಿದರು.

ಪಂಚಾಯಿತಿ ಮಾಜೀ ಅಧ್ಯಕ್ಷರುಗಳಾದ ನಳಿನಿ ಗಣೇಶ್, ಎನ್.ಎಸ್. ಮೂರ್ತಿ, ವಿಜಯಲಕ್ಷ್ಮೀ ಸುರೇಶ್, ಮಾಜೀ ಉಪಾಧ್ಯಕ್ಷೆ ಶೀಲಾ ಡಿಸೋಜ, ಮಾಜೀ ಸದಸ್ಯರುಗಳಾದ ಆದಂ, ಸಂಜೀವ, ಮೊದಲಾದವರು ಸ್ಪರ್ಧೆಯಲ್ಲಿರುವ ಪ್ರಮುಖರಾಗಿದ್ದಾರೆ.ವೀರಾಜಪೇಟೆ: ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಹದಿನೆಂಟು ವಾರ್ಡ್‍ಗಳಿಗೆ ಇಂದು ಬಿರುಸಿನ ಹಾಗೂ ಶಾಂತಿಯುತ ಮತದಾನ ನಡೆಯಿತು.

ಪಟ್ಟಣ ಪಂಚಾಯಿತಿ ಚುನಾವಣೆಯ ಹದಿನೆಂಟು ಮತಗಟ್ಟೆಗಳಲ್ಲಿ ಬೆಳಿಗ್ಗೆ 7ಗಂಟೆಯಿಂದಲೇ ಬಿರುಸಿನ ಮತದಾನ ಆರಂಭಗೊಂಡರೂ 11 ಗಂಟೆಯನಂತರ ಕೆಲವು ಮತಗಟ್ಟೆಗಳಲ್ಲಿ ಮತದಾನ ನಿಧಾನಗೊಂಡಿತು. ಗಾಂಧಿನಗರದ ಹದಿನೈದನೇ ವಾರ್ಡ್‍ನ ಪುರಭವನದ ಮತಗಟ್ಟೆಯಲ್ಲಿ ಮತ ಯಂತ್ರ ದುರಸ್ತಿಗೊಂಡಿದ್ದರಿಂದ ಈ ಮತಗಟ್ಟೆಯಲ್ಲಿ ಮತದಾನಕ್ಕೆ 45 ನಿಮಿಷ ವಿಳಂಬವಾಯಿತು.

ಪಟ್ಟಣ ಪಂಚಾಯಿತಿಯ ಕೆಲವು ಮತಗಟ್ಟೆಗಳಲ್ಲಿ ಸರದಿ ಪ್ರಕಾರ ಮತದಾನ ನಡೆಯಿತು. ಮಧ್ಯಾಹ್ನ 12ಗಂಟೆ ವೇಳೆಗೆ ಎಲ್ಲ ಮತಗಟ್ಟೆಗಳಲ್ಲಿ ಶೇಕಡ 50ಕ್ಕೂ ಅಧಿಕ ಮತದಾನವಾಗಿತ್ತು.

ವೀರಾಜಪೇಟೆಯ ಮಲಬಾರ್ ರಸ್ತೆಯಲ್ಲಿರುವ ಮುನ್ಸಿಪಲ್ ಶಾಲೆ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಒಂದು ಕೊಠಡಿ ಸೇರಿದಂತೆ ಒಂದೇ ಸಭಾಂಗಣದಲ್ಲಿ ಮೂರು ವಾರ್ಡ್‍ಗಳ ಮತಗಟ್ಟೆಯನ್ನು ವ್ಯವಸ್ಥೆ ಗೊಳಿಸಿದ್ದರಿಂದ ಶಾಲಾ ಕಟ್ಟಡದ ಮುಂಭಾಗದಲ್ಲಿ

ಕುಶಾಲನಗರ

(ಮೊದಲ ಪುಟದಿಂದ) ಎಲ್ಲಾ ವ್ಯಾಪಾರ ವಹಿವಾಟು ಕೇಂದ್ರಗಳನ್ನು ಮುಚ್ಚಲು ಆದೇಶ ನೀಡಲಾಗಿತ್ತು.

ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್, ಮಾಜಿ ಸಚಿವ ಬಿ.ಎ. ಜೀವಿಜಯ, ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ಜಿ. ಮೇದಪ್ಪ, ಕಾಂಗ್ರೆಸ್ ಪ್ರಮುಖ ಮಿಟ್ಟು ಚಂಗಪ್ಪ ಮತ್ತಿತರರು ಪಟ್ಟಣದ ಹಲವು ಮತಗಟ್ಟೆಗಳಿಗೆ ಭೇಟಿ ನೀಡಿದ್ದರು. ಈ ಸಂದರ್ಭ ಮಾತನಾಡಿದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್, ಕುಶಾಲನಗರ ಪಟ್ಟಣ ಪಂಚಾಯಿತಿಯಲ್ಲಿ 10 ರಷ್ಟು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದಾರೆ ಎನ್ನುವ ಅಶಯ ವ್ಯಕ್ತಪಡಿಸಿದರು.

ಡಿವೈಎಸ್ಪಿ ಮುರಳೀಧರ್ ನೇತೃತ್ವದಲ್ಲಿ ವೃತ್ತ ನಿರೀಕ್ಷಕ ಕ್ಯಾತೆಗೌಡ, ಸ್ಥಳೀಯ ಪೊಲೀಸ್ ಠಾಣಾಧಿಕಾರಿಗಳು ಮತ್ತು ಸಿಬ್ಬಂದಿ ಮತಗಟ್ಟೆ ವ್ಯಾಪ್ತಿಯಲ್ಲಿ ಯಾವದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸೂಕ್ತ ಭದ್ರತೆ ಕಲ್ಪಿಸಿದ್ದರು.ಸೋಮವಾರಪೇಟೆ: ಇಲ್ಲಿನ ಪಟ್ಟಣ ಪಂಚಾಯಿತಿಗೆ ಇಂದು ನಡೆದ ಚುನಾವಣೆ ಶಾಂತಿಯುತವಾಗಿತ್ತು. ಮಧ್ಯಾಹ್ನದವರೆಗೆ ಹಲವು ವಾರ್ಡ್‍ಗಳಲ್ಲಿ ಶೇ.50ರಷ್ಟು ಮತದಾನವಾಗಿತ್ತು. ಕೂಲಿ ಕಾರ್ಮಿಕರು ಬೆಳಗ್ಗೆಯೇ ಮತಗಟ್ಟೆಗಳಿಗೆ ಆಗಮಿಸಿ ಮತಚಲಾಯಿಸಿದ ನಂತರ ಕೆಲಸಕ್ಕೆ ತೆರಳಿದರು.

ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಅಖಾಡಕ್ಕೆ ಇಳಿದಿದ್ದ ಹಿನ್ನೆಲೆ ಕೆಲ ಮತಗಟ್ಟೆಗಳಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿ ಪರ ಮತಯಾಚನೆಯಲ್ಲಿ ತೊಡಗಿದ್ದರು. ಬಿಜೆಪಿ ಅಭ್ಯರ್ಥಿಗಳು 11 ವಾರ್ಡ್‍ನಲ್ಲಿಯೂ ಏಕಾಂಗಿಯಾಗಿ ಸ್ಪರ್ಧೆಯಲ್ಲಿದ್ದರಿಂದ ಪ್ರಚಾರವೂ ಜೋರಾಗಿತ್ತು.

ನಿನ್ನೆ ತಡರಾತ್ರಿವರೆಗೂ ಅಂತಿಮ ಹಂತದ ಓಲೈಕೆಯಲ್ಲಿದ್ದ ಅಭ್ಯರ್ಥಿಗಳು, ಇಂದು ನಸುಕಿನ ವೇಳೆಯಲ್ಲೂ ಚುರುಕಾಗಿದ್ದರು. ಬೆಳಕು ಹರಿಯುವ ಮುನ್ನವೇ ಮತದಾರರ ಮನೆ ಬಾಗಿಲಿಗೆ ತೆರಳಿ ಆಶೀರ್ವಾದ ಬೇಡಿದರು. ಚುನಾವಣೆಯಲ್ಲಿ ಹಣ, ಉಡುಗೊರೆಗಳ ಕೊಡುಗೆಗಳು ಭಾರೀ ಪ್ರಮಾಣದಲ್ಲಿ ಹರಿದಿರುವ ಮಾತುಗಳು ಕೇಳಿಬರುತ್ತಿದ್ದರೂ ಸಹ ಮತದಾರರು ಮಾತ್ರ ಯಾವ ಗುಟ್ಟನ್ನೂ ಬಿಟ್ಟುಕೊಟ್ಟಿಲ್ಲ!

ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಶಾಸಕ

ವೀರಾಜಪೇಟೆ

(ಮೊದಲ ಪುಟದಿಂದ) ಆಗಿಂದಾಗೆ ಟ್ರಾಫಿಕ್ ಜಾಮ್ ಆಗುತ್ತಿತ್ತು. ಪೊಲೀಸರು ಟ್ರಾಫಿಕ್ ನಿಯಂತ್ರಿಸಲು ಹರ ಸಾಹಸ ಪಡುವಂತಾಗಿತ್ತು. ರಾಜಕೀಯ ಪಕ್ಷಗಳ ಕಾರ್ಯಕರ್ತರು, ಪಕ್ಷೇತರ ಅಭ್ಯರ್ಥಿಗಳ ಬೆಂಬಲಿಗರು ಅಲ್ಲಲ್ಲಿ ಮತ ಪ್ರಚಾರದ ಭರಾಟೆಯಲ್ಲಿದ್ದುದರಿಂದ ಪೊಲೀಸರು ಆಗಾಗ್ಗೆ ಗುಂಪನ್ನು ಚದುರಿಸುತ್ತಿದ್ದರು. ಪ್ರತಿ ಮತಗಟ್ಟೆಗಳಲ್ಲೂ ರಾಜಕೀಯ ಪಕ್ಷಗಳು ಹಾಕಿದ್ದ ಶ್ಯಾಮಿಯಾನದ ಕೆಳಗೆ ಕಾರ್ಯಕರ್ತರು ಪ್ರಚಾರದಲ್ಲಿ ತೊಡಿಗಿದ್ದು ಕಂಡು ಬಂತು.

ಕೊಡಗು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಇಂದು ವೀರಾಜಪೇಟೆಗೆ ಭೇಟಿ ನೀಡಿ ಪಟ್ಟಣ ಪಂಚಾಯಿತಿ ಚುನಾವಣೆಯ ಐದು ವಾರ್ಡ್‍ಗಳಿಗೆ ತೆರಳಿ ಖುದ್ದು ಪರಿಶೀಲಿಸಿದರು. ಜಿಲ್ಲಾಧಿಕಾರಿ ಅವರೊಂದಿಗೆ ಜಿಲ್ಲೆಯ ಉಪ ವಿಭಾಗಾಧಿಕಾರಿ ಜವರೇಗೌಡ, ತಾಲೂಕು ತಹಶೀಲ್ದಾರ್ ಆರ್. ಗೋವಿಂದರಾಜು, ಪಟ್ಟಣ ಪಂಚಾಯಿತಿಯ ಯೋಜನಾಧಿಕಾರಿ ಗೋಪಾಲಕೃಷ್ಣ ಹಾಗೂ ಮುಖ್ಯಾಧಿಕಾರಿ ಶ್ರೀಧರ್ ಮತಗಟ್ಟೆಗಳಿಗೆ ಭೇಟಿ ನೀಡಿದ್ದರು.

ಇದೇ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀವಿದ್ಯಾ ಅವರು ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಹದಿನೆಂಟು ವಾರ್ಡ್‍ಗಳಲ್ಲಿ ಶಾಂತಿಯುತ ಮತದಾನಕ್ಕಾಗಿ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್‍ನ್ನು ಒದಗಿಸಲಾಗಿದೆ ಎಂದರು.

ಪೀಚೆ ಕತ್ತಿಗೆ ಆಕ್ಷೇಪ

ವಿವಾಹ ಸಮಾರಂಭಕ್ಕೆ ತೆರಳಿ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ 5ನೇ ವಾರ್ಡ್‍ನಲ್ಲಿ ಮತದಾನಕ್ಕೆ ಬಂದಿದ್ದ ಮಹೇಶ್ ನಾಚಯ್ಯ ಅವರನ್ನು ಮತಗಟ್ಟೆಗೆ ತೆರಳಲು ಪೊಲೀಸರು ಆಕ್ಷೇಪಣೆ ವ್ಯಕ್ತಪಡಿಸಿದರು. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಇದೇ ರೀತಿಯ ಸಾಂಪ್ರದಾಯಿಕ ಪೀಚೆ ಕತ್ತಿಯಿರುವ ಕೊಡವ ಉಡುಪಿನಲ್ಲಿ ಮತ ಚಲಾಯಿಸಿರುವದಾಗಿ ಪೊಲೀಸರಿಗೆ ತಿಳಿಸಿದರೂ, ಅದನ್ನು ಪೊಲೀಸರು ಒಪ್ಪಲಿಲ್ಲ. ಅದೇ ಮತಗಟ್ಟೆಯ ದಾರಿಯಲ್ಲಿ ಬಂದ ಉಪ ವಿಭಾಗಾಧಿಕಾರಿ ಜವರೇಗೌಡ ಅವರು ಪೀಚೆಕತ್ತಿ ಇಲ್ಲದೆ ಕೊಡವ ಉಡುಪಿನಲ್ಲಿ ಮತ ಚಲಾಯಿಸಲು ಅಭ್ಯಂತರವಿಲ್ಲ. ಪೀಚೆ ಕತ್ತಿ ತೆಗೆದು ಹೊರಗಡೆ ಇಟ್ಟು ಮತ ಚಲಾಯಿಸುವಂತೆ ನಿರ್ದೇಶಿಸಿದರು.

ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಇ.ಸಿ. ಜೀವನ್ ಹನ್ನೊಂದನೇ ವಾರ್ಡ್‍ನಲ್ಲಿ ಮತ ಚಲಾಯಿಸಿದ್ದು ಮರು ಆಯ್ಕೆಗಾಗಿ ಹದಿನಾಲ್ಕನೇ ವಾರ್ಡ್‍ನಿಂದ ಸ್ಪರ್ಧಿಸಿದ್ದಾರೆ. ಪಟ್ಟಣ ಪಂಚಾಯಿತಿಗೆ ನಾಲ್ಕು ಬಾರಿ ಸ್ಪರ್ಧಿಸಿ ಗೆಲುವು ಸಾಧಿಸಿರುವ ಎಸ್.ಎಚ್. ಮೈನುದ್ದೀನ್ ಐದನೇ ಬಾರಿಗೂ ಮರು ಆಯ್ಕೆ ಬಯಸಿ ಹನ್ನೆರಡನೇ ವಾರ್ಡ್‍ನಲ್ಲಿ ಸ್ಪರ್ಧಾ ಕಣದಲ್ಲಿದ್ದಾರೆ.

ಇಂದು ಮತಗಟ್ಟೆಗಳಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಗಳ ಪರವಾಗಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಕಾಫಿ ಮಂಡಳಿಯ ರೀನಾ ಪ್ರಕಾಶ್, ಜಿಲ್ಲಾ ಪಂಚಾಯಿತಿ ಸದಸ್ಯರುಗಳಾದ ಶಶಿ ಸುಬ್ರಮಣಿ, ಮಲ್ಲಂಡ ಮಧು ದೇವಯ್ಯ, ಕಾಂಗ್ರೆಸ್-ಜೆ.ಡಿ.ಎಸ್. ಮೈತ್ರಿ ಕೂಟದ ಪರವಾಗಿ ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ, ಕಾಂಗ್ರೆಸ್ ಪಕ್ಷದ ಬ್ಲಾಕ್ ಅಧ್ಯಕ್ಷ ಆರ್.ಕೆ. ಅಬ್ದುಲ್ ಸಲಾಂ ಮತ್ತಿತರ ಪ್ರಮುಖರು ವಿವಿಧ ಮತಗಟ್ಟೆಯಲ್ಲಿ ಪ್ರಚಾರದಲ್ಲಿ ತೊಡಗಿದ್ದರು.

ಡಿ.ವೈ.ಎಸ್.ಪಿ. ನಾಗಪ್ಪ ನೇತೃತ್ವದಲ್ಲಿ 18 ಮಹಿಳಾ ಪೊಲೀಸರು ಸೇರಿದಂತೆ ಒಟ್ಟು 137 ಮಂದಿ ಬಂದೋಬಸ್ತ್‍ನಲ್ಲಿ ನಿರತರಾಗಿದ್ದರು.