ಕೂಡಿಗೆ, ಅ. 30: ಕಾವೇರಿ ನದಿಯಿಂದ ಆರು ಗ್ರಾಮ ಪಂಚಾಯ್ತಿ ವ್ಯಾಪ್ತಿಗಳ 12 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ 12 ಕೋಟಿ ರೂ ವೆಚ್ಚದ ಬೃಹತ್ ಯೋಜನೆಯು ಪ್ರಾರಂಭಗೊಂಡು ಹತ್ತು ವರ್ಷಗಳು ಕಳೆದಿದೆ. ಕಾವೇರಿ ನದಿಯಿಂದ ಹೆಬ್ಬಾಲೆ ಗ್ರಾಮ ಪಂಚಾಯಿತಿಯ ಕಟ್ಟಡ ಸಮೀಪವಿರುವ 2.5 ದಶಲಕ್ಷ ಸಾಮಾಥ್ರ್ಯದ ಬೃಹತ್ ನೀರಿನ ಟ್ಯಾಂಕ್, ನೀರು ಶುದ್ಧೀಕರಣದ ಘಟಕ, ಬೃಹತ್ತಾದ ಪೈಪ್ ಲೈನ್‍ಗಳ ಮೂಲಕ ನದಿಯಿಂದ ನೀರನ್ನು ಬೃಹತ್ ಟ್ಯಾಂಕಿಗೆ ಸರಬರಾಜು ಮಾಡಿಕೊಂಡು ನಂತರ ಅದೇ ಕೇಂದ್ರದಲ್ಲಿ ಶುದ್ಧೀಕರಣಗೊಳಿಸಿ ಆರು ಗ್ರಾಮ ಪಂಚಾಯಿತಿಯ 12 ಹಳ್ಳಿಗಳ ಟ್ಯಾಂಕ್‍ಗಳಿಗೆ ಸರಬರಾಜು ಮಾಡುವ ಉದ್ದೇಶ ಹೊಂದಿದೆ. ಆದರೆ ಇದೀಗ ಶುದ್ಧೀಕರಣ ಘಟಕದಲ್ಲಿ ಎರಡೂ ಯಂತ್ರ ಕಾರ್ಯನಿರ್ವಹಿಸುತ್ತಿದೆ. ಆದರೆ, ಸಿಬ್ಬಂದಿಗಳ ಮತ್ತು ಅಧಿಕಾರಿಗಳ ಹೊಂದಾಣಿಕೆಯ ಸಮಸ್ಯೆಯೊಂದು ಕೂಡಿಗೆ, ಕೂಡುಮಂಗಳೂರು, ಮುಳ್ಳುಸೋಗೆ ವ್ಯಾಪ್ತಿಗೆ ನೀರು ಸರಬರಾಜಾಗುತ್ತಿರುವದು ಸ್ಥಗಿತಗೊಂಡಿದೆ.

ಹೆಬ್ಬಾಲೆಯ ಹೃದಯ ಭಾಗದಲ್ಲಿ ನೀರು ಶುದ್ಧೀಕರಣ ಘಟಕ ಹಾಗೂ ಬೃಹತ್ ನೀರಿನ ಟ್ಯಾಂಕ್ ಅನ್ನು ನಿರ್ಮಾಣಗೊಳಿಸಿ 6 ಗ್ರಾಮ ಪಂಚಾಯಿತಿ ವ್ಯಾಪ್ತಿಯ 12 ಉಪಗ್ರಾಮಗಳಿಗೆ ನೀರೊದಗಿಸುವ ಈ ಬೃಹತ್ ಯೋಜನೆ ಇದಾಗಿದೆ. 6 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಪ ಗ್ರಾಮಗಳವರೆಗೂ ಒದಗಿಸಬೇಕಾದ ನೀರು ಕಳೆದ ಒಂದುವಾರದಿಂದ ತೊರೆನೂರು, ಶಿರಂಗಾಲ ಸರಬರಾಜಾಗುತ್ತಿಲ್ಲ ಹಾಗೂ ಬಹುದೊಡ್ಡ ಯೋಜನೆ ಯಾಗಿರುವ ಕುಡಿಯುವ ನೀರಿನ ಯೋಜನೆಯಲ್ಲಿ ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಕೂಡ್ಲೂರು ಮತ್ತು ಮುಳ್ಳುಸೋಗೆ ಗ್ರಾಮ ಪಂಚಾಯಿತಿ

(ಮೊದಲ ಪುಟದಿಂದ) ವ್ಯಾಪ್ತಿಗೆ ನೀರು ಸರಬರಾಜಾಗುತ್ತಿಲ್ಲ. ಹೆಬ್ಬಾಲೆಯಿಂದ ಮುಳ್ಳುಸೋಗೆವರೆಗೆ ನೀರು ಸರಬರಾಜಾಗುತ್ತಿರುವ ಯೋಜನೆಯು ಕಾಮಗಾರಿಯಲ್ಲಿ ಸೇರಿದ್ದರೂ ಇವರಿಗೂ ಕೂಡುಮಂಗಳೂರಿನ ಕೂಡ್ಲೂರು ಹಾಗೂ ಮುಳ್ಳುಸೋಗೆ ಗ್ರಾಮ ಪಂಚಾಯಿತಿವರೆಗೆ ನೀರು ತಲುಪಿಲ್ಲ. ಆದರೆ ಕಾಮಗಾರಿ ಮುಗಿದು ಉದ್ಘಾಟನೆಗೊಂಡು ನಾಲ್ಕು ವರ್ಷಗಳೇ ಕಳೆದರೂ ಇದುವರೆಗೂ ನೀರು ಮಾತ್ರ ಮುಳ್ಳುಸೋಗೆ ಗ್ರಾ.ಪಂ ವ್ಯಾಪ್ತಿಯವರೆಗೂ ತಲುಪಿಲ್ಲ.

ಶಿರಂಗಾಲದಿಂದ ಮುಳ್ಳುಸೋಗೆ ಗ್ರಾಮ ಪಂಚಾಯಿತಿವರೆಗೆ ಬೃಹತ್ ಪೈಪ್‍ಗಳನ್ನು ಅಳವಡಿಸಿ ಅವುಗಳ ಮೂಲಕ ನೀರನ್ನು ಹರಿಸಲು ಹೆಬ್ಬಾಲೆಯಿಂದ ಬಂದ ನೀರನ್ನು ಆಯಾ ಗ್ರಾಮ ಪಂಚಾಯಿತಿಗಳಲ್ಲಿ ತಾಲೂಕು ಪಂಚಾಯಿತಿ ಅನುದಾನದಲ್ಲಿ ನಿರ್ಮಿಸಿಕೊಂಡಿರುವ ಟ್ಯಾಂಕ್‍ಗಳಿಗೆ ನೀರನ್ನು ತುಂಬಿಸಿ ನಂತರ ಉಪ ಪೈಪ್‍ಗಳ ಮೂಲಕ ಎಲ್ಲಾ ಗ್ರಾಮದ ಬೀದಿಗಳಿಗೆ ನೀರೋದಗಿಸುವ ಯೋಜನೆ ಇದಾಗಿದೆ. ಆದರೆ, ಇದೀಗ ಹೆಬ್ಬಾಲೆ ಯಿಂದ ಬಂದ ನೀರನ್ನು ಗ್ರಾಮ ಪಂಚಾಯ್ತಿಗಳಲ್ಲೂ ಪರಿಶೀಲಿಸದೆ ನೇರವಾಗಿ ಗ್ರಾಮದ ಮನೆಗಳಿಗೆ ಸರಬರಾಜು ಮಾಡುವ ಕಾರ್ಯದಲ್ಲಿ ಎಲ್ಲಾ ಗ್ರಾಮ ಪಂಚಾಯಿತಿಯವರು ತಲ್ಲೀನರಾಗಿದ್ದಾರೆ.

ಕೋಟಿಗಟ್ಟಲೆ ಸರಕಾರದ ಹಣವನ್ನು ವಿನಿಯೋಗಿಸಿ ಕುಡಿಯುವ ನೀರನ್ನು ಒದಗಿಸುತ್ತೇವೆ ಎಂದು ಬೃಹತ್ ಯೋಜನೆಯನ್ನು ಹಮ್ಮಿಕೊಂಡು ಕಾರ್ಯರೂಪಕ್ಕೆ ತಂದು ಇದುವರೆಗೂ ನೀರು ಮಾತ್ರ ನಾಲ್ಕು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಿಗೆ ತಲುಪಿಲ್ಲ. ಒಳಚರಂಡಿ ಮತ್ತು ನೀರು ಸರಬರಾಜು ಮಂಡಳಿ ಇಲಾಖೆಯಿಂದ ಸರಬರಾಜು ವ್ಯವಸ್ಥೆಯ ಜವಬ್ದಾರಿಯನ್ನು ಜಿಲ್ಲಾ ಪಂಚಾಯ್ತಿ ಗ್ರಾಮಾಂತರ ಕುಡಿಯುವ ನೀರಿನ ಸರಬರಾಜು ಮಂಡಳಿ ವಹಿಸಿಕೊಂಡಿದೆ. ಆದರೆ, ಕುಡಿಯುವ ನೀರು ಮಾತ್ರ ಗ್ರಾಮಗಳಿಗೆ ತಲುಪಿಲ್ಲ. ಹಣ ಮಾತ್ರ ಗುತ್ತಿಗೆದಾರನಿಗೆ ಕೈಸೇರಿದೆ. ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಕೂಡ್ಲೂರು ಮತ್ತು ಮುಳ್ಳು ಸೋಗೆ ಗ್ರಾ.ಪಂ.ಗಳಲ್ಲಿ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಹೆಬ್ಬಾಲೆಯಲ್ಲಿ ಈ ಬೃಹತ್ ಯೋಜನೆಯ ಕುಡಿಯುವ ನೀರು ಮುಳ್ಳುಸೋಗೆ ಗ್ರಾಮ ಪಂಚಾಯಿತಿಯ ನೀರಿನ ಟ್ಯಾಂಕ್‍ಗೆ ನೀರು ಬಂದಿದ್ದರೇ ಸಮಸ್ಯೆ ಬಗೆಹರಿಯುತ್ತಿತ್ತು.

ಆದರೆ, ಹೆಬ್ಬಾಲೆಯಿಂದ ಮುಳ್ಳುಸೋಗೆವರೆಗೆ ಹೆಸರಿಗೆ ಮಾತ್ರ ಪೈಪ್ ಲೈನ್ ಅಳವಡಿಸಿದ್ದು, ಇದುವರೆಗೂ ನೀರು ಬರುತ್ತಿಲ್ಲ ಎಂಬುದು ಮುಳ್ಳುಸೋಗೆ ವ್ಯಾಪ್ತಿಯ ನಿವಾಸಿಗಳ ಆರೋಪ.

ಜಿಲ್ಲಾ ಪಂಚಾಯಿತಿಯು ಬೃಹತ್ ನೀರಿನ ಯೋಜನೆಯ ಉಸ್ತುವಾರಿಯನ್ನು ವಹಿಸಿಕೊಂಡಿರು ವದರಿಂದ ನೀರಿಗೆ ಹಾಹಾಕಾರ ಬಂದೊದಗಿರುವ ಇಂತಹ ಸಂದ ರ್ಭ ಇದರತ್ತ ಗಮನಹರಿಸಿ ತುರ್ತಾಗಿ ಕ್ರಮ ಕೈಗೊಳ್ಳಬೇಕೆಂದು ಈ ವ್ಯಾಪ್ತಿಯ ಸಾರ್ವಜನಿಕರ ಆಗ್ರಹವಾಗಿದೆ. ಕೆ.ಕೆ. ನಾಗರಾಜಶೆಟ್ಟಿ