ಗೋಣಿಕೊಪ್ಪಲು, ಅ. 30: ಕಾನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರಿಲ್ಲದೆ ಹಲವು ತಿಂಗಳು ಕಳೆದಿವೆ. ಅನುಭವ ಹೊಂದಿರುವ ಶುಶ್ರೂಷಕಿಯ ಕೊರತೆಯೂ ಇದೆ. ಇಲ್ಲಿನ ಆಸ್ಪತ್ರೆ ವೈದ್ಯರ ವಸತಿ ಗೃಹ, ಆವರಣ ಗೋಡೆ ದುರಸ್ತಿಗೆ ಒಳಪಟ್ಟಿದೆ. ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರೂ ಯಾವದೇ ಪ್ರಯೋಜನವಾಗಿಲ್ಲ. ಶಾಶ್ವತ ವೈದ್ಯರ ನೇಮಕಕ್ಕೆ 15 ದಿನಗಳ ಗಡುವು ನೀಡುವ, ನಿರ್ಲಕ್ಷ್ಯ ಮುಂದುವರಿದಲ್ಲಿ ಸರ್ಕಾರಿ ಆಸ್ಪತ್ರೆಗೆ ಬೀಗ ಹಾಕಿ ಧರಣಿ ಸತ್ಯಾಗ್ರಹ ನಡೆಸುವ ಎಂದು ಪೆÇನ್ನಂಪೇಟೆ ಕೊಡವ ಸಮಾಜ ಅಧ್ಯಕ್ಷ ರಾಜೀವ್ ಬೋಪಯ್ಯ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಕಾನೂರು ಪ್ರಾಥಮಿಕ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಈ ಹಿಂದೆ ಅಧಿಕಾರಿಗಳ ಗೈರು ಹಾಜರಿ ಯಿಂದಾಗಿ ರದ್ಧುಗೊಂಡಿದ್ದ ಗೋಣಿಕೊಪ್ಪಲು, ಅ. 30: ಕಾನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರಿಲ್ಲದೆ ಹಲವು ತಿಂಗಳು ಕಳೆದಿವೆ. ಅನುಭವ ಹೊಂದಿರುವ ಶುಶ್ರೂಷಕಿಯ ಕೊರತೆಯೂ ಇದೆ. ಇಲ್ಲಿನ ಆಸ್ಪತ್ರೆ ವೈದ್ಯರ ವಸತಿ ಗೃಹ, ಆವರಣ ಗೋಡೆ ದುರಸ್ತಿಗೆ ಒಳಪಟ್ಟಿದೆ. ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರೂ ಯಾವದೇ ಪ್ರಯೋಜನವಾಗಿಲ್ಲ. ಶಾಶ್ವತ ವೈದ್ಯರ ನೇಮಕಕ್ಕೆ 15 ದಿನಗಳ ಗಡುವು ನೀಡುವ, ನಿರ್ಲಕ್ಷ್ಯ ಮುಂದುವರಿದಲ್ಲಿ ಸರ್ಕಾರಿ ಆಸ್ಪತ್ರೆಗೆ ಬೀಗ ಹಾಕಿ ಧರಣಿ ಸತ್ಯಾಗ್ರಹ ನಡೆಸುವ ಎಂದು ಪೆÇನ್ನಂಪೇಟೆ ಕೊಡವ ಸಮಾಜ ಅಧ್ಯಕ್ಷ ರಾಜೀವ್ ಬೋಪಯ್ಯ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಕಾನೂರು ಪ್ರಾಥಮಿಕ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಈ ಹಿಂದೆ ಅಧಿಕಾರಿಗಳ ಗೈರು ಹಾಜರಿ ಯಿಂದಾಗಿ ರದ್ಧುಗೊಂಡಿದ್ದ ಹಲವೆಡೆ ಅಪಾಯವನ್ನು ಆಹ್ವಾನಿಸುತ್ತಿದ್ದು, ಕಾಡು ಬಳ್ಳಿ ಹಾಗೂ ಮರದ ರೆಂಬೆಗಳು ತಾಗುತ್ತಿವೆ. ಸುಮಾರು 70 ಕಟೌಟ್ (ವಿದ್ಯುತ್ ಲೇನ್ ತಳಭಾಗದಲ್ಲಿ ರಕ್ಷಣಾ ಕವಚ ಅಳವಡಿಕೆ) ಅಳವಡಿಸುವ ಅಗತ್ಯವಿದೆ ಎಂದು ಗ್ರಾಮಸ್ಥರ ಪ್ರಶ್ನೆಗೆ ಮುಂದೆ ಕ್ರಮ ಕೈಗೊಳ್ಳಲಾಗುವದು ಎಂದು ಮಧುಕುಮಾರ್ ಹೇಳಿದರು. ಇದೇ ಸಂದರ್ಭ ಅಧ್ಯಕ್ಷೆ ಲತಾಕುಮಾರಿ ತನ್ನ ಮನೆಯ ಮೇಲೆಯೇ 11 ಕೆ.ವಿ. ವಿದ್ಯುತ್ ಲೇನ್ ಕೈಗೆಟುಕುವ ಅಪಾಯದಲ್ಲಿದ್ದು ಇದುವರೆಗೂ ಸರಿಪಡಿಸಿಲ್ಲ. ಮೂರು ಮಾರ್ಗದಾಳುಗಳು ನಿಯೋಜನೆ ಗೊಂಡಿದ್ದರೂ ಇಲ್ಲಿನ ಗ್ರಾಮಸ್ಥರ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಆರೋಪಿಸಿದರು.

ಗ್ರಾಮಸ್ಥರು ಅಲ್ಲಲ್ಲಿ ವಿದ್ಯುತ್ ಕಂಬಗಳ ಅಳವಡಿಕೆ ಅಗತ್ಯವಿದ್ದು ಒಂದು ವರ್ಷವಾದರೂ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಕಳೆದ ಬಾರಿ 20 ವಿದ್ಯುತ್ ಕಂಬಗಳು ಲಾರಿಯಲ್ಲಿ ಬಂದಿದ್ದರೂ ಕೆಲವು ಕಂಬಗಳು ಮಾಯವಾಗಿದೆ. ಇಲಾಖಾಧಿಕಾರಿ ಗಳೇ ಮಾರಿಕೊಂಡಿದ್ದಾರೆ ಎಂದು ಆರೋಪಿಸಿದರು.

ಜಿ.ಪಂ. ಸದಸ್ಯ ಬಾನಂಡ ಪ್ರಥ್ಯು ಮಾತನಾಡಿ, ಬಾಳೆಲೆಗೆ ವಿದ್ಯುತ್ ಲೇನ್ ಕಾಮಗಾರಿ ಪೂರ್ಣ ಗೊಂಡಿದ್ದು, ಪೆÇನ್ನಂಪೇಟೆ-ಕಾನೂರು ನಡುವೆ ಆರಂಭ ಗೊಳ್ಳಲಿದೆ. ಮುಂದಿನ ಎರಡು ತಿಂಗಳ ಅವಧಿಯಲ್ಲಿ ಕಾನೂರು ಗ್ರಾಮಸ್ಥರ ವಿದ್ಯುತ್ ಸಮಸ್ಯೆಯನ್ನು ಈಡೇರಿಸುವಂತೆ ಅಧಿಕಾರಿಗೆ ಸೂಚನೆ ನೀಡಿದರು. ಜಿ.ಪಂ. ಕಾಮಗಾರಿಗೆ ಗ್ರಾ.ಪಂ. ಅನುಮತಿ ಕಡ್ಡಾಯವಲ್ಲ. ಓವರ್ ಹೆಡ್ ಟ್ಯಾಂಕ್ ತೆರೆದ ಬಾವಿ, ಇನ್ನಿತರ ಕಾಮಗಾರಿ ಪೂರ್ಣಗೊಂಡ ನಂತರ ನಿರ್ವಹಣೆಯನ್ನು ಗ್ರಾಮ ಪಂಚಾಯಿತಿ ಸುಪರ್ದಿಗೆ ಒಪ್ಪಿಸಲಾಗುತ್ತದೆ ಎಂದು ಹೇಳಿದರು.

ಕಾನೂರು ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಪ್ರಕರಣ ಅಧಿಕವಾಗಿದ್ದು ಈ ಬಗ್ಗೆ ಪೆÇಲೀಸರಿಗೆ ಮಾಹಿತಿ ನೀಡಲಾಗಿದ್ದರೂ ಯಾವದೇ ಕ್ರಮ ಜರುಗಿಸಿರುವದಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ಬಿಎಸ್‍ಎನ್‍ಎಲ್ ಇಲಾಖೆಯ ಅವ್ಯವಸ್ಥೆಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಸಭೆಯಲ್ಲಿ ಪ್ರಮುಖವಾಗಿ ಕಂದಾಯ, ಕೃಷಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖಾಧಿಕಾರಿ ಗಳು ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸಿದರು.

ಸಭೆಯ ಆರಂಭದಲ್ಲಿ ನಿಧನ ಹೊಂದಿದ ಗ್ರಂಥಾಲಯ ಮೇಲ್ವಿಚಾರಕಿ ಗೀತಾ, ಜಿಲ್ಲೆಯ ಜಲಪ್ರಳಯದಲ್ಲಿ ಮೃತಪಟ್ಟವರಿಗೆ ಸಂತಾಪ ವ್ಯಕ್ತಪಡಿಸಲಾಯಿತು. ಗ್ರಾ.ಪಂ. ಸದಸ್ಯ ಕೆ.ಆರ್. ಸುರೇಶ್, ಕಾಡ್ಯಮಾಡ ಬೋಪಣ್ಣ, ನರೇಂದ್ರ, ಸತೀಶ್, ಗಣೇಶ್ ಕುಮಾರ್, ಪ್ರಭು, ಬೋಪಣ್ಣ ಮುಂತಾದವರು ಮಾತನಾಡಿದರು.

ವೇದಿಕೆಯಲ್ಲಿ ಉಪಾಧ್ಯಕ್ಷೆ ಗೀತಾ, ಸದಸ್ಯರಾದ ಶಿಲ್ಪಾ, ಕೇಚಮಾಡ ಸಿದ್ಧು, ದೀಪಕ್ ಮೊಣ್ಣಪ್ಪ, ಅಯ್ಯಪ್ಪ, ಚೋಮ ಮುಂತಾದವರು ಉಪಸ್ಥಿತರಿದ್ದರು. ಪಿಡಿಓ ಪ್ರಭಾಕರ್ ಸ್ವಾಗತಿಸಿ, ವಂದಿಸಿದರು.

- ಟಿ.ಎಲ್.ಎಸ್.