ಮಡಿಕೇರಿ, ಅ. 30: ಕೊಡವ ಭಾಷೆಯ ಎಲ್ಲಾ ವರ್ಗದ ಲೇಖಕರು ಮತ್ತು ಪುಸ್ತಕ ಪ್ರಕಾಶಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನ. 1 ರಂದು ಕಕ್ಕಬೆಯಲ್ಲಿ ನಡೆಯಲಿರುವ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿಯ 150ನೇ ಜನ್ಮೋತ್ಸವ ಸಂದರ್ಭ ಕೊಡವ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಉಚಿತ ಅವಕಾಶ ಕಲ್ಪಿಸಲಾಗುವದು. ಕೊಡವ ಭಾಷೆಯ ಕಥೆ, ಕವನ, ಕಾದಂಬರಿ, ಹಾಡುಗಳು, ನಾಟಕ, ಚಿತ್ರಕಥೆ ಇತ್ಯಾದಿ ಪುಸ್ತಕಗಳನ್ನು ಯಾರು ಬೇಕಾದರೂ ಅಂದು ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ಕಕ್ಕಬೆ ಪ್ರೌಢಶಾಲಾ ಆವರಣದಲ್ಲಿ ಪ್ರದರ್ಶನ - ಮಾರಾಟಕ್ಕೆ ಇಡಬಹುದು. ಆಸಕ್ತರು ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08272-228898, 9448720168, 9845097500 ಯಲ್ಲಿ ವ್ಯವಹರಿಸಬಹುದಾಗಿದೆ ಎಂದು ತಿರೊಬೊಳ್‍ಚ ಸಂಘಟನೆಯ ಅಧ್ಯಕ್ಷೆ ಡಾಟಿ ಪೂವಯ್ಯ ತಿಳಿಸಿದ್ದಾರೆ.