ವೀರಾಜಪೇಟೆ, ಅ. 29: ವೀರಾಜಪೇಟೆ ರೋಟರಿ ಕ್ಲಬ್‍ಗೆ ಜಿಲ್ಲಾ ಗರ್ವನರ್ ರೋ: ಪಿ.ರೋಹಿನಾಥ್ ತಾ;31 ರಂದು ಅಧಿಕೃತವಾಗಿ ಭೇಟಿ ನೀಡಲಿದ್ದಾರೆ ಎಂದು ಅಧ್ಯಕ್ಷ ಎಂ.ಎಸ್.ರವಿ ತಿಳಿಸಿದ್ದಾರೆ.

ಪ್ರೆಸ್‍ಕ್ಲಬ್‍ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರವಿ ಅವರು ಅತಿಥಿಗಳಾಗಿ ಅಸಿಸ್ಟೆಂಟ್ ಗವರ್ನರ್ ರೋ:ಧರ್ಮಪುರ ನಾರಾಯಣ ಹಾಗೂ ಜೋನಲ್ ಲೆ: ರೋ: ದೇಚಮ್ಮ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಕಾರ್ಯದರ್ಶಿ ರೋ: ಚೇತನ್ ಮುತ್ತಣ್ಣ ಮಾತನಾಡಿ ಗವರ್ನರ್ ಅಧಿಕೃತ ಭೇಟಿ ಸಮಾರಂಭ ರಾತ್ರಿ 7ಗಂಟೆಗೆ ರೋಟರಿ ಸಭಾಂಗಣದಲ್ಲಿ ನಡೆಯಲಿದೆ ಎಂದು ತಿಳಿಸಿದರು.