ಕರಿಕೆ, ಅ. 29: ಇಂಡೋನೇಷ್ಯಾದ ಜಕಾರ್ತಾ ರಾವಮಾಂಗನ್ ಕ್ರೀಡಾಂಗಣದಲ್ಲಿ ನಡೆದ 35 ವರ್ಷ ಮೇಲ್ಪಟ್ಟ ಮಹಿಳೆಯರ ಅಂತರರಾಷ್ಟ್ರೀಯ ಅಥ್ಲೆಟಿಕ್ಸ್‍ನಲ್ಲಿ ಮಡಿಕೇರಿ ತಾಲೂಕಿನ ಪೆರಾಜೆ ಗ್ರಾಮದ ಬಂಗಾರಕೋಡಿಮನೆ ಹರೀಶ್ ಅವರ ಪತ್ನಿ ವಿದ್ಯಾ ಹರೀಶ್ ಒಂದು ಚಿನ್ನ ಮತ್ತು ಮೂರು ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.