ಮಡಿಕೇರಿ, ಅ. 30: ಕಲಿಯಂಡ ಸರಸ್ವತಿ ಚಂಗಪ್ಪ ಇವರ ಪ್ರಾಯೋಜಿತ ಜಿಲ್ಲಾಮಟ್ಟದ ಅಂತರ್ ಶಾಲಾ ಚರ್ಚಾ ಸ್ಪರ್ಧೆಯನ್ನು ತಾ. 29 ರಂದು ಮಡಿಕೇರಿಯ ಜನರಲ್ ತಿಮ್ಮಯ್ಯ ಶಾಲೆಯಲ್ಲಿ ನಡೆಸಲಾಯಿತು. ಇದರಲ್ಲಿ ಜಿಲ್ಲೆಯ ಹತ್ತು ಶಾಲೆಗಳು ಭಾಗವಹಿಸಿದ್ದವು. ಈ ಸ್ಪರ್ಧೆಯಲ್ಲಿ ಜ್ಞಾನಗಂಗಾ ರೆಸಿಡೆನ್ಸಿಯಲ್ ಶಾಲೆಯ ಸಿ.ಟಿ. ಮೌನ ಮತ್ತು ಕೋಯಲ್ ಚಂದ್ರೇಶ್ ಪ್ರಥಮ, ಲೂಡ್ರ್ಸ್ ಹಿಲ್ ಪ್ರೌಢಶಾಲೆಯ ಜೋತ್ಸ್ನಾ ಆಂಟನಿ ಮತ್ತು ರಿಝಾ ಮರಿಯಮ್ ದ್ವಿತೀಯ ಮತ್ತು ಕಾಲ್ಸ್ ಶಾಲೆಯ ಕವನ ಕಾವೇರಮ್ಮ ಮತ್ತು ಬಿ.ಹೆಚ್. ಕುಶಾಲ್ ತೃತೀಯ ಬಹುಮಾನಗಳನ್ನು ಪಡೆದುಕೊಂಡರು.

ಅತ್ಯುತ್ತಮವಾಗಿ ಮಾತನಾಡಿದ ಕಾಲ್ಸ್ ಶಾಲೆಯ ಕವನ ಕಾವೇರಮ್ಮ ‘ಬೆಸ್ಟ್ ಸ್ಪೀಕರ್’ ಬಹುಮಾನವನ್ನು ಪಡೆದುಕೊಂಡರು. ಗುಲಾಬಿ ಜನಾರ್ದನ್, ಪಿ.ಎಂ. ದೇವಕಿ ಮತ್ತು ರೋಹಿಣಿ ಅವರು ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು.