ಪೊನ್ನಂಪೇಟೆ, ಅ. 30: ಕೊಡವ ಸಮಾಜದ ಅಧೀನದಲ್ಲಿ ನ. 10 ರಂದು ಪ್ರತೀ ದಿನ ಸಂಜೆ 5 ಗಂಟೆಗೆ ಅಪ್ಪಚ್ಚ ಕವಿ ಶಾಲಾ ಆವರಣದಲ್ಲಿ ಕೊಡವ ಆಟ್-ಪಾಟ್ ತರಬೇತಿ ಶಿಬಿರ ನಡೆಯಲಿದೆ. ಇದರಲ್ಲಿ ಕೋಲಾಟ, ಬೊಳಕಾಟ್, ಕತ್ತಿಯಾಟ್, ಪರೆಯಕಳಿ, ಕಪ್ಪೆಯಾಟ್, ತಾಲಿಪಾಟ್, ಬಾಳೋಪಾಟ್, ಉಮ್ಮತ್ತಾಟ್ ಕಲಿಸಿಕೊಡಲಾಗುತ್ತದೆ. ಆಸಕ್ತರು ಶಿಬಿರದಲ್ಲಿ ಭಾಗವಹಿಸುವಂತೆ ಕೊಡವ ಸಮಾಜದ ಸಾಂಸ್ಕøತಿಕ ಸಂಚಾಲಕ ಕಾಳೇಮಾಡ ಯಂ. ಮೋಟಯ್ಯ ತಿಳಿಸಿದ್ದಾರೆ.