ಮಡಿಕೇರಿ, ಅ. 30: ಅಸ್ಸಾಂನ ಗೌಹಾಟಿಯ ಮುಖ್ಯ ನ್ಯಾಯಾಧೀಶ ರಾಗಿ ನಿಯುಕ್ತಿಗೊಂಡಿರುವ ಕೊಡಗು ಮೂಲದವರಾದ ಅಜ್ಜಿಕುಟ್ಟಿರ ಎಸ್. ಬೋಪಣ್ಣ ಅವರು ನಿನ್ನೆ ಅಧಿಕಾರ ವಹಿಸಿಕೊಂಡಿದ್ದಾರೆ. ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದ ಬೋಪಣ್ಣ ಅವರನ್ನು ಗೌಹಾಟಿಯ ಮುಖ್ಯ ನ್ಯಾಯಾಧೀಶರಾಗಿ ಆಯ್ಕೆ ಮಾಡಿ ಸುಪ್ರೀಂ ಕೋರ್ಟ್‍ನ ಕೊಲಿಜಿಯಂ ಶಿಫಾರಸ್ಸು ನೀಡಿತ್ತು. ಇದಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದು, ನಿನ್ನೆ ಅವರು ಅಸ್ಸಾಂ ರಾಜ್ಯ ಪಾಲರ ಉಪಸ್ಥಿತಿಯಲ್ಲಿ ಅಧಿಕಾರ ಸ್ವೀಕರಿಸಿದರು. ಈ ಸಮಾರಂಭದಲ್ಲಿ ಬೋಪಣ್ಣ ಅವರ ಕುಟುಂಬ ಸದಸ್ಯರು ಪಾಲ್ಗೊಂಡಿದ್ದರು.