ಮಡಿಕೇರಿ, ಅ.30 :ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಯಾವದೇ ರಾಜರ ಜಯಂತಿ ಆಚರಣೆ ಮಾಡಬಾರದು ಎಂದು ಅಭಿಪ್ರಾಯಪಟ್ಟಿರುವ ಮಾಜಿ ಕಾನೂನು ಸಚಿವ ಯಂ.ಸಿ.ನಾಣಯ್ಯ, ಟಿಪ್ಪು ಜಯಂತಿಯನ್ನು ಬೇಕಾದವರು ಆಚರಿಸಿಕೊಳ್ಳಲಿ, ಆದರೆ ಜಯಂತಿ ಆಚರಣೆ ಹೆಸರಿನಲ್ಲ್ಲಿ ಸಮಾಜದ ಸ್ವಾಸ್ಥ್ಯ ಕೆಡಿಸಿ ಅಮಾಯಕರಿಗೆ ತೊಂದರೆ ನೀಡುವದು ಸರಿಯಾದ ಟಿಪ್ಪು ಜಯಂತಿಯನ್ನು ಬೇಕಾದವರು ಆಚರಿಸಿಕೊಳ್ಳಲಿ, ಆದರೆ ಜಯಂತಿ ಆಚರಣೆ ಹೆಸರಿನಲ್ಲ್ಲಿ ಸಮಾಜದ ಸ್ವಾಸ್ಥ್ಯ ಕೆಡಿಸಿ ಅಮಾಯಕರಿಗೆ ತೊಂದರೆ ನೀಡುವದು ಸರಿಯಾದ ಮೂಕೊಂಡ ನಿತಿನ್ ಕುಶಾಲಪ್ಪ ಬರೆದಿರುವ ಕೊಡಗು ಪ್ರಿನ್ಸಿಪಾಲಿಟಿ ಮತ್ತು ಬ್ರಿಟಿಷ್ ಎಂಪಾಯರ್ ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಟಿಪ್ಪು ಜಯಂತಿ ಆಚರಣೆ ಕೊಡಗಿನವರಿಗೆ ಬೇಡವೆಂದಾದಲ್ಲಿ ವಿಧಾನಸಭೆಯಲ್ಲಿ ನಿರ್ಣಯ ಮಾಡಲಿ. ಅದನ್ನು ಹೊರತು ಪಡಿಸಿ ಪರ, ವಿರೋಧ ನಿರ್ಣಯದಿಂದ ಸಮಾಜದ ಸ್ವಾಸ್ಥ್ಯ ಕೆಡಿಸುವದು ಒಳ್ಳೆಯ ಬೆಳವಣಿಗೆ ಅಲ್ಲವೆಂದು ನಾಣಯ್ಯ ಹೇಳಿದರು.

ಟಿಪ್ಪು ಜಯಂತಿ ವಿಚಾರದಲ್ಲಿ ಕೊಡವರ ಭಾವನೆಗಳನ್ನು ಅರ್ಥೈಸಿಕೊಂಡು ಸರ್ಕಾರದ ಮಟ್ಟದಲ್ಲಿಯೇ ಉತ್ತಮ ನಿರ್ಧಾರ ಕೈಗೊಳ್ಳಬೇಕಾಗಿದೆ. ಒಂದು ವೇಳೆ ಟಿಪ್ಪುವಿನ ಜಯಂತಿ ಆಚರಿಸುವದು ಬೇಡ ಎಂದು ನಿರ್ಧರಿಸಿ ಬಿಟ್ಟರೆ ಮತ್ತೆ ಪ್ರಶ್ನೆಯೇ ಉದ್ಭವಿಸುವದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.(ಮೊದಲ ಪುಟದಿಂದ) ಸದಾ ಶಾಂತಿ, ಸೌಹಾರ್ದತೆ ಯಿಂದ ಜೀವನ ಸಾಗಿಸುತ್ತಿರುವ ಕೊಡಗಿನಲ್ಲಿ ಅಮಾಯಕÀರನ್ನು ಬಳಸಿಕೊಂಡು ಟಿಪ್ಪು ಜಯಂತಿ ವಿಚಾರವಾಗಿ ಪ್ರತಿಭಟನೆ ನಡೆಸುವದು ಸರಿಯಲ್ಲವೆಂದು ನಾಣಯ್ಯ ಕಿವಿಮಾತು ಹೇಳಿದರು.ಪ್ರಚಾರಕ್ಕೆ ಆಚರಣೆ ಬೇಡ : ‘1785 ಕೂರ್ಗ್’ (ಟಿಪ್ಪುಸ್ ಡೈರಿ ಇನ್ ಕೊಡಗು) ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ, ಟಿಪ್ಪು ಸುಲ್ತಾನ್ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವ್ಯಕ್ತಿಯಲ್ಲ. ಬದಲಾಗಿ ತನ್ನ ಸ್ವಾರ್ಥಕ್ಕಾಗಿ ಹೋರಾಟ ನಡೆಸಿದವನು. ಆಡಳಿತ ನಡೆಸಿದ ಕೆಲವೇ ಸಮಯದಲ್ಲಿ ಸ್ಥಳಗಳ ಮೂಲ ಹೆಸರನ್ನು ಬದಲಾಯಿಸಿ ಪರ್ಷಿಯನ್ ಭಾಷೆಯಲ್ಲಿ ಮರು ನಾಮಕರಣ ಮಾಡಿದಾತ ಎಂದು ಆರೋಪಿಸಿದರು. ಇಂದು ಕೇವಲ ಪ್ರಚಾರದ ಉದ್ದೇಶದಿಂದ ಟಿಪ್ಪು ಜಯಂತಿ ಆಚರಿಸುತ್ತಿರುವದು ಸರಿಯಾದ ಕ್ರಮವಲ್ಲವೆಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಡಗು ಪ್ರೆಸ್‍ಕ್ಲಬ್À ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ದೇಶ ಭಕ್ತಿಗೆ ಹೆಸರಾದ ಕೊಡಗು ಜಿಲ್ಲೆಯಲ್ಲಿ ದೇಶ ಭಕ್ತರ ಜಯಂತಿ ಆಚರಿಸುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.

ಲೇಖಕ ಮೂಕೊಂಡ ನಿತಿನ್ ಕುಶಾಲಪ್ಪ ಮಾತನಾಡಿ, ಕೊಡಗಿನ ಇತಿಹಾಸ ಹಾಗೂ ಸಂಸ್ಕøತಿಯ ಬಗ್ಗೆ ಪುಸ್ತಕ ರಚಿಸುವ ಔಚಿತ್ಯದ ಬಗ್ಗೆ ವಿವರಿಸಿದರು. 2013ರಲ್ಲಿ ಬರೆದ ಪುಸ್ತಕದಲ್ಲಿ ಕೊಡಗಿನ ಇತಿಹಾಸದ ಬಗ್ಗೆ ಉಲ್ಲೇಖಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ, ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ ಬೊಳ್ಳಪ್ಪ ಉಪಸ್ಥಿತರಿದ್ದರು.