ಗೋಣಿಕೊಪ್ಪ ವರದಿ, ಅ. 30: ನಡಿಕೇರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗೋಣಿಕೊಪ್ಪ ಕಾವೇರಿ ಪದವಿಪೂರ್ವ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಆಯೋಜಿಸಲಾಗಿದ್ದ ವಾರ್ಷಿಕ ವಿಶೇಷ ಶಿಬಿರ ಸಮಾರೋಪ ಸಮಾರಂಭ ನಡೆಯಿತು.

ಗ್ರಾಮದ ನುರಿತ ನಾಟಿ ವೈದ್ಯೆ ಪಣಿಕರ ಜಿ. ಬೊಳ್ಳಮ್ಮ ಅವರನ್ನು ಶಿಬಿರದಲ್ಲಿ ಸನ್ಮಾನಿಸಲಾಯಿತು. ಗ್ರಾಮಸ್ಥರಿಗೆ ಆಯೋಜಿಸಲಾಗಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ಮುದ್ದಿಯಡ ನಿತಿನ್-ಮುದ್ದಿಯಡ ಕಿರಣ್ ಜೋಯಪ್ಪ ಜೋಡಿ ಪ್ರಥಮ, ಮಾಪಂಡ ಅನಿತ-ಮಲ್ಚೀರ ನಳಿನಿ ಜೋಡಿ ದ್ವಿತೀಯ ಸ್ಥಾನ ಪಡೆದು ಕೊಂಡರು.

ಸಂಜೆ ಕಾವೇರಿ ಕಲಾಸಿರಿ ತಂಡದಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ರಾತ್ರಿ ಶಿಬಿರ ಜ್ಯೋತಿ ಹಚ್ಚಿ ಹಣತೆಗಳಿಂದ ಭಾರತ ನಕ್ಷೆಯನ್ನು ರಚಿಸಿ ಶಿಬಿರಾರ್ಥಿಗಳಲ್ಲಿ ದೇಶಾಭಿಮಾನ ಮೂಡಿಸಿದರು. ಗ್ರಾಮಸ್ಥರು ಹಾಗೂ ಶಿಬಿರಾರ್ಥಿಗಳು ಪರಸ್ಪರ ಆತ್ಮಾವಲೋಕನದ ಮೂಲಕ ಶಿಬಿರದ ಅನುಭವಗಳನ್ನು ಹಂಚಿಕೊಂಡರು.

ನಡಿಕೇರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಎಂ.ಬಿ. ಸೌಮ್ಯ ಯುವ ಜನತೆ ಮಾನವೀಯ ಮೌಲ್ಯ ಹಾಗೂ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡು ಮುನ್ನಡೆಯ ಬೇಕು ಎಂದರು.

ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಡಾ. ಎ.ಸಿ. ಗಣಪತಿ, ಬಲ್ಯಮಂಡೂರು ಗ್ರಾ.ಪಂ. ಅಧ್ಯಕ್ಷ ಚಿಂಡಮಾಡ ಕುಷಿ ಕುಮಾರ್, ನಡಿಕೇರಿ ಸ.ಕಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕಿ ಚಿಮ್ಮಣಮಾಡ ಶಾಂತಿ ಕುಮಾರಿ, ನಿವೃತ್ತ ಕ್ಯಾಪ್ಟನ್ ಮಲ್ಚೀರ ದೇವಯ್ಯ, ತೂಚಮಕೇರಿ ಸ.ಪ್ರಾ. ಶಾಲೆಯ ಮುಖ್ಯ ಶಿಕ್ಷಕಿ ಕೋಳೆರ ವಿ. ಪದ್ಮ, ಕಾಫಿ ಬೆಳೆಗಾರರುಗಳಾದ ಮುದ್ದಿಯಡ ಡಿ. ಮಂಜು, ಆಲೇಮಾಡ ಯು. ರೋಷನ್, ಎಸ್.ಡಿ.ಎಂ.ಸಿ. ಮಾಜಿ ಅಧ್ಯಕ್ಷ ಕೋಳೆರ ಎಸ್. ನರೇಂದ್ರ, ಭಗವತಿ ದೇವಸ್ಥಾನ ಸಮಿತಿ ಅಧ್ಯಕ್ಷ ಕಳ್ಳಿಚಂಡ ಎನ್. ಪೂವಯ್ಯ ಚೀರಂಡ ಎಸ್. ಕಂದ ಸುಬ್ಬಯ್ಯ, ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ಉಪಸ್ಥಿತರಿದ್ದರು. ಹೇಮಾ ಪ್ರಾರ್ಥಿಸಿದರು. ಚನ್ನನಾಯಕ ಸ್ವಾಗತಿಸಿದರು. ಶರಣ್ಯ ಶಿಬಿರದ ವರದಿ ವಾಚಿಸಿದರು. ಎನ್‍ಎಸ್‍ಎಸ್ ಯೋಜನಾಧಿಕಾರಿ ಎಸ್.ಆರ್. ತಿರುಮಲಯ್ಯ ವಂದಿಸಿದರು. ಉಪನ್ಯಾಸಕಿ ಕುಸುಮ್ ಹಾಗೂ ರೋಷಿನಿ ಕಾರ್ಯಕ್ರಮ ನಿರೂಪಿಸಿದರು.

7 ದಿನಗಳ ಕಾಲ ನಡೆದ ಶಿಬಿರದಲ್ಲಿ ಕಾನೂನು ಅರಿವು, ಸ್ವಚ್ಛ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ, ಸಾಮಾನ್ಯ ಜೀವನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ, ಸಂತ ಶಿಶುನಾಳ ಶರೀಫರ ತತ್ವಪದಗಳು, ಗಾಂಧೀಜಿ ಮತ್ತು ಎನ್‍ಎಸ್‍ಎಸ್ ವಿಚಾರ ಮಂಡನೆ ನಡೆಯಿತು. ಹಿರಿಯ ಸ್ವಯಂ ಸೇವಕರುಗಳಿಂದ ಸಾಂಸ್ಕøತಿಕ ಕಾರ್ಯಕ್ರಮ, ಚೇಂದೀರ ನಿರ್ಮಲ ಬೋಪಣ್ಣ ತಂಡದಿಂದ ಸುಗಮ ಸಂಗೀತ, ಶಿಬಿರಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಅನಾವರಣಗೊಂಡಿತು.

- ಸುದ್ದಿಪುತ್ರ