ಚೆಟ್ಟಳ್ಳಿ, ಅ. 29: ನೀರಿನೊಳಗೆ ಈಜಾಟ ಮಾಡುತ್ತಾ ಮೀನು, ಹುಳ ಹುಪ್ಪಟೆಗಳನ್ನು ತಿಂದು ಬದುಕ ಬೇಕಿದ್ದ ನೀರು ಕಾಗೆ ಮರಿಯೊಂದು ಹಂಸ ಎಂಬ ಕಾರ್ಮಿಕನ ಸ್ನೇಹತ್ವ ವನ್ನು ಬೆಳೆಸಿರುವ ಅಪರೂಪದ ಪ್ರಸಂಗವಿದು.

ಹಲವು ದಿನಗಳ ಹಿಂದೆ ಕಾರ್ಮಿಕ ನಾಗಿರುವ ಹಂಸನಿಗೆ ಗಿಳಿ ಶಾಸ್ತ್ರದವನೊಂದಿಗೆ ಬಂದ ವ್ಯಕ್ತಿಯೊಬ್ಬ ನೀರು ಕಾಗೆಮರಿಯನ್ನು ನೀಡಿದನಂತೆ ಪ್ರಾಣಿ ಪಕ್ಷಿಗಳನ್ನು ಪ್ರೀತಿಯಿಂದ ಸಾಕಿ ಬೆಳೆಸುವ ಹಂಸ ಇದನ್ನು ಮನೆಯಲ್ಲಿ ಸಾಕತೊಡಗಿದ. ಅದಕ್ಕೆ ಬೇಕಾದ ಹಸಿ ಹಾಗೂ ಒಣಗಿದ ಮೀನನ್ನು ತಂದು ತುಂಡಾಗಿ ಮಾಡಿ ನೀಡುತ್ತಿದ್ದಾನೆ. ನೀರು ಕಾಗೆ ತಿಂದು ಹಂಸನ ಕೈ ಮೇಲೆ ಬೆನ್ನಲ್ಲಿ ಕೂತು ರೆಕ್ಕೆಯನ್ನು ಬಿಡಿಸುತ್ತಾ ಪ್ರೀತಿಯಿಂದ ಆಟವಾಡುತ್ತಿದೆ. ಹಂಸ ಪ್ರೀತಿಯಿಂದ ಪುಟ್ಟಿ ಎಂದು ಹೆಸರಿಟ್ಟು ಮನೆಯಿಂದ ಹೋಗುವಾಗಲೆಲ್ಲ ಒಟ್ಟಿಗೆ ಹಂಸನೊಂದಿಗೆ ಸ್ನೇಹ ಬೆಳೆಸಿಕೊಂಡು ತಿರುಗುತ್ತಿದೆ.

-ಕರುಣ್ ಕಾಳಯ್ಯ