ಮಡಿಕೇರಿ, ಅ. 29: 2018-19ನೇ ಸಾಲಿನ ಪೋಷಕ/ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆಯು ಫೀ.ಮಾ. ಕಾರ್ಯಪ್ಪ ಕಾಲೇಜಿನ ಸೆಮಿನಾರ್ ಹಾಲ್‍ನಲ್ಲಿ ನಡೆಯಿತು.

ಸಭೆಯಲ್ಲಿ ಕಾಲೇಜಿನ ಪ್ರಾಂಶುಪಾಲೆ ಡಾ. ಪಾರ್ವತಿ ಅಪ್ಪಯ್ಯ ಅವರು ಅಧ್ಯಕ್ಷತೆ ವಹಿಸಿದ್ದರು. ಡಾ. ಶ್ರೀಧರ್ ಹೆಗಡೆ ಅವರು ವಾರ್ಷಿಕ ವರದಿಯನ್ನು ಓದಿದರು. ಅನಂತರ ಸಂಘದಿಂದ ಆದ ಖರ್ಚು ವೆಚ್ಚಗಳ ಹಣಕಾಸು ವ್ಯವಹಾರಗಳ ಲೆಕ್ಕ ಪತ್ರ ವರದಿಯನ್ನು ಓದಲಾಯಿತು.

ಈ ಸಂದರ್ಭ ಮುಂದಿನ ಸಾಲಿನ ಕಾರ್ಯಕಾರಿ ಸಮಿತಿಯ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ಆನಂದ್ ಬಿ.ಎಸ್., ಉಪಾಧ್ಯಕ್ಷರಾಗಿ ಕೃಷ್ಣಕುಮಾರಿ, ಕಾರ್ಯದರ್ಶಿಯಾಗಿ ಡಾ. ಶ್ರೀಧರ್ ಹೆಗಡೆ, ಉಪ ಕಾರ್ಯದರ್ಶಿಯಾಗಿ ಮ್ಯಾಥ್ಯೂ, ಖಚಾಂಚಿಯಾಗಿ ತಳವಾರ್ ಬಿ.ಹೆಚ್. ಹಾಗೂ ಸಮಿತಿಯ ಸದಸ್ಯರಾಗಿ ಪೋಷಕರು ಹಾಗೂ ಉಪನ್ಯಾಸಕ ರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ. ಪಾರ್ವತಿ ಅಪ್ಪಯ್ಯ ಅವರು ವಯೋನಿವೃತ್ತಿ ಆಗಲಿರುವ ಕಾರಣ ಇವರನ್ನು ಪೋಷಕ, ಶಿಕ್ಷಕ ಸಂಘದ ವತಿಯಿಂದ ಸನ್ಮಾನಿಸಲಾಯಿತು.