ಮಡಿಕೇರಿ, ಅ. 29: ಕೊಡಗು - ಕೇರಳ ಗಡಿಭಾಗದ ಮುಂಡ್ರೋಟು ಬಳಿಯ ಮಂದಾರಿ ಮಲೆ ಎಂಬ ತೋಟದೊಳಗೆ ಆರು ವರ್ಷಗಳ ಹಿಂದೆ ತನ್ನ ಸಹಚರ ರೊಂದಿಗೆ ಬಂದು, ಅಲ್ಲಿನ ತೋಟ ಕಾರ್ಮಿಕರಿಗೆ ಬೆದರಿಸಿರುವ ಪ್ರಕರಣ ಸಂಬಂಧ ನಕ್ಸಲ್ ಮುಖಂಡ ರೂಪೇಶ್‍ನನ್ನು ಇಂದು ಬಿಗಿ ಭದ್ರತೆಯಲ್ಲಿ ಇಲ್ಲಿನ ಜಿಲ್ಲಾ ಸತ್ರ ಹಾಗೂ ಪ್ರಧಾನ ನ್ಯಾಯಾಲಯಕ್ಕೆ ಮಡಿಕೇರಿ, ಅ. 29: ಕೊಡಗು - ಕೇರಳ ಗಡಿಭಾಗದ ಮುಂಡ್ರೋಟು ಬಳಿಯ ಮಂದಾರಿ ಮಲೆ ಎಂಬ ತೋಟದೊಳಗೆ ಆರು ವರ್ಷಗಳ ಹಿಂದೆ ತನ್ನ ಸಹಚರ ರೊಂದಿಗೆ ಬಂದು, ಅಲ್ಲಿನ ತೋಟ ಕಾರ್ಮಿಕರಿಗೆ ಬೆದರಿಸಿರುವ ಪ್ರಕರಣ ಸಂಬಂಧ ನಕ್ಸಲ್ ಮುಖಂಡ ರೂಪೇಶ್‍ನನ್ನು ಇಂದು ಬಿಗಿ ಭದ್ರತೆಯಲ್ಲಿ ಇಲ್ಲಿನ ಜಿಲ್ಲಾ ಸತ್ರ ಹಾಗೂ ಪ್ರಧಾನ ನ್ಯಾಯಾಲಯಕ್ಕೆ ಮಡಿಕೇರಿ, ಅ. 29: ಕೊಡಗು - ಕೇರಳ ಗಡಿಭಾಗದ ಮುಂಡ್ರೋಟು ಬಳಿಯ ಮಂದಾರಿ ಮಲೆ ಎಂಬ ತೋಟದೊಳಗೆ ಆರು ವರ್ಷಗಳ ಹಿಂದೆ ತನ್ನ ಸಹಚರ ರೊಂದಿಗೆ ಬಂದು, ಅಲ್ಲಿನ ತೋಟ ಕಾರ್ಮಿಕರಿಗೆ ಬೆದರಿಸಿರುವ ಪ್ರಕರಣ ಸಂಬಂಧ ನಕ್ಸಲ್ ಮುಖಂಡ ರೂಪೇಶ್‍ನನ್ನು ಇಂದು ಬಿಗಿ ಭದ್ರತೆಯಲ್ಲಿ ಇಲ್ಲಿನ ಜಿಲ್ಲಾ ಸತ್ರ ಹಾಗೂ ಪ್ರಧಾನ ನ್ಯಾಯಾಲಯಕ್ಕೆ ವದಾಗಿ ಸಮರ್ಥಿಸಿದ.ನ್ಯಾಯಾಲಯಕ್ಕೆ ತಾನೇ ಪ್ರಕರಣದ ಸಂಬಂಧ ವಾದ ಮಂಡಿಸುವ ಮೂಲಕ ತನ್ನನ್ನು ನಿರಪರಾಧಿಯೆಂದು ಪರಿಗಣಿಸಿ ಆರೋಪ ಮುಕ್ತಗೊಳಿಸುವಂತೆ ನೀವೇದಿಸಿದಲ್ಲದೆ, ಸಾಕಷ್ಟು ಕಡೆ ಪ್ರಕರಣಗಳು ಇರುವ ಕಾರಣದಿಂದ ಭಾಗಮಂಡಲ ಠಾಣಾ ಮೊಕದ್ದಮೆ ಯನ್ನು ಶೀಘ್ರ ಇತ್ಯರ್ಥಪಡಿಸಿ ಕೊಡುವಂತೆಯೂ ನ್ಯಾಯಪೀಠದ ಗಮನ ಸೆಳೆದ. ಈ ಸಂಬಂಧ ತನ್ನ ಬಳಿಯ ಒಂದಿಷ್ಟು ದಾಖಲೆ ಪತ್ರಗಳನ್ನು ನ್ಯಾಯಪೀಠದ ಮುಂದೆ ಸಲ್ಲಿಸಿದ.

ನ್ಯಾಯಾಲಯದ ಅನುಮತಿ ಯೊಂದಿಗೆ ಕಲಾಪ ಸಭಾಂಗಣದಲ್ಲಿ ತನ್ನ ಪರ ವಕೀಲರುಗಳಾದ ಕೆ.ಆರ್. ವಿದ್ಯಾಧರ್ ಹಾಗೂ ವಿನಿಲ್ ಎಂಬವರೊಂದಿಗೆ ಅಭಿಪ್ರಾಯಗಳನ್ನು ಹಂಚಿಕೊಂಡ. ಅನಂತರ ಪ್ರಕರಣದ ವಿಚಾರಣೆಯನ್ನು ಬರುವ ನವೆಂಬರ್ 27ಕ್ಕೆ ಮುಂದೂಡಿದ ಮೇರೆಗೆ, ಮತ್ತೆ ಆತನನ್ನು ಪೊಲೀಸ್ ಬೆಂಗಾವಲಿನಲ್ಲಿ ಕೇರಳದ ತ್ರಿಶೂರ್ ಜೈಲಿಗೆ ಕರೆದೊಯ್ಯಲಾಯಿತು.

ಆರೋಪಿ ಹಿನ್ನೆಲೆ : ಕೇರಳ ಮೂಲದ ರೂಪೇಶ್ ತಾನು ಕಾನೂನು ಪದವಿಯೊಂದಿಗೆ, ಆತನ ಪತ್ನಿ ಶೈನಿ ಕೂಡ ಅಲ್ಲಿನ ನ್ಯಾಯಾಲ ಯವೊಂದರ ಉದ್ಯೋಗದಲ್ಲಿ ಇದ್ದುದಾಗಿ ಹೇಳಲಾಗುತ್ತಿದೆ. 2013ರ ಫೆಬ್ರವರಿ 1 ರಂದು ರೂಪೇಶ್ ತನ್ನ ಸಹಚರರಾದ ವಿಕ್ರಂಗೌಡ, ಮಹೇಶ್, ಸುಂದರಿ, ಪ್ರವೀಣ್ ಹಾಗೂ ಇತರರೊಂದಿಗೆ ಮುಂಡ್ರೋಟು ಬಳಿ ಮಂದಾರಿಮಲೆ ತೋಟಕ್ಕೆ ಬಂದಿದ್ದಾಗಿದೆ. ಅಲ್ಲಿನ ಕಾರ್ಮಿಕರನ್ನು ಬೆದರಿಸಿ 50 ಕೆ.ಜಿ. ಅಕ್ಕಿಯೊಂದಿಗೆ ಇತರ ಪಡಿತರ ಸಾಮಗ್ರಿಗೆ ಬೆದರಿಸಿದ್ದಾನೆ.

ಈ ಶಸ್ತ್ರಸಜ್ಜಿತ ಗುಂಪಿನ ಹಠಾತ್ ಧಾಳಿಯಿಂದ ಹೆದರಿದ್ದ ಕಾರ್ಮಿಕರು, ಆಹಾರ ಧಾನ್ಯ ಇಲ್ಲವೆಂದು ಅಳಲು ತೋಡಿಕೊಂಡ ಮೇರೆಗೆ, ಆರೋಪಿ ಗಳೇ ರೂ. 800 ನಗದು ನೀಡಿ, ದಿನಸಿ ಪದಾರ್ಥ ಖರೀದಿಸಿ ತರುವಂತೆ ಬೇಡಿಕೆ ಇಟ್ಟು ಇಬ್ಬರನ್ನು ಕಳುಹಿಸಿ ಕೊಟ್ಟಿದ್ದಾರೆ.

ಉಳಿದ ಕಾರ್ಮಿಕರನ್ನು ಶಸ್ತ್ರಾಸ್ತ್ರಗಳೊಂದಿಗೆ ಬೆದರಿಸಿ ಕೂಡಿ ಹಾಕಿದ್ದಲ್ಲದೆ, ಯಾರಾದರೂ ಪೊಲೀಸರಿಗೆ ಸುಳಿವು ನೀಡಿದರೆ, ಎಲ್ಲರನ್ನೂ ಕೊಂದು ಹಾಕುವದಾಗಿ ಜೀವಭಯವೊಡ್ಡಿದ್ದಾರೆ. ಅಂತೆಯೇ ಅಲ್ಲಿನ ಪ್ರಭಾಕರ್ ಎಂಬವರ ತೋಟದ ಕಾರ್ಮಿಕರಾದ ಶಶಿ ಹಾಗೂ ರಾಜೇಶ್ ಅಂಗಡಿಯಿಂದ ಸಾಮಗ್ರಿ ತಂದುಕೊಟ್ಟಿದ್ದಾರೆ. ಎಲ್ಲವನ್ನು ಪಡೆದುಕೊಂಡ ನಕ್ಸಲರು ಸಂಜೆಗತ್ತಲೆ ನಡುವೆ ಪರಾರಿಯಾಗಿದ್ದಾರೆ.

ಈ ಬಗ್ಗೆ ಅಧಿಕೃತ ಸುಳಿವಿನ ಮೇರೆಗೆ 2013ರಲ್ಲಿ ನಾಪೋಕ್ಲು ಠಾಣಾಧಿಕಾರಿಯಾಗಿದ್ದ ಷಣ್ಮುಖಪ್ಪ ಅವರು, ಅನಂತರದಲ್ಲಿ ಭಾಗಮಂಡಲ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ. ಆರೋಪಿಗಳ ವಿರುದ್ಧ ಪೊಲೀಸ್ ಅಪರಾಧ ಪ್ರಕರಣ ಕಲಂ 506, 143, 144, 147, 342, ಆರ್/ಡಬ್ಲ್ಯು 149 ಮತ್ತು 3&amdiv;25 ಶಸ್ತ್ರಾಸ್ತ್ರ ಕಾಯ್ದೆ 20 ಯುಎಪಿ 1967ರ ಅಡಿಯಲ್ಲಿ ಮೊಕದ್ದಮೆ ದಾಖಲಾಗಿದೆ.

2015ರಲ್ಲಿ ಸೆರೆ: ಆ ಬಳಿಕ ತಲೆಮರೆಸಿಕೊಂಡಿದ್ದ ರೂಪೇಶ್ ಹಾಗೂ

(ಮೊದಲ ಪುಟದಿಂದ) ಸಹಚರರು 2015ರ ಮೇ 6 ರಂದು ಕೊಯಮತ್ತೂರಿನಲ್ಲಿ ಪತ್ನಿ ಶೈನಿ ಮತ್ತಿತರರ ಸಹಿತ ಅಲ್ಲಿನ ಕ್ಯೂಬ್ರಾಂಚ್ ಠಾಣೆ ಪೊಲೀಸರಿಂದ ನಕ್ಸಲ್ ಚಟುವಟಿಕೆಯ ಗುರುತರ ಆರೋಪ ಮೇರೆಗೆ ಬಂಧನಕ್ಕೊಳಗಾಗಿದ್ದಾರೆ.

ಈ ವೇಳೆ ಭಾಗಮಂಡಲ ಠಾಣಾ ಪ್ರಕರಣ ಸಂಬಂಧ ಕೊಡಗು ಪೊಲೀಸರು ಆತನನ್ನು ವಶಕ್ಕೆ ಪಡೆದು ಇಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೇಳಿಕೆ ನಮೂದಿಸಿಕೊಂಡಿದ್ದರು. ಆ ಸಂದರ್ಭ ವೀರಾಜಪೇಟೆ ಉಪವಿಭಾಗದ ಡಿವೈಎಸ್‍ಪಿ ಕುಮಾರ್ ಚಂದ್ರ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದೆ.

ಮೇಲಿನ ಪ್ರಕರಣದ ವಿಚಾರಣೆಗಾಗಿ ಇಂದು ಆತನನ್ನು ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಈ ವೇಳೆ ಆರೋಪಿಯು ಪೊನ್ನಂಪೇಟೆ ಠಾಣೆಯಲ್ಲೂ ತನ್ನ ಬಗ್ಗೆ ಪೊಲೀಸ್ ಮೊಕದ್ದಮೆ ಇರುವ ಶಂಕೆಯೊಂದಿಗೆ ನಿರೀಕ್ಷಣಾ ಜಾಮೀನು ಕೋರಿದ್ದಾಗಿ ತಿಳಿದು ಬಂದಿದೆ.