ಮಡಿಕೇರಿ, ಅ. 30: ನಗರದ ಶ್ರೀ ವಿಜಯ ವಿನಾಯಕ ದೇಗುಲದ ವಾರ್ಷಿಕೋತ್ಸವ ನವೆಂಬರ್ 9 ಹಾಗೂ 10 ರಂದು ನಡೆಯಲಿದೆ. ನ. 9 ರಂದು ಸಂಜೆಯಿಂದ ದೇವತಾ ಕೈಂಕರ್ಯಗಳು ಆರಂಭಗೊಂಡು, ನ. 10 ರಂದು ಪ್ರಾತಃಕಾಲದ ಪೂಜಾಧಿಗಳು ನೆರವೇರಲಿವೆ. ಮಧ್ಯಾಹ್ನದ ಮಹಾಪೂಜೆ ಬಳಿಕ ಅನ್ನದಾನ ಏರ್ಪಡಿಸಲಾಗಿದೆ. ಪ್ರಸಕ್ತ 20ನೇ ವರ್ಷದ ವಾರ್ಷಿಕೋತ್ಸವವನ್ನು ಕೊಡಗಿನ ಪ್ರಾಕೃತಿಕ ವಿಕೋಪ ಸಂಬಂಧ ಸರಳವಾಗಿ ನಡೆಸಲು ತೀರ್ಮಾನಿಸಲಾಗಿದೆ.