ಗೋಣಿಕೊಪ್ಪಲು, ಅ.29: ಸ್ಥಳೀಯ ಸಮಸ್ಯೆಗಳನ್ನು ಹೋರಾಟ ಮಾರ್ಗದ ಮೂಲಕ ಬಗೆ ಹರಿಸಿಕೊಳ್ಳಲು ರೈತ ಸಂಘದಲ್ಲಿ ವಿಫುಲ ಅವಕಾಶವಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಮೈಸೂರು ಭಾಗದ ರೈತ ಮುಖಂಡ ಅಶ್ವತ್ ನಾರಾಯಣ ಅರಸ್‍ರವರು ಅಭಿಪ್ರಾಯಪಟ್ಟರು.

ತಿತಿಮತಿಯ ಕಾವೇರಿ ಸಭಾಂಗಣದಲ್ಲಿ ಆಯೋಜನೆ ಗೊಂಡಿದ್ದ ರೈತ ಸಂಘಕ್ಕೆ ನೂತನ ಸದಸ್ಯರ ಸೇರ್ಪಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತ ಸಂಘಕ್ಕೆ ತನ್ನದೇ ಆದ ಇತಿಹಾಸವಿದ್ದು ಆರಂಭದಿಂದಲೂ ಗೋಣಿಕೊಪ್ಪಲು, ಅ.29: ಸ್ಥಳೀಯ ಸಮಸ್ಯೆಗಳನ್ನು ಹೋರಾಟ ಮಾರ್ಗದ ಮೂಲಕ ಬಗೆ ಹರಿಸಿಕೊಳ್ಳಲು ರೈತ ಸಂಘದಲ್ಲಿ ವಿಫುಲ ಅವಕಾಶವಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಮೈಸೂರು ಭಾಗದ ರೈತ ಮುಖಂಡ ಅಶ್ವತ್ ನಾರಾಯಣ ಅರಸ್‍ರವರು ಅಭಿಪ್ರಾಯಪಟ್ಟರು.

ತಿತಿಮತಿಯ ಕಾವೇರಿ ಸಭಾಂಗಣದಲ್ಲಿ ಆಯೋಜನೆ ಗೊಂಡಿದ್ದ ರೈತ ಸಂಘಕ್ಕೆ ನೂತನ ಸದಸ್ಯರ ಸೇರ್ಪಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತ ಸಂಘಕ್ಕೆ ತನ್ನದೇ ಆದ ಇತಿಹಾಸವಿದ್ದು ಆರಂಭದಿಂದಲೂ ಮಾಯಮುಡಿ, ಭಾಗದ ರೈತರು ಸ್ಥಳೀಯ ರೈತ ಮುಖಂಡರಾದ ಚೆಪ್ಪುಡೀರ ಕಾರ್ಯಪ್ಪ ಮುಂದಾಳತ್ವ ದಲ್ಲಿ ರೈತ ಸಂಘಕ್ಕೆ ಸೇರ್ಪಡೆಗೊಂಡರು.

ಕೊಡಗು ಜಿಲ್ಲಾ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿ ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಿಂದ ರೈತ ಸಂಘ ಹಂತ ಹಂತವಾಗಿ ಬೆಳವಣಿಗೆ ಕಾಣುತ್ತಿದೆ. ರೈತ ಸಂಘದಿಂದ ರೈತರ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಲು ಅವಕಾಶವಿದೆ. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸಂಘಟನೆಯೊಂದಿಗೆ ಗುರುತಿಸಿಕೊಳ್ಳಬೇಕು. ಹೋರಾಟದಲ್ಲಿ ಭಾಗಿಗಳಾಗಬೇಕೆಂದು ಕರೆ ನೀಡಿದರು.ರಾಜ್ಯ ರೈತ ಸಂಘದ ಮುಖಂಡರಾದ ಜಿ.ಟಿ.ರಾಮಸ್ವಾಮಿ, ಹೊಸಕೋಟೆ ಬಸವರಾಜ್, ಬೆಳಗೋಳ ಸುಬ್ರಮಣ್ಯ, ಮಾತನಾಡಿದರು. ಹೊಸಕೋಟೆ ಬಸವರಾಜ್ ಪ್ರತಿಜ್ಞಾವಿಧಿ ಬೋಧಿಸಿದರು. ಸ್ಥಳೀಯ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚೆಪ್ಪುಡೀರ ಕಾರ್ಯಪ್ಪ ಗಮನ ಸೆಳೆದರು. ಮುಂದಿನ ತಿಂಗಳಿನಲ್ಲಿ ಸಮಸ್ಯೆಗಳ ಬಗ್ಗೆ ಹೋರಾಟ ಕೈಗೊಳ್ಳುವಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಪ್ರಾಸ್ತಾವಿಕವಾಗಿ ಮಾತ ನಾಡಿದರು. ರೈತ ಮುಖಂಡರಾದ ಚೆಪ್ಪುಡೀರ ಕಾರ್ಯಪ್ಪ ಸ್ವಾಗತಿಸಿದರು. ರೈತ ಮುಖಂಡರಾದ ಚೋನಿರ ಸತ್ಯ, ಪುಚ್ಚಿಮಾಡ ಸುಭಾಶ್, ಭದ್ರಗೊಳದ ಉಮೇಶ್, ವಿಎಸ್‍ಎಸ್‍ಎನ್ ಬ್ಯಾಂಕಿನ ರಾಮಕೃಷ್ಣ, ಪುಚ್ಚಿಮಾಡ ಸುನೀಲ್, ತೀತರಮಾಡ ರಾಜ, ಬೋಡಂಗಡ ಅಶೋಕ್, ಮಂಡೇಪಂಡ ಪ್ರವೀಣ್, ಸಬಿತಾ ಮುಂತಾದವರು ಹಾಜರಿದ್ದರು. ರೈತ ಮಹಿಳೆ ರೇಖಾ ಪ್ರಾರ್ಥಿಸಿದರು.