ಕುಶಾಲನಗರ, ಅ. 31: ಕುಶಾಲನಗರ ಪಟ್ಟಣ ಪಂಚಾಯಿತಿಯ ಆಡಳಿತ ಯಾವದೇ ಪಕ್ಷಕ್ಕೆ ಬಹುಮತ ದೊರೆಯದೆ ಅತಂತ್ರ ಸ್ಥಿತಿಯಲ್ಲಿ ಫಲಿತಾಂಶ ಹೊರಬಿದ್ದಿದೆ. 16 ವಾರ್ಡ್‍ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 6, ಕಾಂಗ್ರೆಸ್ 6, ಜೆಡಿಎಸ್ ಪಕ್ಷದ ಬೆಂಬಲಿತ 4 ಅಭ್ಯರ್ಥಿಗಳು ಜಯಗಳಿಸಿದ್ದಾರೆ. 1ನೇ ವಾರ್ಡ್‍ನಲ್ಲಿ ಕಾಂಗ್ರೆಸ್‍ನ ಶೇಖ್ ಖಲೀಮುಲ್ಲಾ, 2ನೇ ವಾರ್ಡ್‍ನಲ್ಲಿ ಕಾಂಗ್ರೆಸ್‍ನ ಪುಟ್ಟಲಕ್ಷ್ಮಿ, 3ನೇ ವಾರ್ಡ್‍ನಲ್ಲಿ ಕಾಂಗ್ರೆಸ್‍ನ ಕೆ. ಪ್ರಮೋದ್, 4ನೇ ವಾರ್ಡ್‍ನಲ್ಲಿ ಜೆಡಿಎಸ್‍ನ ಸುರಯ್ಯಭಾನು, 5ನೇ ವಾರ್ಡ್‍ನಲ್ಲಿ ಬಿಜೆಪಿಯ ಬಿ. ಜಯವರ್ಧನ, 6ನೇ ವಾರ್ಡ್‍ನಲ್ಲಿ ಬಿಜೆಪಿಯ ಕುಶಾಲನಗರ, ಅ. 31: ಕುಶಾಲನಗರ ಪಟ್ಟಣ ಪಂಚಾಯಿತಿಯ ಆಡಳಿತ ಯಾವದೇ ಪಕ್ಷಕ್ಕೆ ಬಹುಮತ ದೊರೆಯದೆ ಅತಂತ್ರ ಸ್ಥಿತಿಯಲ್ಲಿ ಫಲಿತಾಂಶ ಹೊರಬಿದ್ದಿದೆ. 16 ವಾರ್ಡ್‍ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 6, ಕಾಂಗ್ರೆಸ್ 6, ಜೆಡಿಎಸ್ ಪಕ್ಷದ ಬೆಂಬಲಿತ 4 ಅಭ್ಯರ್ಥಿಗಳು ಜಯಗಳಿಸಿದ್ದಾರೆ. 1ನೇ ವಾರ್ಡ್‍ನಲ್ಲಿ ಕಾಂಗ್ರೆಸ್‍ನ ಶೇಖ್ ಖಲೀಮುಲ್ಲಾ, 2ನೇ ವಾರ್ಡ್‍ನಲ್ಲಿ ಕಾಂಗ್ರೆಸ್‍ನ ಪುಟ್ಟಲಕ್ಷ್ಮಿ, 3ನೇ ವಾರ್ಡ್‍ನಲ್ಲಿ ಕಾಂಗ್ರೆಸ್‍ನ ಕೆ. ಪ್ರಮೋದ್, 4ನೇ ವಾರ್ಡ್‍ನಲ್ಲಿ ಜೆಡಿಎಸ್‍ನ ಸುರಯ್ಯಭಾನು, 5ನೇ ವಾರ್ಡ್‍ನಲ್ಲಿ ಬಿಜೆಪಿಯ ಬಿ. ಜಯವರ್ಧನ, 6ನೇ ವಾರ್ಡ್‍ನಲ್ಲಿ ಬಿಜೆಪಿಯ (ಮೊದಲ ಪುಟದಿಂದ) ಈ ಹಿಂದಿನ ಸಾಲಿನಲ್ಲಿ ಆಡಳಿತ ಮಂಡಳಿ ಬಿಜೆಪಿ ತೆಕ್ಕೆಯಲ್ಲಿದ್ದು 13 ಸ್ಥಾನಗಳಲ್ಲಿ 6 ಸ್ಥಾನ ಪಡೆದು ಮೂವರು ಅಧ್ಯಕ್ಷ ಗಾದಿ ಪಡೆಯುವದರೊಂದಿಗೆ ಅಧಿಕಾರ ಅವಧಿ ಪೂರ್ಣಗೊಳಿಸಿತ್ತು. ಆ ಸಂದರ್ಭ ಕಾಂಗ್ರೆಸ್ 3, ಜೆಡಿಎಸ್ 4 ಸ್ಥಾನ ಗಳಿಸಿತ್ತು. ಈ ಬಾರಿ ಕಾಂಗ್ರೆಸ್ 3 ಸ್ಥಾನ ಹೆಚ್ಚುವರಿ ಗಳಿಸುವಲ್ಲಿ ಯಶಸ್ವಿಯಾಗಿದ್ದರೆ ಜೆಡಿಎಸ್ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಹಿಂದಿನ ಅವಧಿಯ ಸದಸ್ಯರಾದ ಡಿ.ಕೆ. ತಿಮ್ಮಪ್ಪ, ಪ್ರಮೋದ್ ಮುತ್ತಪ್ಪ, ಸುರಯ್ಯ ಭಾನು, ರೇಣುಕಾ ಪುನರಾಯ್ಕೆ ಗೊಂಡಿದ್ದಾರೆ.

ಹಿಂದಿನ ಆಡಳಿತ ಮಂಡಳಿಯಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಬಿಜೆಪಿಯ ಎಂ.ಎಂ.ಚರಣ್ 10ನೇ ವಾರ್ಡ್‍ನಲ್ಲಿ ಪರಾಭವಗೊಂಡಿದ್ದಾರೆ. ಸದಸ್ಯರಾಗಿದ್ದ ಬಿಜೆಪಿಯ ಮಧುಸೂದನ್ 7ನೇ ವಾರ್ಡ್‍ನಲ್ಲಿ ಮತ್ತು ಜೆಡಿಎಸ್‍ನ 5ನೇ ವಾರ್ಡ್ ಅಭ್ಯರ್ಥಿ ಹೆಚ್.ಡಿ. ಚಂದ್ರು ಪರಾಭವಗೊಂಡಿದ್ದಾರೆ. ಮೀಸಲಾತಿ ಅನ್ವಯ 16 ಮಂದಿಯಲ್ಲಿ 7 ಮಹಿಳಾ ಅಭ್ಯರ್ಥಿಗಳು ಈ ಬಾರಿಯ ಆಡಳಿತ ಮಂಡಳಿಯಲ್ಲಿ ಜನಪ್ರತಿನಿಧಿಗಳಾಗಿ ದ್ದಾರೆ. ಈ ಬಾರಿ 12 ಮಂದಿ ಹೊಸ ಮುಖಗಳು ಪಂಚಾಯಿತಿ ಆಡಳಿತ ಮಂಡಳಿಯಲ್ಲಿ ಕಾಣಿಸಿಕೊಂಡಿರುವದು ವಿಶೇಷವಾಗಿದೆ.

ಇನ್ನಷ್ಟು ವಿವರ ಮಾಹಿತಿ

ಕುಶಾಲನಗರ 16 ವಾರ್ಡ್‍ಗಳಲ್ಲಿ ಒಟ್ಟು 11863 ಮತದಾರರಲ್ಲಿ 9145 ಮಂದಿ ಮತ ಚಲಾಯಿಸಿದ್ದಾರೆ. ವಾರ್ಡ್‍ವಾರು ಅಭ್ಯರ್ಥಿಗಳು ಮತ ಗಳಿಸಿದ ವಿವರ ಈ ರೀತಿ ಇದೆ.

1ನೇ ವಾರ್ಡ್ (ಹಿಂ.ವ.ಎ)ಗೆ ಮೀಸಲಾಗಿದ್ದು ಶರತ್ ಕೆ.ಪಿ. (ಬಿಜೆಪಿ)-125, ಮಂಜುನಾಥ್ ಬಿ.ಎಸ್ (ಜೆಡಿಎಸ್) 133-, ಕೆ. ಖಲೀಮುಲ್ಲಾ (ಕಾಂಗ್ರೆಸ್) 167-, ನೋಟಾ-04.

2ನೇ ವಾರ್ಡ್ (ಅನುಸೂಚಿತ ಜಾತಿ ಮಹಿಳೆ) ಹೆಚ್.ಎಂ. ಹೇಮಲತಾ (ಬಿಜೆಪಿ)-107, ಎಂ.ಜೆ. ಭುವನೇಶ್ವರಿ (ಜೆಡಿಎಸ್) 143-, ಪುಟ್ಟಲಕ್ಷ್ಮಿ (ಕಾಂಗ್ರೆಸ್)-184, ಮೀನಾ (ಪಕ್ಷೇತರ)-05, ನೋಟಾ 04.

3ನೇ ವಾರ್ಡ್ (ಸಾಮಾನ್ಯ) ಕೆ.ಎನ್. ದೇವರಾಜ್ (ಬಿಜೆಪಿ)-188, ಕೆ. ಪ್ರಮೋದ್ (ಕಾಂಗ್ರೆಸ್)-344, ಎಂ.ಇ. ಮುಸ್ತಾಫ (ಪಕ್ಷೇತರ)-08, ಸಂತೋಷಕುಮಾರ್ (ಜೆಡಿಎಸ್)-261, ನೋಟಾ 01.

4ನೇ ವಾರ್ಡ್ (ಸಾಮಾನ್ಯ ಮಹಿಳೆ) ಮೀಸಲಾತಿಯಾಗಿದ್ದು ವಿ. ಪುಷ್ಪ (ಬಿಜೆಪಿ)-29, ಮೆಹರುನ್ನೀಸಾ (ಕಾಂಗ್ರೆಸ್)-248, ಸುರಯ್ಯಭಾನು (ಜೆಡಿಎಸ್)-271, ನೋಟಾ 04.

5ನೇ ವಾರ್ಡ್ (ಅನುಸೂಚಿತ ಜಾತಿ) ಜಯವರ್ಧನ ಬಿ. (ಬಿಜೆಪಿ)-209, ಹೆಚ್.ಡಿ. ಚಂದ್ರ (ಜೆಡಿಎಸ್)-144, ಹೆಚ್.ವಿ. ಮಹದೇವ (ಕಾಂಗ್ರೆಸ್)-146, ನೋಟಾ 05.

6ನೇ ವಾರ್ಡ್ (ಹಿಂ.ವ.ಎ) ಡಿ.ಕೆ. ತಿಮ್ಮಪ್ಪ (ಬಿಜೆಪಿ)-127, ಡಿ.ಎಂ. ಆನಂದ (ಕಾಂಗ್ರೆಸ್)-101, ಡಿ.ಕೆ. ಚಂದ್ರಶೇಖರ್ (ಪಕ್ಷೇತರ)-94, ಕೆ.ಎಂ. ಜಕ್ರಿಯ (ಜೆಡಿಎಸ್)-46 ಶರವಣಕುಮಾರ್ (ಪಕ್ಷೇತರ)-49, ಶ್ರೀಧರ ಸಿ.ವೈ. (ಪಕ್ಷೇತರ)-28, ನೋಟಾ 0.

7ನೇ ವಾರ್ಡ್ ಸಾಮನ್ಯ ಮೀಸಲಾತಿಯಾಗಿದ್ದು ಮಧುಸೂದನ್ ಹೆಚ್.ಎಂ.(ಬಿಜೆಪಿ)-83, ಸುರೇಶ ಎಂ.ಬಿ. (ಜೆಡಿಎಸ್)-157, ನವೀನ್ ಕುಮಾರ್ ವಿ.ಜೆ. (ಕಾಂಗ್ರೆಸ್)-35, ಜಿ.ದಿನೇಶ್ (ಪಕ್ಷೇತರ)-18, ಎಸ್. ಸುಬ್ರಮಣಿ (ಪಕ್ಷೇತರ)-12, ಕೆ.ಎಸ್. ಮೂರ್ತಿ(ಪಕ್ಷೇತರ)-26, ನೋಟಾ 01.

8ನೇ ವಾರ್ಡ್ (ಸಾಮಾನ್ಯ ಮಹಿಳೆ) ಆರ್. ಸುಷ್ಮಾ (ಕಾಂಗ್ರೆಸ್)-200, ಯು. ರೂಪಾ (ಬಿಜೆಪಿ)-312, ಕೆ.ಆರ್. ಚಿತ್ರಾ (ಜೆಡಿಎಸ್)-102, ಪದ್ಮಾವತಿ (ಪಕ್ಷೇತರ)-10, ಕುಸುಮ ಎಸ್ ರಾಜ್ (ಪಕ್ಷೇತರ)-53, ನೋಟಾ 07.

9ನೇ ವಾರ್ಡ್ (ಸಾಮಾನ್ಯ ವರ್ಗ)ಕ್ಕೆ ಮೀಸಲಾಗಿದ್ದು ಕೆ.ಎಸ್. ಮಹೇಶ್ (ಜೆಡಿಎಸ್)-19, ಕೆ.ಎನ್. ಸುರೇಶ್ (ಪಕ್ಷೇತರ)-202, ಟಿ.ಎನ್. ಗೌತಮ್ (ಕಾಂಗ್ರೆಸ್)-05, ಅಮೃತ್‍ರಾಜ್ (ಬಿಜೆಪಿ)-211, ನಯಾಜ್ ಅಹಮ್ಮದ್ (ಪಕ್ಷೇತರ)-125, ನೋಟಾ 04.

10ನೇ ವಾರ್ಡ್ (ಸಾಮಾನ್ಯ) ಅಬ್ದುಲ್ ರಶೀದ್ (ಕಾಂಗ್ರೆಸ್)-187, ಎಂ.ಎಂ. ಚರಣ್ (ಬಿಜೆಪಿ)-175, ವಿ.ಎಸ್. ಆನಂದಕುಮಾರ್ (ಜೆಡಿಎಸ್)-228, ಆರ್. ರಾಜೀವ್ (ಪಕ್ಷೇತರ)-116, ನೋಟಾ 02.

11ನೇ ವಾರ್ಡ್ (ಹಿಂ.ವ,ಎ. ಮಹಿಳೆ) ಜಯಲಕ್ಷ್ಮಿ (ಕಾಂಗ್ರೆಸ್)-216, ಬಿ.ಎಸ್. ವಿಶಾಲಿ (ಬಿಜೆಪಿ)-139, ನಸೀಮ (ಜೆಡಿಎಸ್)-72, ಫೌಸಿಯ (ಎಸ್‍ಡಿಪಿಐ)-208, ನೋಟಾ 15.

12ನೇ ವಾರ್ಡ್ (ಪರಿಶಿಷ್ಟ ಪಂಗಡ) ಕೆ.ಎನ್. ಅಶೋಕ್ (ಕಾಂಗ್ರೆಸ್)-45, ಬಿ.ಎಲ್. ಜಗದೀಶ್ (ಜೆಡಿಎಸ್)-357, ಜಗದೀಶ್ (ಬಿಜೆಪಿ)-169, ನೋಟಾ 04.

13ನೇ ವಾರ್ಡ್ (ಹಿಂ.ವ.ಎ ಮಹಿಳೆ) ಜಯಲಕ್ಷ್ಮಮ್ಮ (ಕಾಂಗ್ರೆಸ್)-175, ಆಶಾರಾಣಿ (ಜೆಡಿಎಸ್)-103, ಎಸ್.ಸಿ. ಪ್ರೇಮ (ಬಿಜೆಪಿ)-168, ನೋಟಾ 09.

14ನೇ ವಾರ್ಡ್ (ಸಾಮಾನ್ಯ ಮಹಿಳೆ)-ಶಾರದಾ ರೇಣುಕುಮಾರ್ (ಕಾಂಗ್ರೆಸ್)-93, ಶೈಲಾ ಕೃಷ್ಣಪ್ಪ (ಬಿಜೆಪಿ)-307, ಕೆ.ವಿ. ನೇತ್ರಾವತಿ (ಜೆಡಿಎಸ್)-153, ನೋಟಾ 07.

15ನೇ ವಾರ್ಡ್ (ಹಿಂ.ವ.ಬಿ)- ಎಂ.ಕೆ. ಸುಂದ್ರೇಶ್ (ದಿನೇಶ್) (ಕಾಂಗ್ರೆಸ್)-276, ಎನ್.ಸಿ. ಗಣೇಶ್ (ಜೆಡಿಎಸ್)-230, ಕೆ.ಜಿ. ಮನು (ಬಿಜೆಪಿ)-181, ನೋಟಾ 05.

16ನೇ ವಾರ್ಡ್ (ಸಾಮಾನ್ಯ ಮಹಿಳೆ)ಗೆ ಮೀಸಲಾಗಿದ್ದು ಕೆ.ಆರ್. ರೇಣುಕಾ (ಬಿಜೆಪಿ)-292, ಪಾರ್ವತಿ (ಕಾಂಗ್ರೆಸ್)-210, ಮೈಮುನ (ಜೆಡಿಎಸ್)-40, ಸಮೀನ ರಾಖಿಬ್ (ಎಸ್‍ಡಿಪಿಐ)-194, ಶೋಭಾ ರವಿ (ಪಕ್ಷೇತರ)-10, ನೋಟಾ 04.

16 ವಾರ್ಡ್‍ಗಳಲ್ಲಿ 13ನೇ ವಾರ್ಡ್‍ನಲ್ಲಿ 7 ಮತಗಳ ಅಂತರದಿಂದ ಜಯಲಕ್ಷ್ಮಮ್ಮ ಗೆಲುವು ಸಾಧಿಸಿದ್ದರೆ, 11ನೇ ವಾರ್ಡ್‍ನಲ್ಲಿ 8 ಮತಗಳ ಕಡಿಮೆ ಅಂತರದಲ್ಲಿ ಜಯಲಕ್ಷ್ಮಿ ಅವರುಗಳು ವಿಜೇತರಾಗಿದ್ದಾರೆ. 9ನೇ ವಾರ್ಡ್‍ನಿಂದ ಪಕ್ಷೇತರ ಅಭ್ಯರ್ಥಿ ಕೆ.ಎನ್. ಸುರೇಶ್ 9 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ. ವಾರ್ಡ್ ಸಂಖ್ಯೆ 9ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೌತಮ್ ನೇಮಿರಾಜ್, 2ನೇ ವಾರ್ಡ್‍ನ ಪಕ್ಷೇತರ ಅಭ್ಯರ್ಥಿ ಪಿ. ಮೀನಾ ಅತಿ ಕಡಿಮೆ ಮತ ತಲಾ 5 ಗಳಿಸಿದ್ದರೆ, 12ನೇ ವಾರ್ಡ್‍ನಿಂದ ಸ್ಪರ್ಧಿಸಿದ ಬಿ.ಎಲ್. ಜಗದೀಶ್ ಅತ್ಯಂತ ಅಧಿಕ ಮತ 357 ಗಳಿಸಿ ಗೆಲುವು ಸಾಧಿಸಿರುವದು ಕಂಡು ಬಂದಿದೆ. 16 ಪಕ್ಷೇತರ ಅಭ್ಯರ್ಥಿಗಳಲ್ಲಿ ಯಾವದೇ ಅಭ್ಯರ್ಥಿ ಗೆಲವು ಸಾಧಿಸುವಲ್ಲಿ ವಿಫಲರಾಗಿದ್ದಾರೆ. ಒಟ್ಟು ವಾರ್ಡ್‍ನಲ್ಲಿ 76 ಮತಗಳು ನೋಟಾ ಕ್ಕೆ ಚಲಾವಣೆಗೊಂಡಿದೆ.

ಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಕುಶಾಲನಗರ ಪಟ್ಟಣದಲ್ಲಿ ಮೂರು ಪಕ್ಷದ ಅಭ್ಯರ್ಥಿಗಳು, ಕಾರ್ಯಕರ್ತರು ತಮ್ಮ ಬೆಂಬಲಿಗರೊಂದಿಗೆ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.