ಮಡಿಕೇರಿ, ಅ. 31: ಭಾರತದ ಪ್ರಥಮ ಗೃಹಮಂತ್ರಿ ಹಾಗೂ ಸ್ವಾತಂತ್ರ್ಯ ಭಾರತದ ಏಕತೆಗಾಗಿ ಶ್ರಮಿಸಿದ ‘ಉಕ್ಕಿನ ಮನುಷ್ಯ’ ಖ್ಯಾತಿಯ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಇಂದು ನಗರದಲ್ಲಿ ಏಕತೆಗಾಗಿ ನಡಿಗೆ ಮತ್ತು ಓಟ ನಡೆಯಿತು.ಈ ಸಂದರ್ಭ ಮಾಧ್ಯಮ ದೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಅವರು, ದೇಶದ ಪ್ರಥಮ ಗೃಹ ಮಂತ್ರಿಯಾಗಿದ್ದ ದಿ. ಸರ್ದಾರ್ ವಲ್ಲಭಬಾಯಿ ಪಟೇಲ್ ಜನ್ಮದಿನಾಚರಣೆ ಅಂಗವಾಗಿ ಭಾರತ ಸರಕಾರದ ಆದೇಶದಂತೆ ಕಾರ್ಯಕ್ರಮ ಹಮ್ಮಿಕೊಂಡಿರುವದಾಗಿ ವಿವರಿಸಿದರು.ಎಲ್ಲರೊಂದಿಗೆ ಏಕತೆಗಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸುವ ಮೂಲಕ ದೇಶದ ಅಭ್ಯುದಯಕ್ಕೆ ಶ್ರಮಿಸಲು ಸಮಾಜ ಕೈಜೋಡಿಸುವಂತೆ ಅವರು ಕರೆ ನೀಡಿದರು. ನಗರದ ಜಿಲ್ಲಾ ಕ್ರೀಡಾಂಗಣ ದಿಂದ ಆರಂಭಗೊಂಡ ಏಕತಾ ನಡಿಗೆಗೆ ಕೊಡಗು ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜ್ ಚಾಲನೆ ನೀಡಿದರು. ಮ್ಯಾನ್ಸ್ ಕಾಂಪೌಂಡ್‍ನಿಂದ ಇಂದಿರಾಗಾಂಧಿ ವೃತ್ತ ತನಕ ನಡಿಗೆಯೊಂದಿಗೆ ಅಜ್ಜಾಮಾಡ ದೇವಯ್ಯ ವೃತ್ತದ ತನಕ ಏಕತಾ ಓಟ ನಡೆಯಿತು.

ಪೊಲೀಸ್ ಇಲಾಖೆಯೊಂದಿಗೆ ಜಿಲ್ಲಾ ಸಶಸ್ತ್ರ ದಳ, ಸೇವಾ ದಳ, ಸ್ಕೌಟ್ ಗೈಡ್ಸ್ ಸಹಿತ ವಿವಿಧ ಶಾಲಾ - ಕಾಲೇಜು ವಿದ್ಯಾರ್ಥಿಗಳು, ಗ್ರೀನ್‍ಸಿಟಿ ಫೋರಂ, ಲಯನ್ಸ್, ರೋಟರಿ ಸಂಘಟನೆಗಳ ಪದಾಧಿಕಾರಿಗಳು, ಉಪ ವಿಭಾಗಾಧಿಕಾರಿ

(ಮೊದಲ ಪುಟದಿಂದ) ಜವರೇಗೌಡ, ಪೊಲೀಸ್ ಉಪ ಅಧೀಕ್ಷಕ ಕೆ.ಎಸ್. ಸುಂದರ್‍ರಾಜ್, ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಸಹಿತ ನೂರಾರು ನಾಗರಿಕರು ಏಕತಾ ನಡಿಗೆಯೊಂದಿಗೆ ಓಟದಲ್ಲಿ ಪಾಲ್ಗೊಂಡಿದ್ದರು.

ರಾಷ್ಟ್ರೀಯ ಏಕತಾ ಜಾಥಾ ಅಂಗವಾಗಿ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪಿ. ಪೊಲೀಸ್ ಉಪ ಅಧೀಕ್ಷಕ ಸುಂದರ್‍ರಾಜ್, ಉಪ ವಿಭಾಗಾಧಿಕಾರಿ ಜವರೇಗೌಡ, ನಗರಸಭೆಯ ಆಯುಕ್ತ ರಮೇಶ್, ಲಯನ್ಸ್ ಕ್ಲಬ್ ಅಧ್ಯಕ್ಷ ದಾಮೋದರ್, ರೋಟರಿ ಸಂಸ್ಥೆ ಉಪಾಧ್ಯಕ್ಷ ಅಜಯ್ ಸೂದ್, ಗ್ರೀನ್ ಸಿಟಿ ಫೋರಂನ ಕುಕ್ಕೇರ ಜಯ ಚಿಣ್ಣಪ್ಪ, ಅಂಬೆಕಲ್ ನವೀನ್ ಕುಶಾಲಪ್ಪ, ಕಾರ್ಯನಿರತ ಪತ್ರಕರ್ತರ ಸಂಘಧ ಜಿಲ್ಲಾ ಅಧ್ಯಕೆÀ್ಷ ಸವಿತಾ ರೈ ಇತರರು ಇದ್ದರು.