ವೀರಾಜಪೇಟೆ, ಅ. 31: ವೀರಾಜಪೇಟೆ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ 18 ವಾರ್ಡ್‍ಗಳ ಪೈಕಿ ಬಿಜೆಪಿ ಪಕ್ಷ 8ರಲ್ಲಿ ಜಯ ಗಳಿಸಿ ಅಧಿಕ ಸ್ಥಾನ ಪಡೆದಿದ್ದರೆ, ಕಾಂಗ್ರೆಸ್ 6, ಜೆಡಿಎಸ್ 1 ಹಾಗೂ ಮೂರು ವಾರ್ಡ್‍ಗಳಲ್ಲಿ ಪಕ್ಷೇತರರು ಗೆಲುವು ಸಾಧಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಇಲ್ಲಿನ ಆಡಳಿತದ ವಿಚಾರ ಕುತೂಹಲಕಾರಿಯಾಗಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯೊಂದಿಗೆ ಸ್ಪರ್ಧಿಸಿದೆಯಾದರೂ ಲಭ್ಯವಾಗಿರುವದು ಒಟ್ಟು 7 ಸ್ಥಾನಗಳು. ಇನ್ನು ಮೂರು ವಾರ್ಡ್‍ಗಳಲ್ಲಿ ಪಕ್ಷೇತರರು ಗೆಲವಿನ ನಗೆ ಬೀರಿದ್ದಾರೆ. ಸದ್ಯದ ಮಟ್ಟಿಗೆ ಇಲ್ಲಿ ಯಾರಿಗೂ ಬಹುಮತ ಲಭಿಸದಿರುವದರಿಂದ ಆಡಳಿತದ ಚುಕ್ಕಾಣಿ ಹಿಡಿಯುವದು ಯಾರು ಎಂಬದು ಕುತೂಹಲ ಸೃಷ್ಟಿಸಿದೆ. ಜೆಡಿಎಸ್ -1ಹಾಗೂ ಪಕ್ಷೇತರರು 3 ಸ್ಥಾನಗಳಲ್ಲಿ ಜಯ ಸಾಧಿಸಿದ್ದಾರೆ. ಪಟ್ಟಣ ಪಂಚಾಯಿತಿಯಲ್ಲಿ ಎಂಟು ಸ್ಥಾನಗಳನ್ನು ಪಡೆದಿರುವ ಬಿಜೆಪಿ ಪಕ್ಷ ಸಂಸದರು, ಶಾಸಕರ ಸಂಖ್ಯೆಯ ಬಹುಮತದೊಂದಿಗೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎನ್ನಲಾಗಿದೆ. ಕಾಂಗ್ರೇಸ್ ಪಕ್ಷ 4 ಮಂದಿಯ ಬೆಂಬಲ ಪಡೆದುಕೊಂಡರೂ ಅಂತರ ಸಮವಾಗಲಿದೆ. ಇದರಿಂದಾಗಿ ಅಧಿಕಾರದತ್ತ ಮುನ್ನಡೆಯುವದು ಯಾರು ಎಂಬದು ಕುತೂಹಲ ಮೂಡಿಸಿದೆ. (ಮೊದಲ ಪುಟದಿಂದ) ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಹದಿನೆಂಟು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮರು ಆಯ್ಕೆ ಬಯಸಿದ್ದ ಮಾಜಿ ಅಧ್ಯಕ್ಷರುಗಳಾದ ಇ.ಸಿ. ಜೀವನ್, ಕೂತಂಡ ಸಚಿನ್ ಕುಟ್ಟಯ್ಯ, ಮಾಜಿ ಉಪಾಧ್ಯಕ್ಷೆ ತಸ್ನೀಂ ಅಕ್ತರ್ ಹಾಗೂ ಎಸ್.ಎಚ್. ಮೈನುದ್ದೀನ್ ಸೋಲನ್ನು ಅನುಭವಿಸಿದ್ದಾರೆ. ಮರು ಆಯ್ಕೆ ಬಯಸಿ ಜೆಡಿಎಸ್ ಪಕ್ಷದಿಂದ ಎಸ್.ಎಚ್. ಮತೀನ್ ಹ್ಯಾಟ್ರಿಕ್ ಬಾರಿಸಿದ್ದಾರೆ. ಪಕ್ಷೇತರರಾಗಿ ಸ್ಪರ್ಧಿಸಿದ್ದ ಮಾಜಿ ಅಧ್ಯಕ್ಷೆ ಎಂ.ಕೆ. ದೇಚಮ್ಮ ಅವರು 282 ಮತಗಳನ್ನು ಪಡೆದು 87 ಮತಗಳ ಅಂತರದಿಂದ ಆಯ್ಕೆಯಾಗಿದ್ದಾರೆ.

ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಹದಿನೆಂಟು ಸ್ಥಾನಗಳಿಗೆ ಒಟ್ಟು 55 ಮಂದಿ ಸ್ಪರ್ಧಿಸಿದ್ದರು. ಈ ಪೈಕಿ ಬಿಜೆಪಿಯಿಂದ ಟಿ.ಆರ್. ಸುಶ್ಮಿತ, ಎಚ್.ಪಿ. ಮಹಾದೇವ್, ಕೆ.ಬಿ. ಹರ್ಷವರ್ಧನ್, ಟಿ.ಎಂ. ಸುನೀತಾ, ಆಶಾ ಸುಬ್ಬಯ್ಯ, ಎಚ್.ಎಂ. ಪೂರ್ಣಿಮಾ, ಟಿ.ಕೆ. ಯಶೋಧ. ಅನಿತಾ ಗೆಲುವು ಸಾಧಿಸಿದರೆ ಕಾಂಗ್ರೆಸ್ ಪಕ್ಷದಿಂದ ಫಸಿಹ ತಬ್ಸಮ್, ರಂಜಿ ಪೂಣಚ್ಚ, ಡಿ.ಪಿ. ರಾಜೇಶ್, ಸಿ.ಜಿ. ಆಗಸ್ಟಿನ್, ಕೆ.ಎಚ್. ಮಹಮ್ಮದ್ ರಾಫಿ, ಸಿ.ಕೆ. ಪೃಥ್ವಿನಾಥ್, ಜೆಡಿಎಸ್ ಪಕ್ಷದಿಂದ ಎಸ್.ಎಚ್. ಮತೀನ್, ಪಕ್ಷೇತರರಾಗಿ ಎಂ.ಕೆ. ದೇಚಮ್ಮ, ವಿ.ಆರ್. ರಜನಿಕಾಂತ್ ಅಬ್ದುಲ್ ಜಲೀಲ್ ಗೆಲವು ಸಾಧಿಸಿದ್ದಾರೆ.

ಕಳೆದ ಸಾಲಿನಲ್ಲಿ ಬಿಜೆಪಿ 10 ಜೆಡಿಎಸ್ 4 ಹಾಗೂ ಕಾಂಗ್ರೆಸ್ 2 ಸ್ಥಾನಗಳನ್ನು ಪಡೆದಿದ್ದು ಐದು ವರ್ಷಗಳ ತನಕ ಬಿಜೆಪಿ ಆಡಳಿತ ನಡೆಸಿತ್ತು. ಈ ಬಾರಿ ಅಧ್ಯಕ್ಷ ಸ್ಥಾನ ಬಿಸಿಎಂ ‘ಎ’ಗೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾತಿ ಮಾಡಿ ಸರಕಾರ ಆದೇಶ ಹೊರಡಿಸಿದೆ.

ಮತಗಳ ವಿವರ: ವಾರ್ಡ್ ಸಂಖ್ಯೆ 18ರಲ್ಲಿ ಬಿಜೆಪಿ ಅಭ್ಯರ್ಥಿ 266 ಮತಗಳ ಅತಿ ಹೆಚ್ಚು ಅಂತರದಲ್ಲಿ ಜಯಗಳಿಸಿದರೆ ವಾರ್ಡ್ ಸಂಖ್ಯೆ 1 ರಲ್ಲಿ ಬಿಜೆಪಿಯ ಮಾಜಿ ಉಪಾಧ್ಯಕ್ಷೆ ತಸ್ನಿಂ ಅಕ್ತರ್ ಕಾಂಗ್ರೆಸ್ ಅಭ್ಯರ್ಥಿ ಪರ ಕೇವಲ ಮೂರು ಮತಗಳ ಅಂತರದಲ್ಲಿ ಪರಾಭವಗೊಂಡಿದ್ದಾರೆ. ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಜ್ಯೆನಾಭ ರೆಹಮಾನ್ ಕೇವಲ ಅತಿ ಕಡಿಮೆ 16 ಮತ ಪಡೆದುಕೊಂಡಿದ್ದಾರೆ.

ವಾರ್ಡ್‍ಸಂಖ್ಯೆ 1 ಚರ್ಚ್‍ರಸ್ತೆ ಫಸಿಹಾ ತಬಸಮ್ 157 (ಕಾಂಗ್ರೆಸ್), ತಸ್ನೀಂ ಅಕ್ತರ್ 154 (ಬಿಜೆಪಿ), ಗೀತಾ 95 (ಪಕ್ಷೇತರ), ವಾರ್ಡ್‍ಸಂಖ್ಯೆ 2 ದೇವಾಂಗ ಬೀದಿ ಪಿ.ಎ ರಂಜಿ ಪೂಣಚ್ಚ 428 (ಕಾಂಗ್ರೆಸ್), ಪಿ ವಿಷ್ಣು 147 (ಬಿಜೆಪಿ),ಸಿ.ಆರ್ ಅನೀಶ್ ಕುಮಾರ್ 61 (ಪಕ್ಷೇತರ), ವಾರ್ಡ್‍ಸಂಖ್ಯೆ 3 ಅರಸುನಗರ ಡಿ.ಪಿ ರಾಜೇಶ್ 478 (ಕಾಂಗ್ರೆಸ್), ಸಚಿನ್ ಕುಟ್ಟಯ್ಯ 367 (ಬಿಜೆಪಿ), ವಾರ್ಡ್‍ಸಂಖ್ಯೆ 4 ತೆಲುಗರಬೀದಿ, ಸುಶ್ಮಿತಾ ಟಿ,ಆರ್ 328 (ಬಿಜೆಪಿ), ಅನಿತಾ 301 (ಕಾಂಗ್ರೆಸ್), ಹೆಚ್.ಎಂ ಪೂವಿ 20 (ಪಕ್ಷೇತರ), ವಾರ್ಡ್‍ಸಂಖ್ಯೆ 5 ಮೊಗರಗಲ್ಲಿ ಎಸ್,ಎಚ್ ಮತೀನ್ 203 (ಜೆಡಿಎಸ್), ಎಝಾಜ್ ಅಹಮದ್ 194 (ಕಾಂಗ್ರೆಸ್) ದರ್ಶನ್ ಎನ್ 69 (ಬಿಜೆಪಿ), ಅಲ್ತಫ್ 76 (ಪಕ್ಷೇತರ), ವಾರ್ಡ್‍ಸಂಖ್ಯೆ 6 ಹರಿಕೇರಿ ರಜನಿಕಾಂತ್ 212 (ಪಕ್ಷೇತರ), ಆರ್ಮುಗ 128 (ಜೆಡಿಎಸ್), ಗಜೇಂದ್ರ ಹೆಚ್.ಆರ್ 32 (ಬಿಜೆಪಿ), ಹೆಚ್. ಆರ್ ಶಿವಪ್ಪ 9 (ಸಿಪಿಐಎಂ), ವಾರ್ಡ್‍ಸಂಖ್ಯೆ 7 ನೆಹರುನಗರ 1 ಎಂ.ಕೆ. ದೇಚಮ್ಮ 282 (ಪಕ್ಷೇತರ), ರೆಹನಾ ಷಾ 195 (ಎಸ್‍ಡಿಪಿಐ) ಬಿ.ಡಿ ಸುನೀತಾ 77 (ಬಿಜೆಪಿ), ನಸೀಮಾಬಾನು 26 (ಪಕ್ಷೇತರ), ಸುರಯ್ಯ18 (ಪಕ್ಷೇತರ), ವಾರ್ಡ್‍ಸಂಖ್ಯೆ 8 ನೆಹರುನಗರ ಅಗಸ್ಟಿನ್ 362 (ಕಾಂಗ್ರೆಸ್), ಜೂಡಿ ವಾಝ್ 69 (ಪಕ್ಷೇತರ), ಮೇರಿರಾಣಿ 37 (ಬಿಜೆಪಿ), ಲೈಲಾ ಜೋಸೇಫ್ 7 (ಪಕ್ಷೇತರ), ವಾರ್ಡ್‍ಸಂಖ್ಯೆ 9 ಸುಭಾಷ್‍ನಗರ ಕೆ ಮಹಮದ್ ರಾಫಿ 313 (ಕಾಂಗ್ರೆಸ್), ಪ್ರತೀಪ್ 85 (ಬಿಜೆಪಿ), ಅಬ್ದುಲ್ ಖಾದರ್ 85 (ಪಕ್ಷೇತರ), ಅಬ್ದುಲ್ ಶಾಕೀಲ್ 45 (ಎಸ್‍ಡಿಪಿಐ), ವಾರ್ಡ್‍ಸಂಖ್ಯೆ 10 ನಿಸರ್ಗ ಬಡಾವಣೆ ಅನಿತಾ 310 (ಬಿಜೆಪಿ), ಪಿ ಸಿಂಧು 301 (ಕಾಂಗ್ರೆಸ್), ಸ್ಯೆನಾಭ ರೆಹಮಾನ್ 16 (ಪಕ್ಷೇತರ), ವಾರ್ಡ್‍ಸಂಖ್ಯೆ 11 ಪಂಜುರುಪೇಟೆ ಹೆಚ್.ಪಿ. ಮಹಾದೇವ್ 330 (ಬಿಜೆಪಿ), ಕೆ.ಬಿ ಪ್ರತಾಪ್ 262 (ಕಾಂಗ್ರೆಸ್),

ವಾರ್ಡ್‍ಸಂಖ್ಯೆ 12 ಮೀನುಪೇಟೆ 1 ಅಬ್ದುಲ್ ಜಲೀಲ್ 346 (ಪಕ್ಷೇತರ) ಸಲೀಂ 32 (ಬಿಜೆಪಿ), ಎಸ್.ಎಚ್ ಮೈನುದ್ದೀನ್ 294 (ಜೆಡಿಎಸ್), ವಾರ್ಡ್‍ಸಂಖ್ಯೆ 13 ಮೀನುಪೇಟೆ 2 ಕೆ.ಬಿ ಹರ್ಷವರ್ಧನ್ 268 (ಬಿಜೆಪಿ), ದಿನೇಶ್ 172 (ಕಾಂಗ್ರೆಸ್), ವಾರ್ಡ್‍ಸಂಖ್ಯೆ 14 ಗೌರಿಕರೆ ಸಿ.ಕೆ ಪ್ರಥ್ವಿನಾಥ್ 301 (ಕಾಂಗ್ರೆಸ್), ಇ.ಸಿ ಜೀವನ್ 105 (ಬಿಜೆಪಿ), ಸುರೇಶ್ 05 (ಪಕ್ಷೇತರ), ವಾರ್ಡ್‍ಸಂಖ್ಯೆ 15 ಗಾಂಧಿನಗರ ಪಿ.ಎಂ ಸುನೀತಾ 393 (ಬಿಜೆಪಿ), ಪಿ.ಎ ಮಂಜುನಾಥ್ 389 (ಜೆಡಿಎಸ್), ಅಂತೋಣಿ 23 (ಪಕ್ಷೇತರ), ವಾರ್ಡ್‍ಸಂಖ್ಯೆ 16 ಚಿಕ್ಕಪೇಟೆ ಆಶಾ ಸುಬ್ಬಯ್ಯ 189 (ಬಿಜೆಪಿ), ಅನಿತಾ ಥೇರೆಸಾ 125 (ಕಾಂಗ್ರೆಸ್), ವಾರ್ಡ್‍ಸಂಖ್ಯೆ 17 ಮ್ಯೆಕ್ರೊವೇವ್ ಪೂರ್ಣಿಮಾ 332 (ಬಿಜೆಪಿ), ಗಾಯತ್ರಿ ನರಸಿಂಹ 77 (ಕಾಂಗ್ರೆಸ್), ಸುಮಿತ್ರ ಹೆಚ್.ಸಿ 40 (ಪಕ್ಷೇತರ). ವಾರ್ಡ್‍ಸಂಖ್ಯೆ 18 ಶಿವಕೇರಿ ಟಿ.ಕೆ ಯಶೋದ 306 (ಬಿಜೆಪಿ), ನವೀನ್ ಕೆ.ಟಿ 40 (ಕಾಂಗ್ರೆಸ್).