ನಾಪೆÇೀಕ್ಲು, ನ. 1: ಕೊಡವ ಪಾಟ್, ಕೊಡವ ನಾಟಕ, ಕೊಡವ ಪ್ರಬಂಧ, ಕವಿರನಕೆ ಕಳಿ ಪರಡುವೊ ಪೈಪೆÇೀಟಿ, ಕೊಡವ ಪಾಟ್‍ಕ್ ನೃತ್ಯ ಪ್ರದರ್ಶನ, ಮಿಮಿಕ್ರಿ ಪ್ರದರ್ಶನ, ಒಂಟಿ ನಟನೆ, ಹರಿಕಥೆ, ಸೇರಿದಂತೆ ಕೊಡವ ಆರ್ಕೆಸ್ಟ್ರಾ, ಅಪ್ಪಚ್ಚಕವಿ ರಚಿಸಿದ ಪುಸ್ತಕಗಳ ಪ್ರದರ್ಶನ ಸೇರಿದಂತೆ ಇಡೀ ಅಪ್ಪಚ್ಚಕವಿಯ ಬದುಕಿನ ಸಾಹಿತ್ಯ ಲೋಕವನ್ನು ಮತ್ತೊಮ್ಮೆ ನೆನಪಿಸುವ ಕಾರ್ಯಕ್ರಮಕ್ಕೆ ಸಮೀಪದ ಕಕ್ಕಬ್ಬೆ ಕೇಂದ್ರೀಯ ಪ್ರೌಢಶಾಲಾ ಸಭಾಂಗಣ ವೇದಿಕೆಯಾಯಿತು.

ಮಡಿಕೇರಿಯ ತಿರಿಬೊಳ್‍ಚ ಕೊಡವ ಸಂಘ, ಬಲ್ಲಮಾವಟಿಯ ಜನಮನ ಕಲಾಸಂಘ, ಕಕ್ಕಬ್ಬೆಯ ಕೇಂದ್ರ ವಿದ್ಯಾಸಂಸ್ಥೆ, ಕಕ್ಕಬ್ಬೆ ದಿ ಹೈಲ್ಯಾಂಡರ್ಸ್ ಫ್ಯಾಮಿಲಿ ಕ್ಲಬ್, ಮಡಿಕೇರಿ ಕೊಡವ ಮಕ್ಕಡ ಕೂಟದ ಸಂಯುಕ್ತಾಶ್ರಯದಲ್ಲಿ ಕಕ್ಕಬ್ಬೆ ಕೇಂದ್ರ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆದ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ಅವರ 150ನೇ ಜನ್ಮದಿನಾಚರಣೆಯಲ್ಲಿ ಈ ಎಲ್ಲಾ ಕಾರ್ಯಕ್ರಮಗಳು ನಡೆದವು.ಕಕ್ಕಬ್ಬೆ ಪಟ್ಟಣದ ಮೂಲಕ ಶಾಲಾ ಸಭಾಂಗಣದವರೆಗೆ ಸಾಂಸ್ಕøತಿಕ ಮೆರವಣಿಗೆ ಏರ್ಪಡಿಸಲಾಗಿತ್ತು. ಇದರ ನೇತೃತ್ವವನ್ನು ಕಲಿಯಂಡ ಸಿ.ನಾಣಯ್ಯ, ಉಳ್ಳಿಯಡ ಡಾ. ಎಂ.ಪೂವಯ್ಯ, ಬೊಳ್ಳಜಿರ ಅಯ್ಯಪ್ಪ, ಬಾಚಮಂಡ ಲವ ಚಿಣ್ಣಪ್ಪ, ಕಲಿಯಂಡ ಸಂಪನ್ ಅಯ್ಯಪ್ಪ, ಅಂಜಪರವಂಡ ಕುಶಾಲಪ್ಪ ಮತ್ತಿತರರು ವಹಿಸಿದ್ದರು. ಮೆರವಣಿಗೆಯಲ್ಲಿ ತಳಿಯತಕ್ಕಿ ಬೊಳಕ್, ದುಡಿಕೊಟ್ಟ್ ಪಾಟ್, ಸಾಂಪ್ರದಾಯಿಕ ಉಡುಗೆ, ತೊಡುಗೆ, ಸಾಂಪ್ರದಾಯಿಕ ವಾಲಗ ಹೆಚ್ಚಿನ ಮೆರುಗು ನೀಡಿತು.ಸಭಾ ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಲಿಯಂಡ ಸಿ.ನಾಣಯ್ಯ ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಕೊಡಗಿಗೆ ಒಬ್ಬರೇ ಕವಿ ಅದು ಅಪ್ಪಚ್ಚಕವಿ. ಅವರು ವರಕವಿ, ಆದಿಕವಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹಿಂದಿನ ಕಾಲದಲ್ಲಿ ಕಷ್ಟ ಕಾರ್ಪಣ್ಯಗಳಲ್ಲಿ ಅವರು ರಚಿಸಿದ ಕೃತಿಗಳು, ನಾಟಕಗಳು ಹಾಗೂ ಸಾಹಿತ್ಯ ಕೃಷಿಯನ್ನು ಇಂದಿಗೂ ಯಾರಿಂದಲೂ ಮಾಡಲು ಸಾಧ್ಯವಾಗಿಲ್ಲ. ಅವರನ್ನು ಯುವ ಪೀಳಿಗೆಗೆ ಪರಿಚಯಿಸುವ ಮತ್ತು ಅವರ ಸಾಹಿತ್ಯದ

(ಮೊದಲ ಪುಟದಿಂದ) ಸೊಗಡನ್ನು ವಿಶ್ವದಾದ್ಯಂತ ಪಸರಿಸುವ ನಿಟ್ಟಿನಲ್ಲಿ ಇವರ 150ನೇ ಜಯಂತಿಯನ್ನು ಆಚರಿಸಲಾಗುತ್ತಿದೆ ಎಂದರು.

ಕೊಡಗಿನ ಕೊಡವರು ವೀರರು, ಶೂರರು, ಸಾಹಿತಿಗಳು, ಕಲಾಗಾರರು, ಕ್ರೀಡಾಕಲಿಗಳು ಆಗಿದ್ದಾರೆ. ಎಲ್ಲರೂ ತಮ್ಮ ಆಸಕ್ತಿಗೆ ಅನುಗುಣವಾಗಿ ಆಯಾಯ ಕ್ಷೇತ್ರಗಳಲ್ಲಿ ಸಾಧನೆ ಮಾಡುವದರ ಮೂಲಕ ಜಿಲ್ಲೆಗೆ, ದೇಶಕ್ಕೆ ಕೀರ್ತಿ ತರಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಳ್ಳಿಯಡ ಡಾ. ಎಂ.ಪೂವಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಅಪ್ಪಚ್ಚಕವಿ ಮಾಡಿದ ಸಾಧನೆ ಸೂರ್ಯ ಚಂದ್ರರಿರುವವರೆಗೆ ಉಳಿಯುವಂತಹದ್ದಾಗಿದೆ. ಇದು ಇಂದಿಗೂ ಎಲ್ಲರೂ ಕೊಡವ ಭಾಷೆ, ಸಂಸ್ಕøತಿ, ಸಾಹಿತ್ಯವನ್ನು ಉಳಿಸಿ ಬೆಳೆಸಿಕೊಂಡು ಬರಲು ಸಾಧ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ತಿರಿಬೊಳ್‍ಚ ಕೊಡವ ಸಂಘದ ಅಧ್ಯಕ್ಷೆ ಉಳ್ಳಿಯಡ ಡಾಟಿ ಪೂವಯ್ಯ ಏಳು ನಿರ್ಣಯಗಳನ್ನು ಮಂಡಿಸಿದರು.

ಸಭೆಯಲ್ಲಿ ಉಳ್ಳಿಯಡ ಪೂವಯ್ಯ ರಚಿಸಿದ ಹಾಗೂ ಮಡಿಕೇರಿ ಕೊಡವ ಮಕ್ಕಡ ಕೂಟದ ವತಿಯಿಂದ ಹೊರತರಲಾದ “ಅಪ್ಪಚ್ಚ ಕವಿರ ನೆಪ್ಪು” ಎಂಬ ಪುಸ್ತಕವನ್ನು ಬಿಡುಗಡೆಗೊಳಿಸ ಲಾಯಿತು.

ಕಾರ್ಯಕ್ರಮದಲ್ಲಿ ಬೊವ್ವೇರಿಯಂಡ ಉತ್ತಯ್ಯ, ಅಪ್ಪನೆರವಂಡ ಶಾಂತಿ ಅಚ್ಚಪ್ಪ ಮಾತನಾಡಿದರು.

ಬೊಜ್ಜಂಗಡ ಡಾ. ಅವನಿಜಾ ಸೋಮಯ್ಯ ಅಪ್ಪಚ್ಚಕವಿಯ ಬಗ್ಗೆ ಪ್ರಬಂಧ ಮಂಡಿಸಿದರು. ಕೋಟೆರ ಸುರೇಶ್ ಚಂಗಪ್ಪ ಮುಖ್ಯ ಅತಿಥಿಗಳಾದ ಕಲಿಯಂಡ ನಾಣಯ್ಯ ಅವರನ್ನು ಸಭೆಗೆ ಪರಿಚಯಿಸಿದರೆ, ಅಪ್ಪಾರಂಡ ಮೀರಾ ನಂಜಪ್ಪ ಬೊವ್ವೇರಿಯಂಡ ಡಾ. ಉತ್ತಯ್ಯ ಅವರನ್ನು ಸಭೆಗೆ ಪರಿಚಯಿಸಿದರು.

ವೇದಿಕೆಯಲ್ಲಿ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ, ಕಕ್ಕಬ್ಬೆ ದಿ ಹೈಲ್ಯಾಂಡರ್ಸ್ ಕ್ಲಬ್‍ನ ಅಧ್ಯಕ್ಷ ಅಪ್ಪಾರಂಡ ಸಾಗರ್ ಗಣಪತಿ, ಸ್ಥಾಪಕ ಅಧ್ಯಕ್ಷ ಕಲ್ಯಾಟಂಡ ರಘು ತಮ್ಮಯ್ಯ, ಇಗ್ಗುತ್ತಪ್ಪ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ, ಕಕ್ಕಬ್ಬೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರ್ತಂಡ ಶೈಲಾ ಕುಟ್ಟಪ್ಪ, ಕುಕ್ಕೇರ ಜಯಾ ಚಿಣ್ಣಪ್ಪ, ಪೆಮ್ಮುಡಿಯಂಡ ನಿವ್ಯ ಮತ್ತಿತರರು ಇದ್ದರು.

ಕೂಪದಿರ ಜುನಾ ವಿಜಯ್, ಕಾಳೇಂಗಡ ಸಾವಿತ್ರಿ, ಬೊಟ್ಟೋಳಂಡ ನಿವ್ಯ ಪ್ರಾರ್ಥನೆ. ಮುಂಡಚಾಡಿರ ನಿಮ್ಮಿ ಭರತ್ ಸ್ವಾಗತ ನೃತ್ಯ. ಬಲ್ಲಮಾವಟಿ ಜನಮನ ಕಲಾಸಂಘದ ಅಧ್ಯಕ್ಷ ನೆರವಂಡ ಉಮೇಶ್ ಸ್ವಾಗತ, ಚೆಯ್ಯಂಡ ಸತ್ಯ ನಿರೂಪಿಸಿ, ಮಡಿಕೇರಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ ವಂದಿಸಿದರು.

ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದ ವಿಜೇತರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಲಾಯಿತು.

-ಪಿ.ವಿ.ಪ್ರಭಾಕರ್