ನಾಪೆÇೀಕ್ಲು, ನ. 1: ತಾ. 8 ರಂದು ಕಕ್ಕಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವ ಸನ್ನಿಧಿಯಲ್ಲಿ ಹುತ್ತರಿ ಹಬ್ಬದ ದಿನ ಮತ್ತು ಸುಮುಹೂರ್ತದ ಗಳಿಗೆಯನ್ನು ನಿಶ್ಚಯಿಸಲಾಗುವದು. ಅದೇ ದಿನ ಹುತ್ತರಿ ಕಲಾಡ್ಚ ಹಬ್ಬದ ಕಟ್ಟು ಹಾಕುವ ಕಾರ್ಯಕ್ರಮ ನಡೆಯಲಿದೆ. ಇದಕ್ಕೆ ದೇವಳಕ್ಕೆ ಸಂಬಂಧಿಸಿದ ಎಲ್ಲಾ ತಕ್ಕಮುಖ್ಯಸ್ಥರು ಮತ್ತು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಳದ ದೇವತಕ್ಕರಾದ ಪರದಂಡ ಕುಟುಂಬಸ್ಥರು ತಿಳಿಸಿದ್ದಾರೆ.