ಮಡಿಕೇರಿ, ನ. 1: ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲೆ ಅವರು ನಿವೃತ್ತಿ ಹೊಂದಿರುವದರಿಂದ ಕಾಲೇಜಿನಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು.

ಸಮಾರಂಭದಲ್ಲಿ ಅಧ್ಯಾಪಕ-ಅಧ್ಯಾಪಕೇತರ ಸಿಬ್ಬಂದಿ ವರ್ಗ ಭಾಗವಹಿಸಿದ್ದರು. ಕಳೆದ ಐದು ವರ್ಷಗಳಲ್ಲಿ ಕಾಲೇಜಿನಲ್ಲಿ ಆದ ಸಕಾರಾತ್ಮಕ ಅಭಿವೃದ್ಧಿ ಕಾರ್ಯಗಳು, ವಿದ್ಯಾರ್ಥಿಗಳ ಹಾಗೂ ಅಧ್ಯಾಪಕರ ಮೇಲಿನ ಕಾಳಜಿ, ಸಂತ್ರಸ್ತರಿಗೆ ನೀಡಿದ ವಸತಿ ಸೌಕರ್ಯ, ಶಿಕ್ಷಕ - ರಕ್ಷಕ ಸಂಘವನ್ನು ಕಟ್ಟಿದ ರೀತಿ, ಹಳೆಯ ವಿದ್ಯಾರ್ಥಿ ಸಂಘವನ್ನು ಒಟ್ಟುಗೂಡಿಸಿಕೊಂಡು ನಡೆಸಿದ ರೀತಿಯನ್ನು ಹಲವರು ಸ್ಮರಿಸಿದರು.

ಡಾ. ಪಾರ್ವತಿ ಅಪ್ಪಯ್ಯ ಅವರು ಶೈಕ್ಷಣಿಕವಾಗಿ 58 ಪುಸ್ತಕಗಳನ್ನು ಬರೆದು ಹೊರ ದೇಶಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಹಲವು ಬಾರಿ ಮಂಡಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಏಕೈಕ ಮಹಿಳೆ ಎಂದು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಶಬರ್ ಪಾಷ ಅಭಿಪ್ರಾಯಪಟ್ಟರು. ಅಲ್ಲದೆ ಯುವ ಸಂಸತ್ತನ್ನು ಕಾಲೇಜಿಗೆ ಪರಿಚಯಿಸಿದ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದರು.

ಡಾ. ಸೌಮ್ಯ ಕೃಷ್ಣಮೂರ್ತಿ ಸೂಕ್ಷ್ಮಾಣು ವಿಜ್ಞಾನ ವಿಭಾಗ ಸ್ವಾಗತಿಸಿದರು. ಡೀನಾ, ಆಂಗ್ಲ ವಿಭಾಗ ಕಾರ್ಯಕ್ರಮವನ್ನು ನಿರೂಪಿಸಿದರು. ಇತಿಹಾಸ ವಿಭಾಗದ ಮುಖ್ಯಸ್ಥ ಮೇಜರ್ ರಾಘವ ವಂದಿಸಿದರು.