ಸೋಮವಾರಪೇಟೆ, ನ. 1: ಇಲ್ಲಿನ ಲಯನ್ಸ್ ಕ್ಲಬ್ ಹಾಗೂ ಮೈಸೂರಿನ ಅಪೋಲೋ ಬಿ.ಜಿ.ಎಸ್. ಆಸ್ಪತ್ರೆಯ ವತಿಯಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಹೃದಯ ರೋಗ ತಪಾಸಣಾ ಶಿಬಿರ ನಡೆಯಿತು.

ಶಿಬಿರವನ್ನು ಲಯನ್ಸ್ ಅಧ್ಯಕ್ಷ ಎಸ್.ಎನ್. ಯೋಗೇಶ್ ಉದ್ಘಾಟಿಸಿದರು. ಆಸ್ಪತ್ರೆಯ ಹಿರಿಯ ವೈದ್ಯ ಆನಂದ್ ಅವರು ರೋಗಿಗಳನ್ನು ಪರಿಶೀಲಿಸಿದರು. ರೋಗಿಗಳಿಗೆ ಬಿ.ಪಿ., ಶುಗರ್ ತಪಾಸಣೆಯೊಂದಿಗೆ ವೈದ್ಯರ ಸಲಹೆ ಮೇರೆಗೆ ಇಸಿಜಿ, ಎಕೋ ಮಾಡಲಾಯಿತು.

ಈ ಸಂದರ್ಭ ಲಯನ್ಸ್ ಪದಾಧಿಕಾರಿಗಳಾದ ಎ.ಎಸ್. ಮಹೇಶ್, ಎಸ್.ಕೆ. ಲೀಲಾರಾಂ, ಕೆ.ಎಂ. ಜಗದೀಶ್, ಕೆ.ಎನ್. ತೇಜಸ್ವಿ, ವಿಜೇಂದ್ರ, ಮೇಜರ್ ಮಂದಪ್ಪ, ರಾಣಿ ಪ್ರತಾಪ್, ಸಿ.ಕೆ. ಮಲ್ಲಪ್ಪ, ಪ್ರತಾಪ್ ಈರಪ್ಪ ಉಪಸ್ಥಿತರಿದ್ದರು.