ವೀರಾಜಪೇಟೆ, ನ. 1: ಮಲಬಾರ್ ರಸ್ತೆಯ ಮೀನುಪೇಟೆ ಮಸ್ಜಿದುನ್ನೂರ್ ಆಶ್ರಯದಲ್ಲಿ ತಾ.2ರಂದು (ಇಂದು) ರಾತ್ರಿ ಮಗ್‍ರಿಬ್ ನಮಾಝ್‍ನಂತರ ಮಜ್ಲಿಸುನ್ನೂರ್ ಹಾಗೂ ದುಆ ಮಜ್ಲಿಸ್ ನಡೆಯಲಿದೆ. ರಾತ್ರಿ 8:30ಗಂಟೆಗೆ ಶೈಖುನಾ ಅಬ್ದುಲ್ ಖಾದರ್ ಅಲ್ ಖಾಸಿಮಿ ಇವರಿಂದ ಧಾರ್ಮಿಕ ಪ್ರವಚನ ಏರ್ಪಡಿಸಲಾಗಿದೆ. ಮಹಿಳೆಯರಿಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆಯೆಂದು ಮಸ್ಜಿದುನ್ನೂರ್ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.