ಮಡಿಕೇರಿ, ನ. 2: ಶಿಶು ಅಭಿವೃದ್ಧಿ ಯೋಜನೆ ಮಡಿಕೇರಿ ವತಿಯಿಂದ ತಾ. 7 ರಂದು 12 ಗಂಟೆಗೆ ಶಿಶು ಕಲ್ಯಾಣ ಸಂಸ್ಥೆ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಹತ್ತಿರ ಇಲ್ಲಿ ಕನ್ನಡ ರಾಜ್ಯೋತ್ಸವ ದಿನಾಚರಣೆ ಅಂಗವಾಗಿ 5-8, 9-12, 13-16 ವರ್ಷದವರೆಗೆ 3 ಗುಂಪುಗಳಲ್ಲಿ ಕನ್ನಡ ಗೀತೆ ಸ್ಪರ್ದೆಯನ್ನು ಏರ್ಪಡಿಸಲಾಗಿದೆ. ಈ ಸ್ಪರ್ಧೆಗೆ ಭಾಗವಹಿಸುವ ಮಕ್ಕಳು ತಾ.7 ರಂದು ಬೆಳಿಗ್ಗೆ 9 ಗಂಟೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾ ಕಚೇರಿಯ ದೂರವಾಣಿ ಸಂಖ್ಯೆ:08272-228197ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.