ಗೋಣಿಕೊಪ್ಪಲು ವರದಿ, ನ. 1: ಗೋಣಿಕೊಪ್ಪಲಿನ ಕೊಡಗು ಪ್ಲಾಂಟರ್ಸ್ ಕ್ಲಬ್‍ನಲ್ಲಿ ಕೊಡಗು ಪ್ಲಾಂಟರ್ಸ್ ಕಲ್ಚರಲ್ ಅಸೋಸಿ ಯೇಷನ್ ಆಶ್ರಯದಲ್ಲಿ ಜಿಲ್ಲಾಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ನಡೆಯಿತು. ಕ್ಲಬ್ ತಂಡಗಳ ನಡುವೆ ಪುರುಷ, ಮಹಿಳೆ, ಮಿಕ್ಸೆಡ್ ಹಾಗೂ ಹಿರಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಸ್ಪರ್ಧೆ ನಡೆಯಿತು. ನಾಲ್ಕು ವಿಭಾಗದಲ್ಲಿಯೂ ಕೊಡಗು ಪ್ಲಾಂಟರ್ಸ್ ಕ್ಲಬ್ ತಂಡ ಜಯಭೇರಿ ಸಾಧಿಸಿದೆ.
ಪುರುಷರ ಡಬಲ್ಸ್ ವಿಭಾಗದಲ್ಲಿ ಕೊಡಗು ಪ್ಲಾಂಟರ್ಸ್ ಕ್ಲಬ್ ಆಟಗಾರರಾದ ಕೊಳ್ಳಿಮಾಡ ನಂಜಪ್ಪ-ಕುಪ್ಪಂಡ ರಜತ್ ತಂಡ ಪಾಲಿಬೆಟ್ಟದ ಬ್ಯಾಂಬೂ ಕ್ಲಬ್ ಆಟಗಾರರಾದ ಕುಪ್ಪಂಡ ಅಚಲ್-ತರುಣ್ ತಂಡವನ್ನು ಸೋಲಿಸಿ ಪ್ರಥಮ ಸ್ಥಾನ ಪಡೆಯಿತು.
ಹಿರಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಕೊಡಗು ಪ್ಲಾಂಟರ್ಸ್ ಕ್ಲಬ್ ಆಟಗಾರರಾದ ತನು ಉತ್ತಪ್ಪ-ಕೊಲ್ಲೀರ ವಿಜು ತಂಡ ವಿಕ್ಟೋರಿಯ ಕ್ಲಬ್ ಆಟಗಾರರಾದ ಸುಬ್ರಮಣಿ, ಗಿಲ್ಲ್ ಅವರನ್ನು ಸೋಲಿಸಿ ಪ್ರಥಮ ಸ್ಥಾನ ಪಡೆಯಿತು.
ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಕೊಡಗು ಪ್ಲಾಂಟರ್ಸ್ ಕ್ಲಬ್ ಆಟಗಾರರಾದ ಪಡಿಕಲ್ ಸಂತೋಷ್-ಕೊಲ್ಲೀರ ರಚನಾ ಬೋಪಣ್ಣ ತಂಡ ಬ್ರಹ್ಮಗಿರಿ ಕ್ಲಬ್ ಆಟಗಾರರಾದ ಧನಂಜಯ್-ಗ್ರೀಷ್ಮಾ ತಂಡವನ್ನು ಸೋಲಿಸಿ ವಿಜಯ ಸಾಧಿಸಿತು.
ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಕೊಡಗು ಪ್ಲಾಂಟರ್ಸ್ ಕ್ಲಬ್ (ರೆಡ್) ಆಟಗಾರರಾದ ಕೊಲ್ಲೀರ ರಚನಾ ಬೋಪಣ್ಣ-ದಿಯಾ ತಂಡ ಪ್ಲಾಂಟರ್ಸ್ ಕ್ಲಬ್ (ಬ್ಲೂ) ತಂಡದ ಅನಿತಾ ವಿಜು, ಕುಸುಮಾ ಭೀಮಯ್ಯ ತಂಡವನ್ನು ಸೋಲಿಸಿ ಪ್ರಥಮ ಬಹುಮಾನ ಪಡೆಯಿತು.