ಮಡಿಕೇರಿ, ನ. 2: ಕರ್ನಾಟಕ ಲಲಿತಕಲಾ ಅಕಾಡೆಮಿಯು ರಾಜ್ಯದ ಕಲಾವಿದರಿಗೆ ರಾಜ್ಯದ ಒಳಗೆ ಮತ್ತು ಹೊರ ರಾಜ್ಯಗಳಲ್ಲಿ ಏಕವ್ಯಕ್ತಿ ಮತ್ತು ಸಮೂಹ ಕಲಾ ಪ್ರದರ್ಶನ ಏರ್ಪಡಿಸಲು ಧನಸಹಾಯ ನೀಡುತ್ತಿದ್ದು, 2018 ನೇ ಸಾಲಿನ ಏಕವ್ಯಕ್ತಿ ಮತ್ತು ಸಮೂಹ ಕಲಾ ಪ್ರದರ್ಶನಕ್ಕೆ ಧನ ಸಹಾಯ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಈ ಪ್ರದರ್ಶನದಲ್ಲಿ ಭಾಗವಹಿಸಲು ಇಚ್ಚಿಸುವ ಕಲಾವಿದರು ತಾವು ರಚಿಸಿದ ಕಲಾಕೃತಿಗಳ 5x7 ಅಂಗುಲ ಅಳತೆಯ ಛಾಯಾಚಿತ್ರಗಳನ್ನು ಕಳುಹಿಸಬೇಕಾಗಿದ್ದು, ಅವು ಕಳೆದ 2 ವರ್ಷಗಳಿಂದೀಚೆಗೆ ರಚಿಸಿದ ಕಲಾಕೃತಿಗಳಾಗಿರಬೇಕು. ಯಾವದೇ ಕಲಾ ಪ್ರದರ್ಶನದಲ್ಲಿ ಪ್ರದರ್ಶನಗೊಂಡಿರಬಾರದು. ಈ ಧನ ಸಹಾಯಕ್ಕೆ ಆಸಕ್ತ ಕಲಾವಿದರು ತಮ್ಮ ಕನಿಷ್ಟ ಐದು ಕಲಾಕೃತಿಗಳ ಛಾಯಾಚಿತ್ರಗಳು ಮತ್ತು ಕಲಾವಿದರ ಭಾವಚಿತ್ರ, ಪರಿಚಯ ಪ್ರತದೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ತಾ. 30 ರೊಳಗೆ ಅಕಾಡೆಮಿಯ ಕಚೇರಿಗೆ (ಅಂಚೆ ಮೂಲಕ ಅಥವಾ ಖುದ್ದಾಗಿ) ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿಯನ್ನು ರಿಜಿಸ್ಟ್ರಾರ್, ಕರ್ನಾಟಕ ಲಲಿತಕಲಾ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆ.ಸಿ. ರಸ್ತೆ, ಬೆಂಗಳೂರು-560002, ಇವರಿಗೆ ತಲಪಿಸಲು ಕೋರಿದೆ. ತಡವಾಗಿ ಬಂದ ಅರ್ಜಿ ಹಾಗೂ ಅಪೂರ್ಣ ಅರ್ಜಿಯನ್ನು ಪರಿಗಣಿಸಲಾಗುವದಿಲ್ಲ. ಹೆಚ್ಚಿನ ವಿವರಗಳಿಗೆ ಅಕಾಡೆಮಿಯ ವೆಬ್‍ಸೈಟ್: ತಿತಿತಿ.ಟಚಿಟiಣಞಚಿಟಚಿ ಞಚಿಡಿಟಿಚಿಣಚಿಞಚಿ.oಡಿg, ಇ-ಮೇಲ್: ಞಟಚಿ.ಞಚಿಡಿಟಿಚಿಣಚಿಞಚಿ@gmಚಿiಟ.ಛಿom ಹಾಗೂ ದೂರವಾಣಿ: 080-22480297 ನ್ನು ಸಂಪರ್ಕಿಸಬಹುದು. ಅರ್ಜಿಯನ್ನು ಕರ್ನಾಟಕ ಲಲಿತಕಲಾ ಅಕಾಡೆಮಿಯ ಕಚೇರಿ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು-560 002 ಇಲ್ಲಿ ಖುದ್ದಾಗಿ ಅಥವಾ ಅಕಾಡೆಮಿಯ ವೆಬ್‍ಸೈಟ್: ತಿತಿತಿ.ಟಚಿಟiಣಞಚಿಟಚಿಞಚಿಡಿಟಿಚಿಣಚಿಞಚಿ.oಡಿg, ಫೇಸ್‍ಬುಕ್ ಮುಖಾಂತರವೂ ಅರ್ಜಿ ಪಡೆಯಬಹುದಾಗಿದೆ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿಯ ರಿಜಿಸ್ಟ್ರಾರ್ ತಿಳಿಸಿದ್ದಾರೆ.