ಕೂಡಿಗೆ, ನ. 2: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೂಡಿಗೆ ವಲಯದಲ್ಲಿ ಪ್ರಗತಿನಿಧಿ ಪಡೆದು ಸೋಲಾರ್ ಅಳವಡಿಸಿಕೊಂಡಿರುವ ಪಾಲುದಾರ ಸದಸ್ಯರುಗಳಿಗೆ ಅನುದಾನ ವಿತರಣೆ ಕಾರ್ಯಕ್ರಮವನ್ನು ಹೆಗ್ಡೆಹಳ್ಳಿ ಒಕ್ಕೂಟದ ಅಧ್ಯಕ್ಷೆ ಮಂದಾಕಿನಿ ಉದ್ಘಾಟಿಸಿದರು.
ಧರ್ಮಸ್ಥಳ ಕ್ಷೇತ್ರದಿಂದ ಮಂಜೂರು ಗೊಂಡಿರುವ ಅನುದಾನವನ್ನು ಕೂಡಿಗೆ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆಯವರು ವಿತರಿಸಿ ಮಾತನಾಡಿ, ಸದಸ್ಶರ ಮನೆಗಳಲ್ಲಿ ಪ್ರಕೃತಿದತ್ತವಾದ ಸೂರ್ಯನ ಶಕ್ತಿಯನ್ನು ಉಪಯೋಗಿಸಿಕೊಂಡು ಶಾಶ್ವತವಾಗಿ ಬೆಳಕು ಪಡೆಯಲು ಸೋಲಾರ್ ಸಹಕಾರಿಯಾಗಿದೆ. ಇತರ ಸದಸ್ಯರುಗಳಿಗೂ ಸೋಲಾರ್ ದೀಪಗಳ ಬಳಕೆಯಿಂದಾಗುತ್ತಿರುವ ಅನುಕೂಲತೆಗಳ ಬಗ್ಗೆ ಮನವರಿಕೆ ಮಾಡಿ ಎಲ್ಲಾ ಮನೆಗಳಲ್ಲಿಯೂ ಸೋಲಾರ್ ಅಳವಡಿಸಿಕೊಳ್ಳುವಂತೆ ಪ್ರೇರಣೆ ನೀಡಬೇಕು. ಸೋಲಾರ್ ಅಳವಡಿಸಿಕೊಂಡ ಮನೆಯವರು ಸೋಲಾರ್ ಕಂಪೆನಿಯಿಂದ ದೃಢಪತ್ರ ಪಡೆದು ವಿದ್ಯುತ್ ಬಿಲ್ಲು ಕಟ್ಟುವ ಸಂದರ್ಭ ನೀಡಿದಲ್ಲಿ ವಿದ್ಯುತ್ ಬಿಲ್ಲಿನಲ್ಲಿಯೂ ರಿಯಾಯಿತಿ ಪಡೆಯಬಹುದು.
ಕ್ಷೇತ್ರದಿಂದ ಪೂಜ್ಯರು ನೀಡಿರುವ ಅನುದಾನವನ್ನು ಸಬ್ಧಳಕೆ ಮಾಡಿ ಅಭಿವೃದ್ಧಿ ಹೊಂದಿವ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಸೋಲಾರ್ ಅಳವಡಿಕೆ ಮಾಡಿರುವ ಹದಿನೆಂಟು ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.