ನಾಪೆÇೀಕ್ಲು, ನ. 2: ನಾಪೆÇೀಕ್ಲು ಸಮುದಾಯ ಆರೋಗ್ಯ ಕೇಂದ್ರಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ನೀಡಲಾದ ನೂತನ 108 ತುರ್ತು ಚಿಕಿತ್ಸಾ ವಾಹನವನ್ನು ಸಮುದಾಯ ಆರೋಗ್ಯ ಕೇಂದ್ರದ ವೈದ್ಯರಾದ ಡಾ|| ಮದನ್ ಮೋಹನ್ ಬರಮಾಡಿಕೊಂಡರು.
ನಂತರ ಮಾತನಾಡಿದ ಅವರು 11 ವರ್ಷಗಳ ಹಿಂದೆ ಇಲ್ಲಿಗೆ 108 ವಾಹನವನ್ನು ನೀಡಲಾಗಿತ್ತು. ಅದು ಹಳೆಯದಾದ ಕಾರಣ ಈಗ ನೂತನ ವಾಹನ ನೀಡಲಾಗಿದೆ. ತಾ. 1ರಂದು 108ರ ವರ್ಷಾಚರಣೆ ನಡೆಯುತ್ತಿರುವ ಸಂದರ್ಭದಲ್ಲಿ ನೂತನ ವಾಹನ ದೊರೆಯುತ್ತಿರುವದು ಸಿಬ್ಬಂದಿಗಳಿಗೂ ಸಂತಸವಾಗಿದೆ. ನೂತನ ವಾಹನದಲ್ಲಿ ಶಿಥಲೀಕರಣದ ವ್ಯವಸ್ಥೆ ಸೇರಿದಂತೆ ಎಲ್ಲಾ ಹೈಟೆಕ್ ಸೌಲಭ್ಯಗಳನ್ನು ಒದಗಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭ 108 ಚಾಲಕರಾದ ಟಿ.ಎಂ.ಕಿರಣ್, ಟಿ.ಎಸ್.ಸುನಿಲ್, ಶುಶ್ರೂಶಕ ಕೆ.ಡಿ.ರಂಜಿತ್, ಸಮುದಾಯ ಆರೋಗ್ಯ ಕೇಂದ್ರದ ಶುಶ್ರೂಶಕಿಯರಾದ ಶಶಿಕಲಾ, ಚೈತ್ರ, ಮತ್ತಿತರರು ಇದ್ದರು.