ಸೋಮವಾರಪೇಟೆ, ನ. 2: ದೇವತೆಗಳು ಹಾಗೂ ರಾಷ್ಟ್ರ ಪುರುಷರ ಚಿತ್ರಗಳಿರುವ, ಚೀನಾ ನಿರ್ಮಿತ ಪಟಾಕಿಗಳ ಮಾರಾಟದ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಹಿಂದೂ ಜನ ಜಾಗೃತಿ ಸಮಿತಿಯ ಪದಾಧಿಕಾರಿಗಳು ಆಗ್ರಹಿಸಿ, ಪೊಲೀಸ್ ಠಾಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಇಂತಹ ಪಟಾಕಿಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಸಮಿತಿಯ ಪದಾಧಿಕಾರಿಗಳು ಆಗ್ರಹಿಸಿದರು.
ಸಮಿತಿಯ ಪಿ. ಮಧು, ರಮೇಶ್, ಶರಣ್, ಆನಂದ್, ರಾಜಣ್ಣ, ನೆಹರು ಸೇರಿದಂತೆ ಇತರರು ಉಪಸ್ಥಿತರಿದ್ದರು.