ಗೋಣಿಕೊಪ್ಪಲು ವರದಿ, ನ. 1: ಪೊನ್ನಂಪೇಟೆ ಕೊಡವ ಸಮಾಜದಿಂದ ಪ್ರಕೃತಿ ವಿಕೋಪ ಸಂತ್ರಸ್ತ ಕುಟಂಬದ 130 ವಿದ್ಯಾರ್ಥಿಗಳಿಗೆ ಆಶ್ರಯ ನೀಡಿರುವ ಸಾಯಿಶಂಕರ ವಿದ್ಯಾಸಂಸ್ಥೆಗೆ ರೂ. 2.30 ಲಕ್ಷ ಮೌಲ್ಯದ ಆಹಾರ ಸಾಮಗ್ರಿ ನೀಡಲಾಗಿದೆ.
2,500 ಕೆ.ಜಿ. ಅಕ್ಕಿ, 900 ಕೆ.ಜಿ. ಬೇಳೆ, 120 ಲೀಟರ್ ಅಡುಗೆ ಎಣ್ಣೆ ಸೇರಿದಂತೆ ವಿವಿಧ ಉತ್ಪನ್ನಗಳನ್ನು ನೀಡಲಾಗಿದೆ. ಪೊನ್ನಂಪೇಟೆ ಕೊಡವ ಸಮಾಜ ಅಧ್ಯಕ್ಷ ಚೊಟ್ಟೆಕ್ಮಾಡ ರಾಜೀವ್ ಬೋಪಯ್ಯ, ಉಪಾಧ್ಯಕ್ಷ ಚೆಪ್ಪುಡಿರ ಬೋಪಣ್ಣ, ನಿರ್ದೇಶಕರಾದ ಚೆಪ್ಪುಡಿರ ರಾಕೇಶ್ ದೇವಯ್ಯ, ಮಲ್ಲಮಾಡ ಪ್ರಭು, ಅಡ್ಡಂಡ ಸುನಿಲ್, ಕೊಡವ ಸಮಾಜದ ಸದಸ್ಯ ಕೊಟೇರ ಕಿಶನ್ ಉತ್ತಪ್ಪ ಇದ್ದರು. ಸಾಯಿಶಂಕರ ಪದವಿಪೂರ್ವ ಕಾಲೇಜು ಪ್ರಾಂಶು ಪಾಲರಾದ ದಶಮಿ, ಬಿಎಎಡ್ ಕಾಲೇಜು ಉಪ ಪ್ರಾಂಶುಪಾಲ ತಿಮ್ಮಯ್ಯ, ಸಿಬ್ಬಂದಿ ರಮ್ಯ ಇದ್ದರು.