ಸುಂಟಿಕೊಪ್ಪ, ನ. 2: ಮಾದಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಬಿ.ಎ. ಮೊಣ್ಣಪ್ಪ (ಸುಬ್ರಮಣಿ) 3ನೇ ಬಾರಿಗೆ ಅಧ್ಯಕ್ಷರಾಗಿ ನೇಮಕಗೊಂಡರೆ, ಉಪಾಧ್ಯಕ್ಷರಾಗಿ ಪಿ.ಪಿ. ತಿಲಕ್ ಕುಮಾರ್ ದ್ವಿತೀಯ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸುಂಟಿಕೊಪ್ಪ, ನ. 2: ಮಾದಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಬಿ.ಎ. ಮೊಣ್ಣಪ್ಪ (ಸುಬ್ರಮಣಿ) 3ನೇ ಬಾರಿಗೆ ಅಧ್ಯಕ್ಷರಾಗಿ ನೇಮಕಗೊಂಡರೆ, ಉಪಾಧ್ಯಕ್ಷರಾಗಿ ಪಿ.ಪಿ. ತಿಲಕ್ ಕುಮಾರ್ ದ್ವಿತೀಯ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅವಿರೋಧವಾಗಿ 3 ನೇ ಬಾರಿಗೆ ಮೊಣ್ಣಪ್ಪ ಉಪಾಧ್ಯಕ್ಷ 2ನೇ ಬಾರಿಗೆ ತಿಲಕ್ ಕುಮಾರ್ ಆಯ್ಕೆಯಾಗಿ ರುವದಾಗಿ ಚುನಾವಣಾಧಿಕಾರಿ ಘೋಷಿಸಿದರು. ಈ ಸಂದರ್ಭ ನಿರ್ದೇಶಕರುಗಳಾದ ನಾಪಂಡ ಉಮೇಶ್ ಉತ್ತಪ್ಪ, ಎನ್.ಸಿ. ಕಾಳಪ್ಪ (ಸಚ್ಚಿ), ಬೆಳ್ಯಪ್ಪ, ಬಿ.ಎಂ. ಧೂಮಪ್ಪ, ಜೂಲಿ ಪೊನ್ನವ್ವ, ರೇಣುಕಮ್ಮ ಕೆ.ಆರ್., ಕೃಷ್ಣಪ್ಪ, ಸಿ.ಎ. ತಮ್ಮಯ್ಯ, ನಳಿನಿ ಪೆಮ್ಮಯ್ಯ, ಕೆ.ಎ. ಲತೀಫ್ ಹಾಗೂ ಎಂ.ವೈ. ಕೇಶವ ಸಹಕಾರ ಸಂಘದ ಕಾರ್ಯನಿರ್ವಾಹಣಾಧಿಕಾರಿ ಬಿ.ಎಸ್. ಕಾವೇರಪ್ಪ ಉಪಸ್ಥಿತರಿದ್ದರು.