ಕೂಡಿಗೆ, ನ. 2: ಕೂಡಿಗೆಯ ಯೂತ್ ಫ್ರೆಂಡ್ಸ್ ಅಸೋಸಿಯೇಷನ್ ವತಿಯಿಂದ ಕನ್ನಡ ರಾಜೋತ್ಸವದ ಪ್ರಯುಕ್ತ, ದಿ. ಹೆಚ್.ಕೆ. ವಿಶ್ವನಾಥ (ವಿಶು) ಜ್ಞಾಪಕಾರ್ಥವಾಗಿ, ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿ ಯನ್ನು ಏಪಾರ್ಡಿಸಲಾಗಿದೆ.
ಪಂದ್ಯಾವಳಿ ತಾ. 17 ಹಾಗೂ 18 ರಂದು ಕೂಡಿಗೆಯ ಸರ್ಕಲ್ ಸಮೀಪದ ಮೈದಾನದಲ್ಲಿ ನಡೆಯ ಲಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಕೆ.ಎ. ಪೀಟರ್ ತಿಳಿಸಿದ್ದಾರೆ. ಪಂದ್ಯದಲ್ಲಿ ವಿಜೇತ ತಂಡಗಳಿಗೆ, ಪ್ರಥಮ ಬಹುಮಾನ ರೂ. 33,333 ಮತ್ತು ಟ್ರೋಫಿ, ದ್ವೀತಿಯ ಬಹುಮಾನ ರೂ. 22,222 ಮತ್ತು ಟ್ರೋಫಿ, ತೃತೀಯ ಬಹುಮಾನ ರೂ. 11,111 ಹಾಗೂ ನಾಲ್ಕನೇ ಬಹುಮಾನ ರೂ. 6,666 ಸೇರಿದಂತೆ ವೈಯಕ್ತಿಕ ಬಹುಮಾನಗಳನ್ನು ನೀಡಲಾಗುವದು. ಮಾಹಿತಿಗೆ ದೂರವಾಣಿ: 9448005719, 8197779129, 7760498938 ಸಂಪರ್ಕಿಸಬಹುದು.