ಆಲೂರು-ಸಿದ್ದಾಪುರ: ಆಲೂರು-ಸಿದ್ದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಸ್.ಜೆ. ಪ್ರಸನ್ನಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಹೆಚ್.ಎಸ್. ವೀಣಾ ತಮ್ಮಯ್ಯ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಆಡಳಿತ ಮಂಡಳಿಯ ನಿರ್ದೇಶಕರಾಗಿ ಹೆಚ್.ಎಸ್. ಸುಂದರೇಶ್, ಎ.ಜಿ. ವಿಜಯ್, ಸಿ.ಕೆ. ದೇವಯ್ಯ, ಪಿ.ಕೆ. ಭರತ್‍ಕುಮಾರ್, ಎಂ.ಸಿ. ಕಾವೇರಪ್ಪ, ಟಿ.ಪಿ. ವಿಜಯ್, ಎಸ್.ಟಿ. ಯಶೋಧ, ಜಾಹ್ನವಿ, ಬಿ.ಇ. ಧರ್ಮಪ್ಪ, ಹೆಚ್.ಕೆ. ಮಲ್ಲೇಶ್ ಹಾಗೂ ಕೆಡಿಸಿಸಿ ಬ್ಯಾಂಕಿನ ಪರವಾಗಿ ಕಿರಿಯ ಮೇಲ್ವಿಚಾರಕ ಎಸ್.ಡಿ. ಶಶಿಕುಮಾರ್ ಚುನಾವಣೆ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾರಿಯಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ಎಂ.ಇ. ಮೋಹನ್ ಕಾರ್ಯನಿರ್ವಹಿಸಿದ್ದರು.

ಚೇರಂಬಾಣೆ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಭಾರತೀಯ ಜನತಾ ಪಕ್ಷದ ಬೆಂಬಲಿತ ಅಭ್ಯರ್ಥಿ ಬಾಚರಣಿಯಂಡ ಪಿ. ಸುಮನ್, ಉಪಾಧ್ಯಕ್ಷರಾಗಿ ಪೊಡನೊಳನ ಶ್ರೀನಿವಾಸ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಯ್ಯಂಡ ಸತೀಶ್ ಬೆಳ್ಳಿಯಪ್ಪ, ಬಾಚರಣಿಯಂಡ ಗಣಪತಿ (ದಿನೇಶ್), ಕೂರನ ಕಿಶೋರ್ ಕುಮಾರ್, ಕೇಕಡ ಸುಗುಣ, ಕೂರನ ಸುಶೀಲಾ, ಪಟ್ಟಮಾಡ ಲೈಲಾ, ಚೇತಕ್ ಟಿ.ಎಸ್., ಎನ್.ಸಿ. ಜೀವನ್, ಎ.ಎ. ದೇವಯ್ಯ, ಎಂ.ಕೆ. ವಸಂತ, ಸರಸು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಮೂರ್ನಾಡು: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪುದಿಯೊಕ್ಕಡ ಮಧುಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಈರಮಂಡ ಸೋಮಣ್ಣ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಪಳಂಗಂಡ ಪೂವಯ್ಯ, ಬಿಳಿಯರ ತಿಮ್ಮಯ್ಯ, ಕೋಟೆರ ರಷ್ಯ ಮೇದಪ್ಪ, ಪಳಂಗಂಡ ಗಣೇಶ್, ಮೂಡೇರ ಅಶೋಕ್ ಅಯ್ಯಪ್ಪ, ಮೇಚಿರ ನಾಣಯ್ಯ, ಮುಕ್ಕಾಟಿರ ಸೀತವ್ವ, ಪಾರೇರ ಸೀತಮ್ಮ ಹಾಗೂ ಪಿ.ಕೆ. ಪುಟ್ಟು ಅವರುಗಳು ಜಯಗಳಿಸಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಪಿ.ಬಿ. ಮೋಹನ್ ಘೋಷಿಸಿದರು. ಈ ಸಂದರ್ಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಎಂ. ಗಣಪತಿ ಹಾಜರಿದ್ದರು.