ಸುಂಟಿಕೊಪ್ಪ, ನ. 1: ಇಲ್ಲಿನ ಆಟೋ ರಿಕ್ಷಾ ಚಾಲಕರ ಮತ್ತು ಮಾಲೀಕರ ಸಂಘದ ನೂತನ ಅಧ್ಯಕ್ಷರಾಗಿ ಬಿ.ಕೆ.ಪ್ರಶಾಂತ್ ಕುಮಾರ್ (ಕೋಕ) ಆಯ್ಕೆಗೊಂಡಿದ್ದಾರೆ.
ಸಂಘದ ಕಚೇರಿಯಲ್ಲಿ ಅಧ್ಯಕ್ಷ ಸಂತೋಷ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು.
ಉಪಾಧ್ಯಕ್ಷರಾಗಿ ನವಿದ್, ಎನ್. ಮಂಜೇಶ್, ಕಾರ್ಯದರ್ಶಿಯಾಗಿ ಜೇಮ್ಸ್ ಡಿಸೋಜಾ, ಸಹ ಕಾರ್ಯದರ್ಶಿಯಾಗಿ ವಿ.ಪಿ. ಶಿವಕುಮಾರ್, ಖಜಾಂಚಿಯಾಗಿ ಧನಂಜಯ, ಗೌರವಾಧ್ಯಕ್ಷರಾಗಿ ಎಂ. ಸೋಮಯ್ಯ, ಸಂತೋಷ್ ಪೂಜಾರಿ, ಸಲಹೆಗಾರರಾಗಿ ಶರೀಫ್, ರಜನಿ, ನಾರಾಯಣ, ಬಿ.ಎಲ್. ವಿಶ್ವನಾಥ್ ಸೇರಿದಂತೆ 16 ಮಂದಿಯ ಕಾರ್ಯಕಾರಿ ಸಮಿತಿಯನ್ನು ಸರ್ವಾನುಮತಗಳಿಂದ ನೇಮಕ ಮಾಡಲಾಯಿತು.
ಗಣರಾಜ್ಯೋತ್ಸವದ ಅಂಗವಾಗಿ ಸಂಘದ ವತಿಯಿಂದ ನಡೆಯುವ ಡ್ಯಾನ್ಸ್ ಮೇಳ ಕಾರ್ಯಕ್ರಮ ಯಶಸ್ವಿಯಾಗಲು ಎಲ್ಲರೂ ಕೈಜೋಡಿಸಬೇಕು ಎಂದು ನಿರ್ಧರಿಸಲಾಯಿತು.