ನಾಪೆÇೀಕ್ಲು, ನ. 3: ಸಮೀಪದ ಕಕ್ಕಬ್ಬೆ ಪಟ್ಟಣದಲ್ಲಿ ಕಕ್ಕಬ್ಬೆ ದಿ ಹೈಲ್ಯಾಂಡರ್ಸ್ ಫ್ಯಾಮಿಲಿ ಕ್ಲಬ್, ಕಕ್ಕಬ್ಬೆ ಟೂರಿಸಂ ಫೋರಂ, ಕೊಡಗು ಫಾರ್ ಟುಮಾರೊ, ಮಾದಾಪುರದ ರೆಸ್ಕ್ಯೂ ತಂಡ, ದುಬಾರೆ ರ್ಯಾಫ್ಟಿಂಗ್ ತಂಡ, ಮೈಸೂರು ವಿದ್ಯಾಶ್ರಮ ಶಾಲೆ, ಕುಂಜಿಲದ ಆಕ್ಸ್‍ಫರ್ಡ್ ವಿದ್ಯಾಸಂಸ್ಥೆ, ಕೆ.ಪಿ. ಬಾಣೆಯ ಸರಕಾರಿ ಪ್ರಾಥಮಿಕ ಶಾಲೆ ಹಾಗೂ ವೀರಾಜಪೇಟೆ ದಂತ ವೈದ್ಯ ಕಾಲೇಜಿನ ಸಹಯೋಗದಲ್ಲಿ ಕಕ್ಕಬ್ಬೆ ಪಟ್ಟಣ ಮತ್ತು ಕಕ್ಕಬ್ಬೆ ಹೊಳೆ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ, ನಮ್ಮ ನೆಲ, ನಮ್ಮ ಜಲ, ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವದು ನಮ್ಮೆಲ್ಲರ ಕರ್ತವ್ಯ. ಸಾರ್ವಜನಿಕರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನಕ್ಕೆ ವಿವಿಧ ಸಂಘ ಸಂಸ್ಥೆಗಳು ಸ್ವಇಚ್ಛೆಯಿಂದ ಕೈಜೋಡಿಸಿವೆ. ಮೊದಲ ಬಾರಿಗೆ ಈ ಸ್ವಚ್ಛತಾ ಆಂದೋಲನವನ್ನು ನಾವೆಲ್ಲರು ಸೇರಿ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಪಟ್ಟಣದ ವರ್ತಕರು, ಮನೆ ಮಾಲಿಕರು ತಮ್ಮ ಸುತ್ತಮುತ್ತಲಿನ ಸ್ವಚ್ಛತೆಯ ಬಗ್ಗೆ ಗಮನಹರಿಸಬೇಕು ಎಂದರು.

ಈ ಸಂದರ್ಭದಲ್ಲಿ ಕಕ್ಕಬ್ಬೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರ್ತಂಡ ಶೈಲಾ ಕುಟ್ಟಪ್ಪ, ಸ್ಥಳೀಯರಾದ ಅಪ್ಪಾರಂಡ ಸಾಗರ್, ಕೋಟೆರ ಸುರೇಶ್ ಚಂಗಪ್ಪ, ಪೆÇನ್ನೋಲತಂಡ ಕಾವೇರಪ್ಪ, ಕಲ್ಯಾಟಂಡ ಗಿರೀಶ್ ಸುಬ್ಬಯ್ಯ, ಕಲ್ಯಾಟಂಡ ರಘು ತಮ್ಮಯ್ಯ, ಅಪ್ಪಾರಂಡ ನಂಜಪ್ಪ, ಅಪ್ಪಾರಂಡ ಪ್ರಕಾಶ್, ಕಲಿಯಂಡ ಸುನಂದ, ಸಂಪನ್ ಅಯ್ಯಪ್ಪ, ಗಿರೀಶ್, ನವೀನ್, ಅಂಜಪರವಂಡ ಕುಶಾಲಪ್ಪ, ದುಬಾರೆ ರ್ಯಾಫ್ಟಿಂಗ್ ತಂಡದ ಮುಖ್ಯಸ್ಥ ಮುರಳಿ, ಕೊಡಗು ಫಾರ್ ಟುಮಾರೊÀ ಮುಖ್ಯಸ್ಥ ಕಾವೇರಪ್ಪ, ಮೈಸೂರು ವಿದ್ಯಾಶ್ರಮ ಶಾಲೆಯ ಪ್ರಾಂಶುಪಾಲೆ ಖುಷಿ, ಪೆÇನ್ನೋಲತಂಡ ರಘು ಚಿಣ್ಣಪ್ಪ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಉಸ್ಮಾನ್, ಸದಸ್ಯರು, ಸಾರ್ವಜನಿಕರು ಪಾಲ್ಗೊಂಡಿದ್ದರು.